ಪ್ಲಾಸ್ಟಿಕ್​ನಲ್ಲಿ ಆಹಾರ ಸ್ಟೋರ್​ ಮಾಡುವ ಅಭ್ಯಾಸ ಇದ್ಯಾ?; ಈ ಪದಾರ್ಥ ತಪ್ಪಿಗೂ ಇಡಬೇಡಿ, ಅಪಾಯ ಫಿಕ್ಸ್​..Plastic Container

 ಪ್ಲಾಸ್ಟಿಕ್​ನಲ್ಲಿ  ಆಹಾರ ಸ್ಟೋರ್​ ಮಾಡುವ ಅಭ್ಯಾಸ ಇದ್ಯಾ?; ಈ ಪದಾರ್ಥ ತಪ್ಪಿಗೂ ಇಡಬೇಡಿ, ಅಪಾಯ ಫಿಕ್ಸ್​..Plastic Container
Published on: 

ನಾವು ಪ್ಲಾಸ್ಟಿಕ್​ ವಸ್ತುಗಳಿಗೆ ಒಗ್ಗಿಕೊಂಡಿದ್ದೇವೆ. ಆಫೀಸಿಗೆ ಟಿಫಿನ್​ ಬಾಕ್ಸ್​​ , ಉಳಿದ ಆಹಾರ ಫ್ರಿಡ್ಜ್​ನಲ್ಲಿ ಇಡಲು, ದಿನಸಿ ಸ್ಟೋರ್ ಮಾಡಲು ಎಲ್ಲದಕ್ಕೂ ಪ್ಲಾಸ್ಟಿಕ್​​ ಖಾಯಂ. ಸ್ಟೀಲ್​ಗಿಂತ ಪ್ಲಾಸ್ಟಿಕ್​ ಕಡಿಮೆಗೆ ದಕ್ಕುತ್ತವೆ ಎಂದು ನಾವು ಹೆಚ್ಚು ಕೊಂಡುಕೊಳ್ಳುತ್ತೇವೆ. ಆದರೆ, ಕೆಲವೊಂದು ಆಹಾರ ಪದಾರ್ಥವನ್ನು ಪ್ಲಾಸ್ಟಿಕ್​ನಲ್ಲಿ ಇಡುವುದು ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿರುವ ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್‌ ಎನ್ನುವ ಅಂಶವೂ ದೇಹಕ್ಕೆ ಸೇರಿಕೊಂಡು ವಿವಿಧ ವೈರಲ್​ ಕಾಯಿಲೆಯನ್ನು ಹುಟ್ಟುಹಾಕುತ್ತದೆ.

ಹಾಗಾದ್ರೆ ಇನ್ಮುಂದೆ ಯಾವ ಆಹಾರವನ್ನು ನೀವು ಪ್ಲಾಸ್ಟಿಕ್​ನಲ್ಲಿಡಬಹುದು. ಯಾವುದನ್ನು ಶೇಖರಣೆ ಮಾಡುವಂತಿಲ್ಲ. ಯಾವ ಆಹಾರ ಶೇಖರಣೆ ಮಾಡಿದರೆ ಆರೋಗ್ಯದ ಮೇಲೆ ಬೀರುವ ಪರಿಣಾಮ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಹುಳಿ ಆಹಾರ ಸ್ಟೋರೇಜ್​ಗೆ ಪ್ಲಾಸ್ಟಿಕ್ ಬೇಡ

ಉಪ್ಪಿನಕಾಯಿ, ಹುಣಸೆ, ವಿನೇಗರ್ ಸೇರಿದಂತೆ ಹುಳಿ ಪದಾರ್ಥವನ್ನು ಎಂದಿಗೂ ಪ್ಲಾಸ್ಟಿಕ್​ನಲ್ಲಿ ಸ್ಟೋರ್​ ಮಾಡಬೇಡಿ. ಇದರಲ್ಲಿರುವ ಆಮ್ಲೀಯ ಅಂಶವು ಪ್ಲಾಸ್ಟಿಕ್​ನೊಂದಿಗೆ ರಿಯಾಕ್ಟ್​ ಮಾಡುವ ಮೂಲಕ ದೇಹಕ್ಕೆ ಸೇರಿ ನಿಮಗೆ ಆರೋಗ್ಯದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಪ್ಲಾಸ್ಟಿಕ್​ ಬದಲಿಗೆ ಮಣ್ಣಿನ ಪಿಂಗಾಣಿ, ಸೆರಾಮಿಕ್​ ಬಳಕೆ ಮಾಡುವುದು ಸೂಕ್ತ.

ಬಿಸಿ ಆಹಾರ ಪ್ಲಾಸ್ಟಿಕ್​ನಲ್ಲಿಡಬೇಡಿ

ಬಿಸಿ ಆಹಾರವನ್ನು ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ಇಡಕೂಡದು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಆದರೆ, ವಿಧಿಯಿಲ್ಲದೆ ಕೆಲವರು ಪ್ಲಾಸ್ಟಿಕ್​ನಲ್ಲಿಯೇ ಆಫೀಸು, ಕಾಲೇಜು, ಶಾಲೆಗೆ ಆಹಾರ ಕೊಂಡೊಯ್ಯುತ್ತಾರೆ. ಬಿಸಿಗೆ ರಾಸಾಯನಿಕ ಕರಗಿ ಆಹಾರಕ್ಕೆ ಇಳಿಯುವ ಮೂಲಕ ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಹೀಗಾಗಿ ಪ್ಲಾಸ್ಟಿಕ್ ಅವಾಯ್ಡ್ ಮಾಡಿ.

ಎಣ್ಣೆಯುಕ್ತ ಆಹಾರ

ಎಣ್ಣೆಯುಕ್ತ ಆಹಾರವನ್ನು ಪ್ಲಾಸ್ಟಿಕ್​ ಡಬ್ಬದ ಬದಲಾಗಿ ಸ್ಟೀಲ್​ ಪಾತ್ರೆ ಅಥವಾ ಬಾಟಲ್​ನಲ್ಲಿ ಸ್ಟೋರ್​ ಮಾಡುವುದು ಸೂಕ್ತ. ಇದರಿಂದ ಹೊರಡುವ ಜಿಡ್ಡು ದೀರ್ಘಕಾಲದವರೆಗೂ ಕ್ಯಾರಿ ಮಾಡುವುದು ಸೂಕ್ತವಲ್ಲ. ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಸಾಲೆ ಐಟಂ ಸ್ಟೋರ್ ಮಾಡ್ಬೇಡಿ

ಮಸಾಲೆ ಪೌಡರ್​ಗಳು, ಪದಾರ್ಥವನ್ನು ಸ್ಟೋರ್​ ಮಾಡುವುದು ಸರಿಯಲ್ಲ. ಒಂದು ಈ ಮಸಾಲೆಯು ತನ್ನ ರುಚಿಯನ್ನು ಕಳೆದುಕೊಳ್ಳಬಹುದು. ಮತ್ತೊಂದು ಪ್ಲಾಸ್ಟಿಕ್​ನಲ್ಲಿರುವ ರಾಸಾಯನಿಕವು ಮಸಾಲೆಯೊಂದಿಗೆ ರಿಯಾಕ್ಟ್​ ಮಾಡಿ ನಮ್ಮ ಆಹಾರ ಮೂಲಕ ದೇಹಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಸಾಲೆಯನ್ನು ಪ್ಲಾಸ್ಟಿಕ್​ನಲ್ಲಿ ಇಡಬೇಡಿ.

ಯಾವುದು ಬೆಸ್ಟ್​

ಪ್ಲಾಸ್ಟಿಕ್​ ಬದಲಾಗಿ ಇತ್ತೀಚೆಗೆ ಮತ್ತೆ ಟ್ರೆಂಡ್​ನಲ್ಲಿರುವ ಮಡಿಕೆ, ಸ್ಟೀಲ್​ ಪಾತ್ರೆಗಳನ್ನು ಬಳಕೆ ಮಾಡುವುದು ಹೆಚ್ಚು ಬೆಸ್ಟ್​ ಇಲ್ಲದಿದ್ದರೆ, ಗಾಜು ಅಥವಾ ಸೆರಾಮಿಕ್​​ನಿಂದ ತಯಾರಿಸಲಾದ ಪಾತ್ರೆ ಬಳಕೆ ಮಾಡಿ. ಪ್ಲಾಸ್ಟಿಕ್​ಗಳಿಗಿಂತ ಇವು ಉತ್ತಮ.

ಪ್ಲಾಸ್ಟಿಕ್​ ಬದಲಾವಣೆ ಯಾವಾಗ ಮಾಡ್ಬೇಕು

ಪ್ಲಾಸ್ಟಿಕ್​​ ಬಳಕೆ ಸುದೀರ್ಘವಾಗಿ ಇಟ್ಟುಕೊಳ್ಳಬೇಡಿ. ಅದರ ಮೇಲೆ ಜಿಡ್ಡು, ಗೀಟು ಹಾಳಾದ ತಕ್ಷಣ ಅಥವಾ ಒಂದು ಮೂರು ವರ್ಷಕ್ಕೊಮ್ಮೆ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net