ಚಳಿಗಾಲದ ಸೋಮಾರಿತನಕ್ಕೆ ಗುಡ್​ ಬೈ ಹೇಳಿ.. ನಿಮ್ಮ ದೇಹಕ್ಕೆ ಚೈತನ್ಯ ನೀಡಲಿವೆ ಈ ಪದಾರ್ಥಗಳು | Winter Comfort Foods

ಗಜ್ಜರಿ ಹಲ್ವಾ
ಗಜ್ಜರಿ ಹಲ್ವಾ
Published on
Winter Warmers: India’s Comfort Foods For The Cold Season

ಗಜ್ಜರಿ ಹಲ್ವಾ

ಚಳಿಗಾಲದಲ್ಲಿ ಸಿಗುವ ತಾಜಾ ಕೆಂಪು ಕ್ಯಾರೆಟ್‌ಗಳಿಂದ ಇದನ್ನು ತಯಾರಿಸಲಾಗುತ್ತದೆ. ಕ್ಯಾರೆಟ್, ಹಾಲು, ಸಕ್ಕರೆ ಮತ್ತು ತುಪ್ಪದ ಈ ಸಮ್ಮಿಶ್ರಣವು ವಿಟಮಿನ್ ಎ ಇಂದ ಸಮೃದ್ಧವಾಗಿದೆ. ಇದು ದೇಹಕ್ಕೆ ತಕ್ಷಣದ ಶಕ್ತಿ ನೀಡುವುದಲ್ಲದೆ, ಚಳಿಗಾಲದ ಸಿಹಿ ಬಯಕೆಯನ್ನು ತಣಿಸುತ್ತದೆ.
Winter Warmers: India’s Comfort Foods For The Cold Season

ಮಸಾಲಾ ಚಾಯ್

ಶುಂಠಿ, ಏಲಕ್ಕಿ, ಲವಂಗ ಮತ್ತು ಕರಿಮೆಣಸಿನಿಂದ ತಯಾರಿಸಿದ ಈ ಚಹಾ ಚಳಿಗಾಲದ ಸಂಜೆಗೆ ಬೆಸ್ಟ್​. ಇದು ಗಂಟಲಿನ ಸೋಂಕನ್ನು ತಡೆಯುತ್ತದೆ ಮತ್ತು ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
Winter Warmers: India’s Comfort Foods For The Cold Season

ರಾಗಿ ಮುದ್ದೆ

ರಾಗಿಯು ಕಬ್ಬಿಣ ಮತ್ತು ಕ್ಯಾಲ್ಸಿಯಂನ ಆಗರವಾಗಿದ್ದು, ಬಿಸಿ ಬಿಸಿ ರಾಗಿ ಮುದ್ದೆಯನ್ನು ಸೊಪ್ಪಿನ ಸಾರಿನೊಂದಿಗೆ ಸೇವಿಸಿದರೆ, ಅದು ಇಡೀ ದಿನ ದೇಹವನ್ನು ಚೈತನ್ಯದಿಂದ ಇರಿಸುತ್ತದೆ ಮತ್ತು ದೇಹಕ್ಕೆ ಕಾವು ನೀಡುತ್ತದೆ.
Winter Warmers: India’s Comfort Foods For The Cold Season

ಪಾಯಾ ಸೂಪ್

ಪಾಯಾ ಸೂಪ್ (Hot Soups): ಮೂಳೆಗಳ ಸಾರವನ್ನು ಹೊಂದಿರುವ ಪಾಯಾ ಸೂಪ್ ಅಥವಾ ತಾಜಾ ತರಕಾರಿಗಳ ಬಿಸಿ ಸೂಪ್‌ಗಳು ದೇಹಕ್ಕೆ ಪ್ರೋಟೀನ್ ಒದಗಿಸುತ್ತವೆ. ಇದು ಚಳಿಗಾಲದ ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ರಾಮಬಾಣ.
Winter Warmers: India’s Comfort Foods For The Cold Season

ಬಿಸಿಬೇಳೆ ಬಾತ್

ಭಾರತದ ಬಹುತೇಕ ಮನೆಗಳಲ್ಲಿ ಕಿಚಡಿ ಅಥವಾ ಬಿಸಿಬೇಳೆ ಬಾತ್ ಚಳಿಗಾಲದ ಮೊದಲ ಆಯ್ಕೆ. ಅಕ್ಕಿ, ಬೇಳೆ ಮತ್ತು ತುಪ್ಪದ ಮಿಶ್ರಣವು ಸುಲಭವಾಗಿ ಜೀರ್ಣವಾಗುವುದಲ್ಲದೆ, ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಬಿಸಿಬೇಳೆ ಬಾತ್‌ಗೆ ಹಾಕುವ ಮಸಾಲೆಗಳು ದೇಹದ ಉಷ್ಣತೆಯನ್ನು ಕಾಪಾಡುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net