ಬ್ಯಾಚುಲರ್ಸ್​​ಗಾಗಿ Food Recipe; ಹತ್ತೇ ನಿಮಿಷದಲ್ಲಿ ತಯಾರಿಸಿ ತರಕಾರಿ ಶ್ಯಾವಿಗೆ ಉಪ್ಪಿಟ್ಟು

ಬ್ಯಾಚುಲರ್ಸ್​​ಗಾಗಿ Food Recipe; ಹತ್ತೇ ನಿಮಿಷದಲ್ಲಿ ತಯಾರಿಸಿ ತರಕಾರಿ ಶ್ಯಾವಿಗೆ ಉಪ್ಪಿಟ್ಟು
Published on: 

ಕೆಲವರು ರವೆ ಉಪ್ಪಿಟ್ಟು, ಪೊಂಗಲ್​, ಬಿಸಿಬೇಳೆ ಬಾತ್​​​ ಕಂಡರೆ ಮೂಗು ಮುರಿಯುತ್ತಾರೆ. ಹೀಗಾಗಿ ನೀವು ರವೆ ಬದಲಾಗಿ ಈ ಬಾರಿ ನಿಮ್ಮ ತಿಂಡಿಗೆ ಶ್ಯಾವಿಗೆ ಬಳಿಸಿ ರುಚಿಕರವಾದ ಟಿಫಿನ್​ ತಯಾರಿಸಿಕೊಳ್ಳಿ. ಕ್ಯಾರೋಟ್, ಬೀನ್ಸ್​, ನವಿಲು ಕೋಸು, ಆಲೂಗಡ್ಡೆ ಹಾಗೂ ಬಟಾಣಿ ಹಾಕಿ ತಯಾರು ಮಾಡುವ ಶ್ಯಾವಿಗೆಯನ್ನು ಬಾಯಿ ಚಪ್ಪರಿಸುತ್ತಾ ಕಣ್ಮುಚ್ಚಿ ತಿನ್ನಬಹುದಾಗಿದೆ.

ಶ್ಯಾವಿಗೆಯಲ್ಲಿಯೂ ಇದೆ ಆರೋಗ್ಯದ ಗುಟ್ಟು

ಶ್ಯಾವಿಗೆ ತಯಾರಿಸುವ ಮುನ್ನ ಈ ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೈದಾದಿಂದ ತಯಾರಾದ ಶ್ಯಾವಿಗೆಗಿಂತ ಗೋಧಿ, ರಾಗಿ ಮತ್ತು ಸಿರಿಧಾನ್ಯದಿಂದ ತಯಾರಾಗಿರುವುದನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ. ಶ್ಯಾವಿಗೆಯಲ್ಲಿರುವ ಕಾರ್ಬೋಹೈಡ್ರೇಟ್​ ದೇಹಕ್ಕೆ ಬೇಗ ಶಕ್ತಿ ನೀಡುತ್ತದೆ. ಶ್ಯಾವಿಗೆ ತಿನ್ನುವುದು ಹೊಟ್ಟೆಗೆ ಹಗುರ ಎನಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ಮಧುಮೇಹಿಗಳಲ್ಲಿರಲಿ ಎಚ್ಚರಿಕೆ

ಶ್ಯಾವಿಗೆ ತಯಾರಿಸುವಾಗ ಅದಕ್ಕೆ ಕ್ಯಾರೆಟ್, ಬೀನ್ಸ್​ ಹಾಗೂ ಇನ್ನಿತರ ತರಕಾರಿ ಹಾಕಿ ತಯಾರಿ ಮಾಡುವ ಕಾರಣ ಇದರಲ್ಲಿರುವ ನಾರಿನಾಂಶವು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ ನೀವು ಅನಗತ್ಯವಾಗಿ ಯಾವುದೇ ಆಹಾರ ಸೇವನೆ ಮಾಡದಂತೆ ಕಾಪಾಡುತ್ತದೆ. ಆದರೆ ಮಧುಮೇಹಿಗಳು ಮೈದಾ ಅಥವಾ ಅಕ್ಕಿಯ ಶ್ಯಾವಿಗೆ ಬಳಕೆ ಮಾಡೋದು ಬೇಡ.

ಶ್ಯಾವಿಗೆ ಉಪ್ಪಿಟ್ಟು ತಯಾರಿಸುವುದು ಹೀಗೆ

ಕೆಲಸಕ್ಕೆ ತೆರಳುವ ಹೊತ್ತಿನಲ್ಲಿ ತ್ವರಿತವಾಗಿ ಅಡುಗೆ ಮಾಡಿಕೊಳ್ಳಬೇಕು ಹೋಟೆಲ್​ನಲ್ಲಿ ತಿನ್ನಲು ಇಷ್ಟಪಡದೆ ಇರುವರು ತ್ವರಿತವಾಗಿ ಆಗುವ ಅಡುಗೆಯಾದ ಶ್ಯಾವಿಗೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಿ.

ಶ್ಯಾವಿಗೆ ತಯಾರಿಸಲು ಬೇಕಾಗುವ ಸಾಮಗ್ರಿ

  • ಶ್ಯಾವಿಗೆ: 1 ಕಪ್

  • ಈರುಳ್ಳಿ: 1 ಈರುಳ್ಳಿ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ

  • ಹಸಿ ಮೆಣಸು: 2-3

  • ಸಾಸಿವೆ ಜೀರಿಗೆ: ಅರ್ಧಚಮಚ

  • ಅರಿಶಿನ: ಚಿಟಿಕೆ

  • ಕರಿಬೇವು: ಸ್ವಲ್ಪ

  • ಉದ್ದು, ಕಡಲೆ: 1ಚಮಚ

  • ನೀರು: 1.5 ಕಪ್

  • ಎಣ್ಣೆ: 2 ಚಮಚ

  • ಉಪ್ಪು: ತಕ್ಕಷ್ಟು

  • ಕೊತ್ತಂಬರಿ: ಸ್ವಲ್ಪ

ಮಾಡುವ ವಿಧಾನ

ಉಪ್ಪಿಟ್ಟಿಗೆ ರವೆ ಉರಿದುಕೊಳ್ಳುವಂತೆ ಶ್ಯಾವಿಗೆಯನ್ನು ಉರಿದುಕೊಳ್ಳಿ. ಇಲ್ಲವಾದಲ್ಲಿ ಉರಿದ ಶ್ಯಾವಿಗೆ ಪ್ಯಾಕೆಟ್​ಗಳೇ ನಿಮಗೆ ಅಂಗಡಿಗಳಲ್ಲಿ ಸಿಗುತ್ತದೆ ಅದನ್ನು ತಂದುಕೊಳ್ಳಬಹುದು. ಈಗ ಶ್ಯಾವಿಗೆ ಕಂದು ಬಣ್ಣಕ್ಕೆ ತಿರುಗಿದ ನಂತರ ಅದನ್ನು ಪಕ್ಕಕ್ಕೆ ಇಡಿ. ಅದೇ ಬಾಂಡ್ಲಿಗೆ ಈಗ ಎಣ್ಣೆ ಹಾಕಿ ಕರಿಬೇವು, ಸಾಸಿವೆ, ಕಡಲೇ ಬೇಳೆ ಹಾಗೂ ಮೆಣಸು ಉದ್ದು ಹಾಕಿ ಉರಿದುಕೊಳ್ಳಿ. ಅವು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಈರುಳ್ಳಿ ಹಾಕಿ ಬೇಯಿಸಿ. ಈರುಳ್ಳಿ ಹಸಿ ವಾಸನೆಯನ್ನು ಬಿಟ್ಟ ಮೇಲೆ ಅಥವಾ ಅರ್ಧಕ್ಕೆ ತರಕಾರಿಗಳನ್ನು ಹಾಕಿ ಉರಿದುಕೊಳ್ಳಿ. ತರಕಾರಿಯು ಅರ್ಧಂಬರ್ಧ ಬೆಂದಿದ್ದರೆ ಅದಕ್ಕೆ ಈಗ ಉರಿದಿಟ್ಟುಕೊಂಡ ಶ್ಯಾವಿಗೆ ಹಾಕಿ ನೀರು ಹಾಕಿ ಬೇಯಿಸಲು ಬಿಡಿ. ನೀರು ಇಂಗುವ ವರೆಗೂ ಪ್ಲೇಟ್​ ಅನ್ನು ಬಾಂಡ್ಲಿ ಮೇಲಿಂದ ತೆಗೆಯದೆ ಬಿಡಬೇಡಿ. ಅದು ತಳ ಕಟ್ಟುವುದನ್ನು ತಪ್ಪಿಸುವ ಸಲುವಾಗಿ ಆಗಾಗ್ಗೆ ಶ್ಯಾವಿಗೆ ಉಪ್ಪಿಟ್ಟನ್ನು ಮೇಲಿಂದ ತಿರುವ ಬೇಕಾಗುತ್ತದೆ. ನೀರು ಪೂರ್ತಿಯಾಗಿ ಹೀರಿಕೊಂಡ ನಂತರ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿಯನ್ನು ಅದರ ಮೇಲೆ ಉದುರಿಸಿ. ಈಗ ಹತ್ತೇ ನಿಮಿಷದಲ್ಲಿ ತಯಾರದ ಶ್ಯಾವಿಗೆ ತಿನ್ನಲು ರೆಡಿಯಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net