
ಮನೆಯಲ್ಲಿಯೇ ರೊಟ್ಟಿ, ಉಪ್ಪಿನಕಾಯಿ, ಮಸಾಲೆ ಪುಡಿ, ತಿಂಡಿಗಳು, ಸಿಹಿ ಪದಾರ್ಥಗಳು ಸೇರಿದಂತೆ ಅನೇಕ ವಿಧವಾದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇದರಿಂದ ಸ್ಥಳೀಯ ಗ್ರಾಹಕರು, ಪರಿಚಯಸ್ಥರು ಮತ್ತು ಆನ್‌ಲೈನ್ ಮೂಲಕ ಆರ್ಡರ್ ಪಡೆಯುವ ದೊಡ್ಡ ಅವಕಾಶ ಒದಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಟೈಲರಿಂಗ್ ಮಾಡುವವರಿಗೆ ತುಂಬಾ ಬೇಡಿಕೆ ಉಂಟಾಗಿದೆ. ಹೊಲಿಗೆ ಕೌಶಲ್ಯವಿದ್ದರೆ ಮನೆಯಿಂದಲೇ ಟೈಲರಿಂಗ್ ಕೆಲಸ ಆರಂಭಿಸಬಹುದು. ಬ್ಲೌಸ್ ಹೊಲಿಗೆ, ಮಕ್ಕಳ ಬಟ್ಟೆ ಹಾಗೂ ಸರಳ ವಿನ್ಯಾಸದ ಉಡುಪುಗಳಿಗೆ ಬೇಡಿಕೆ ಬರುತ್ತದೆ.
ಮೇಣದ ಬತ್ತಿ, ಅಲಂಕಾರಿಕ ವಸ್ತುಗಳು, ಗಿಫ್ಟ್ ಐಟಂಗಳು, ಮರದ ಎಲೆಯ ತಟ್ಟೆಗಳು, ಕೈಯಿಂದ ತಯಾರಿಸಿದ ಕ್ರಾಫ್ಟ್ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಮದುವೆ, ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳಿಗೆ ವೈಯಕ್ತಿಕ ವಿನ್ಯಾಸದ ವಸ್ತುಗಳಿಗೆ ಅಪಾರ ಬೇಡಿಕೆ ಇದೆ.
ಸಣ್ಣ ಪ್ರಮಾಣದಲ್ಲಿ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಅಥವಾ ಮನೆಯಲ್ಲೇ ಬೆಳೆಸಬಹುದಾದ ಸಸ್ಯಗಳನ್ನು ಮಾರಾಟ ಮಾಡುವುದರಿಂದ ಉದ್ಯಮ ಆರಂಭಿಸಬಹುದು. ಸಸಿಗಳ ಜೊತೆ ಕುಂಡ ಮತ್ತು ಗಾರ್ಡನ್ ಪರಿಕರಗಳನ್ನೂ ಮಾರಾಟ ಮಾಡಬಹುದು.
ಇಂದು ಪ್ರತಿಯೊಂದು ಕೆಲಸಕ್ಕೂ ಆನ್‌ಲೈನ್ ಅನ್ನು ಹೆಚ್ಚು ಅವಲಂಬಿಸುವಂತೆ ಆಗಿದೆ. ಸರ್ಕಾರಿ ಅರ್ಜಿಗಳು, ಬರಹ, ಭಾಷಾಂತರ, ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಸಾಮಾಜಿಕ ಜಾಲತಾಣ ನಿರ್ವಹಣೆ ಮುಂತಾದ ಸೇವೆಗಳನ್ನು ಒದಗಿಸಬಹುದು.