ತಲೆಹೊಟ್ಟು, ಕೂದಲು ಉದುರುವಿಕೆಗೆ ಬೇಸತ್ತಿದ್ದೀರಾ?; ನೆನೆಸಿಟ್ಟ ಮೆಂತ್ಯೆ-ಅಕ್ಕಿ ನೀರು ಟ್ರೈ ಮಾಡಿ, 7 ದಿನದಲ್ಲಿ ಸಿಗುತ್ತೆ ರಿಸಲ್ಟ್!..Hair Care Tips

ತಲೆಹೊಟ್ಟು, ಕೂದಲು ಉದುರುವಿಕೆಗೆ ಬೇಸತ್ತಿದ್ದೀರಾ?; ನೆನೆಸಿಟ್ಟ ಮೆಂತ್ಯೆ-ಅಕ್ಕಿ ನೀರು ಟ್ರೈ ಮಾಡಿ, 7 ದಿನದಲ್ಲಿ ಸಿಗುತ್ತೆ ರಿಸಲ್ಟ್!..Hair Care Tips
Published on: 

ಮುಂಗಾರು ಮತ್ತು ಚಳಿಗಾಲದಲ್ಲಿ ತೇವಾಂಶದಿಂದಾಗಿ ತಲೆ ಕೂದಲು ಜಿಡ್ಡು ಗಟ್ಟುವುದು, ಫ್ರಿಜ್ಜಿಯಾಗುವುದು. ತುರಿಕೆ, ಡ್ಯಾಂಡ್ರಾಫ್​ ಸಮಸ್ಯೆ ಕಾಡೋದು ಸಹಜ. ಇದಕ್ಕೆ ದುಬಾರಿ ಹಣ ಕೊಟ್ಟು ಪಾರ್ಲರ್​ನಲ್ಲಿ ಹೇರ್​ ಸ್ಪಾ ಮಾಡಿಸಿಕೊಳ್ಳುವ ಬದಲಾಗಿ ಮನೆಯಲ್ಲಿಯೇ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ನಿಮ್ಮ ಕೇಶವನ್ನು ಕಾಪಾಡಿಕೊಳ್ಳಬಹುದಾಗಿದೆ. ಜೊತೆಗೆ ತಿಂಗಳಾಂತ್ಯದಲ್ಲಿ ಹಣ ಇಲ್ಲ ಎಂದು ಒದ್ದಾಡುವ ಅಗತ್ಯವಿರುವುದಿಲ್ಲ

ಕೊರಿಯನ್​ ಕೂದಲಿನ ಆರೈಕೆ ಎಂದರೆ ಅಕ್ಕಿ ಹಾಗೂ ಮೆಂತ್ಯೆ ನೀರನ್ನು ನೆನೆಸಿ ಕೂದಲಿಗೆ ಕಂಡೀಶನರ್​​ನಂತೆ ಸಿಂಪಡಿಸಿಕೊಳ್ಳುವುದು. ಇದರಿಂ ನಿಮ್ಮ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯುತ್ತದೆ. ಉದ್ದ ಮತ್ತು ದಪ್ಪದಾಗಿ ಕೂದಲನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು. ಮನೆಯಲ್ಲಿಯೇ ಸಿಗುವ ಅಕ್ಕಿ ನೀರು ಹಾಗೂ ಮೆಂತ್ಯೆ ಕಾಳಿನಿಂದ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳೋದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಅಕ್ಕಿ ನೀರಿನಿಂದ ಕೂದಲಿಗೆ ಸಿಗುವ ಪ್ರಯೋಜನ

ಅಕ್ಕಿ ನೆನಸಿಟ್ಟ ನೀರಿನಲ್ಲಿ ವಿಟಮಿನ್​ ಬಿ, ಇ ಹಾಗೂ ಅಮೈನೋ ಆಮ್ಲಗಳು ಮತ್ತು ಇನೋಸಿಟಾಲ್​​ ಸಮೃದ್ಧವಾಗಿದೆ. ಇದು ಹಾನಿಗೊಳಗಾದ ಕಿರುಚೀಲಗಳನ್ನು ಬಲಪಡಿಸಿ ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಬಲ ನೀಡುವ ಮೂಲಕ ಒಡೆಯುವುದನ್ನು ಇದು ತಡೆಯುತ್ತದೆ.

ಮೆಂತ್ಯೆ ನೀರು

ಮೆಂತ್ಯೆಯಲ್ಲಿ ಕಬ್ಬಿಣ ಪ್ರೋಟೀನ್​, ನಿಕೋಟಿನ್​ ಆಮ್ಲ ಇದೆ. ಇದು ತಲೆ ಹೊಟ್ಟು ಕಡಿಮೆ ಮಾಡಲು, ತುರಿಕೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಸಹಾಯ ಮಾಡುತ್ತದೆ.

ಮೆಂತ್ಯೆ- ಅಕ್ಕಿ ನೀರನ್ನು ತಯಾರಿಸಿಕೊಳ್ಳುವ ವಿಧಾನ

ಅರ್ಧ ಕಪ್ ಅಕ್ಕಿಯನ್ನು​ ನೆನಸಿಡಿ. ಈಗ 2 ಚಮಚ ಮೆಂತ್ಯೆಯನ್ನು ಪ್ರತ್ಯೇಕವಾಗಿ ನೆನಸಿಡಿ. 2 ಕಪ್​ ನೀರು ಹಾಕಿಡಿ. 24 ಗಂಟೆ ನೆನಸಿಟ್ಟ ನೀರನ್ನು ಸೇರಿಸಿ ಒಂದು ಸ್ಪ್ರೇ ಬಾಟಲ್​ಗೆ ಹಾಕಿ ಫ್ರಿಜ್​ನಲ್ಲಿ ಇಡಿ.

ಬಳಕೆ ಮಾಡುವ ವಿಧಾನ

ಕೂದಲಿನ ಆರೋಗ್ಯಕ್ಕಾಗಿ ಎಲ್ಲ ರೀತಿಯ ಕ್ರೀಮ್​ಗಳನ್ನು ಬಳಕೆ ಮಾಡಿರುತ್ತೇವೆ. ಆದರೂ ಯಾವುದೇ ಫಲಕಾರಿ ಪ್ರಯೋಜನವಂತೂ ಸಿಕ್ಕಿರೋದಿಲ್ಲ. ಆ ಕಾರಣದಿಂದಾಗಿ ನೈಸರ್ಗಿಕವಾಗಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೆಂತ್ಯೆ ಅಕ್ಕಿ ನೀರನ್ನು ಬಳಸಿ. ತಲೆಗೆ ಸ್ನಾನ ಮಾಡುವ ಅರ್ಧ ಗಂಟೆ ಮೊದಲು ನೆತ್ತಿಗೆ ಈ ನೀರನ್ನು ಸಿಂಪಡಿಸಿ. ನಂತರ ಶಾಂಪು ಬಳಕೆ ಮಾಡಿ ತಲೆ ತೊಳೆದುಕೊಳ್ಳಿ ವಾರಕ್ಕೆ 2ರಿಂದ ಮೂರು ದಿನ ಈ ಟ್ರಿಕ್ಸ್​ ಬಳಕೆ ಮಾಡಿ. ಈ ನೈಸರ್ಗಿಕ ಹೇರ್​​​​​​​​ ಕೇರ್​ ನಿಮ್ಮ ಕೂದಲನ್ನು ಹೈಡ್ರೇಟ್​ ಆಗಿ ಇಟ್ಟುಕೊಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net