MouniRoy: ನಾಗಿನಿ ಹಾಗೂ ದೇವೊಂಕೆ ದೇವ್ ಮಹಾದೇವ್ ಧಾರಾವಾಹಿಗಳ ಮೂಲಕ ಜನರ ಅಪಾರ ಪ್ರೀತಿ ಪಡೆದ ನಟಿ ಎಂದರೆ ಅದು ಮೌನಿ ರಾಯ್ ಆಗಿದ್ದಾರೆ. ನಂತರ ಇವರು ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅಂತೆಯೇ, ಕೆ.ಜಿ.ಎಫ್ 2 ನ ಗಲಿ ಗಲಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡದ ಪ್ರೇಕ್ಷಕರನ್ನು ಕೂಡ ತಲುಪಿದ್ದರು.
ಇತ್ತೀಚೆಗೆ ಮೌನಿ ರಾಯ್, ಖ್ಯಾತ ಜಗನ್ನಾಥ್ ಪುರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿಯ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ಅಭಿಮಾನಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.