ಹವಾಮಾನ ವೈಪರೀತ್ಯದ ನಡುವೆಯೂ ಫಿಟ್ ಆಗಿರಲು ಇಲ್ಲಿದೆ ನೈಸರ್ಗಿಕ ಮಂತ್ರ!

ಹವಮಾನ ಬದಲಾವಣೆ
ಹವಮಾನ ಬದಲಾವಣೆ
Published on
Weather Change

ಹವಮಾನ ಬದಲಾವಣೆ

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಹವಮಾನದಲ್ಲಿ ಪದೇ ಪದೇ ಏರುಪೇರಾಗುತ್ತಿರುತ್ತದೆ. ಕಡು ಬಿಸಿಲು, ಇದ್ದಕ್ಕಿದ್ದಂತೆ ಮಳೆ ಅಥವಾ ಚಳಿ ಹೀಗೆ ಹವಮಾನ ವ್ಯತ್ಯಾಸವಾಗುವಾಗ ನಮ್ಮ ರೋಗನಿರೋಧಕ ಶಕ್ತಿ ಕುಸಿದು ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳು ಕಾಡುವುದು ಸಹಜ.
Weather Change

ಉಗುರು ಬೆಚ್ಚಗಿನ ನೀರು

ದಿನವಿಡೀ ಧಾರಾಳವಾಗಿ ನೀರು ಕುಡಿಯಿರಿ. ಹವಮಾನ ಏರುಪೇರಾಗುವಾಗ ತಣ್ಣೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲು ಮತ್ತು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.
Weather Change

ರೋಗನಿರೋಧಕ ಆಹಾರ

ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆ ಹಾಗೂ ಪಪ್ಪಾಯದಂತಹ ಹಣ್ಣುಗಳನ್ನು ಸೇರಿಸಿ. ಅಡುಗೆಯಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನದ ಬಳಕೆ ಹೆಚ್ಚಿರಲಿ.
Weather Change

ತಾಜಾ ಆಹಾರ ಸೇವನೆ

ಹವಾಮಾನ ಬದಲಾಗುವಾಗ ಬ್ಯಾಕ್ಟೀರಿಯಾಗಳು ಬೇಗನೆ ಹರಡುವುದರಿಂದ ಫ್ರಿಡ್ಜ್‌ನಲ್ಲಿಟ್ಟ ತಂಪು ಅಥವಾ ಹಳಸಿದ ಆಹಾರವನ್ನು ತಪ್ಪಿಸಿ. ಯಾವಾಗಲೂ ಮನೆಯಲ್ಲೇ ಮಾಡಿದ ಬಿಸಿಬಿಸಿಯಾದ ತಾಜಾ ಆಹಾರವನ್ನೇ ಸೇವಿಸಿ.
Weather Change

ಉತ್ತಮ ನಿದ್ದೆ ಮತ್ತು ವಿಶ್ರಾಂತಿ

ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. ಇದು ದೇಹದ ಜೀವಕೋಶಗಳನ್ನು ಪುನಶ್ಚೇತನಗೊಳಿಸಿ, ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net