More

    ಗದಗ ಹಾಲು ಉತ್ಪಾದಕರ ಸಂಘ ಸ್ಥಾಪನೆ: ಬೊಮ್ಮಾಯಿ ಸಂಕಲ್ಪ

    ವಿಜಯವಾಣಿ ಸುದ್ದಿಜಾಲ ಗದಗ
    ಅನಿಲ ಮೆಣಸಿನಕಾಯಿ ನೇತೃತ್ವದ ಜನತಾ ಸಂವಾದ ಸದನ ಸಮಿತಿ ವತಿಯಿಂದ ಶನಿವಾರ ಗದಗ ನಗರದ ಸ್ವಾಮೀ ವಿವೇಕಾನಂದ ಸಭಾಭವನದಲ್ಲಿ ಜರುಗಿದ ಜನತಾ ಸಂವಾದ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದವು. ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಜನರು ತಮ್ಮ ಗಟ್ಟಿಧ್ವನಿ ಎತ್ತಿದರು. ಜವಳಿ ಪಾರ್ಕ, ಆಹಾರ ಸಂಸ್ಕರಣಾ ಟಕ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಹಾಲು ಉತ್ಪಾದಕರ ಸಂಘ, ಗದಗ ಜಿಲ್ಲೆಗೆ ಪ್ರತ್ಯೇಕ ವಿವಿ ಸ್ಥಾಪನೆ, ಆಟೊಮೊಬೈಲ್​ ಹಬ್​, ಬಗರ್​ ಹುಕುಂ ಸಾಗುವಳಿದಾರರ ಸಮಸ್ಯೆ ಕುರಿತು ಸಂವಾದದಲ್ಲಿ ಗಂಭೀರ ಚರ್ಚೆ ಜರುಗಿತು.
    ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಟಗೇರಿಯನ್ನು ಜವಳಿ ಕೇಂದ್ರವನ್ನಾಗಿಸುವ, ಗದಗ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಸಂ ಸ್ಥಾಪನೆಯ ಸಂಕಲ್ಪ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಮಾಣಿಕ ಪಯತ್ನ ಮಾಡುತ್ತೇನೆ. ಇದೊಂದು ಪಾತೀತ ಮತ್ತು ಜಾತ್ಯಾತಿತ ಕಾರ್ಯಕ್ರಮ ಪ್ರಜಾಪ್ರಭುತ್ವದಲ್ಲಿ ಮತ ಹಾಕುವುದಷ್ಟೇ ಮತದಾರನ ಕರ್ತವ್ಯ ಅಲ್ಲ. ಚುನಾವಣಾ ಪೂರ್ವ ಮತ್ತು ನಂತರದಲ್ಲಿ ಅಭಿವೃದ್ಧಿ ವಿಷಯಗಳಲ್ಲಿ ಜನರು ಭಾಗವಹಿಸುವುದು ನಿಜವಾದ ಪ್ರಭುತ್ವ. ಅಭಿವೃದ್ಧಿಯಲ್ಲಿ ಪಾಲುಗೊಳ್ಳುವಿಕೆ ಪ್ರಜಾಪ್ರಭುತ್ವ ಅವಶ್ಯಕತೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಮೂಲೆಗಳಿಂದ ಅಭಿಪ್ರಾಯ ಪಡೆದು ಯೋಜನೆ ರೂಪಿಸುತ್ತಿದ್ದಾರೆ ಎಂದರು.
    ನೀರಿಗಾಗಿ ಧ್ವನಿ:
    ಗದಗ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಕಳೆದ ನಾಲ್ಕು ದಶಕದಿಂದ ಹಲವು ಯೋಜನೆಗಳು ಜಾರಿ ಆದರೂ ನೀರಿನ ಸಮಸ್ಯೆ ನೀಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿಂಗಟಾಲೂರು ಯೋಜನೆಯಲ್ಲಿ ಇದ್ದ ಹಲವು ಅಡತಡೆ ನಿವಾರಣೆ ಮಾಡಿ, ಅಲ್ಲಿನ ಅಲ್ಲಿನ ಗ್ರಾಮೀಣ ಜನರಿಗೆ ಪರಿಹಾರ ನೀಡಿ, ಗದಗ ನಗರಕ್ಕೆ ನೀರು ಪೂರೈಸಲಾಯಿತು. ಇದೊಂದು ಸಾಮಾಜಿಕ ಸಮಸ್ಯೆ ಆಗಿದೆ. ಗದಗ ನಗರಕ್ಕೆ ಅಮೃತ ಯೋಜನೆಯಡಿ 140 ಕೋಟಿ, ಹಾವೇರಿ ಜಿಲ್ಲೆಗೆ 170 ಕೋಟಿ ಸೇರಿ ರಾಜ್ಯದಲ್ಲಿ 7000 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ ಎಂದರು.
    ಜವಳಿ ಪಾರ್ಕ ಪ್ರತಿಜ್ಞೆ:
    ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಕಿಸಾನ್​ ಸಮ್ಮಾನ್​ ಯೋಜನೆಯಂತೆ ನೇಕಾರ ಸಮ್ಮಾನ್​ ಯೋಜನೆ ಜಾರಿ ಮಾಡಲಾಗಿತ್ತು. 50 ಯುನಿಟ್​ ವರೆಗೆ ಹ್ಯಾಂಡ್​ ಲೂಮ್​ ನೇಕಾರರಿಗೆ ಉಚಿತ ವಿದ್ಯುತ್​ ನೀಡಲಾಗಿದೆ. ನೇಕಾರರಿಗೆ ಸಹಕಾರಿ ಬ್ಯಾಂಕ್​ ರೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್​ ನಲ್ಲಿಯೂ ಸಾಲ ಸಿಗುವಂತೆ ಮಾಡಲು ಪ್ರಯತ್ನಿಸಲಾಗುವುದು. ನೇಕಾರ ಮಕ್ಕಳಿಗೂ ಶಿಷ್ಯವೇತನ ಕೊಡುವ ವಿದ್ಯಾನಿಧಿ ಯೋಜನೆನ್ನು ಕಾಂಗ್ರೆಸ್​ ಸರ್ಕಾರ ರದ್ದು ಮಾಡಿದೆ. ನೇಕಾರರಲ್ಲಿ ಹ್ಯಾಂಡಲೂಮ್​, ಪವರ್​ ಲೂಮ್​ ಕಾಮಿರ್ಕರಿಗೆ 5000 ರೂ, ಹಾಗೂ ಹ್ಯಾಂಡ್​ ಲೂಮ್​ ಕಾಮಿರ್ಕರಿಗೆ ಉಚಿತ ಕರೆಂಟ್​, ಬಡ್ಡಿ ರಹಿತ ಸಾಲ ಒದಗಿಸಲು ಯೋಜನೆ ರೂಪಿಸಲಾಗುವುದು. ಜವಳಿಗೆ ಪ್ರಸಿದ್ಧವಾದ ಬೆಟಗೇರಿಯನ್​ಉ ಜವಳಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
    ಗದಗ ಹಾಲು ಉತ್ಪಾದಕರ ಸಂಘ ಸ್ಥಾಪನೆ:
    ಜಿಲ್ಲೆಯು ಬಯಲು ಸೀಮೆ ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಹಾಲು ದೊರೆಯುತ್ತದೆ. ಧಾರವಾಡ ಹಾಲು ಉತ್ಪಾದಕರ ಸಂದಿಂದ ಹಾವೇರಿ ಪ್ರತ್ಯೇಕಗೊಳಿಸಿ ಹಾವೇರಿ ಹಾಲು ಉತ್ಪಾದಕರ ಸಂ ಸ್ಥಾಪಿಸಿದಂತೆ ಗದಗ ಜಿಲ್ಲಾ ಹಾಲು ಉತ್ಪಾದಕರ ಸಂ ಸ್ಥಾಪಿಸುವ ಅಗತ್ಯವಿದೆ. ಈ ಯೋಜನೆಗೆ ಸ್ಥಳಿಯ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ. ಪ್ರತ್ಯೇಕ ಗದಗ ಹಾಲು ಒಕ್ಕೂಟ ನಿರ್ಮಾಣ ಆದರೆ ಇಲ್ಲಿನ ಹೈನುಗಾರರಿಗೆ ಹೆಚ್ಚು ಅನುಕೂಲ. ಹಾಗಾಗಿ ಸಮದ ಸ್ಥಾಪನೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

    ಬಿಜೆಪಿ ಅವಧಿಯಲ್ಲಿ 8 ವಿವಿ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಯಿತು. ಕಾಂಗ್ರೆಸ್​ ಅವಧಿಯಲ್ಲಿ ಅದರ ಮುಂದಿನ ಪ್ರಕ್ರಿಯೆ ಜಾರಿ ಆಗದೇ ಇರುವುದರಿಂದ ಯುವಕ ಶೈಕ್ಷಣಿಕತೆ ಕುಂದುತ್ತಿದ್ದೆ. ಕಳೆದ ಅಕ್ಟೋಬರ್​ ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದನ್ನು ಈ ಸರ್ಕಾರ ನಿಲ್ಲಿಸಿದೆ. ಗದಗ ರಿಂಗ್​ ರೋಡ್​ ಗಾಗಿ ಸಿಎಂ ಆಗಿದ್ದಾಗ ಬಜೆಟ್​ ಮೀಸಲಿಟ್ಟಿದ್ದೇವು. ಈಗಿನ ಸರ್ಕಾರ ಅದನ್ನೂ ತೆಗೆದುಹಾಕಿದೆ ಎಂದು ಬೊಮ್ಮಾಯಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

    ಕಾರ್ಯಕ್ರಮದಲ್ಲಿ ಸಿ.ಸಿ. ಪಾಟೀಲ ಮಾತನಾಡಿ ಇದೊಂದು ವಿನೂತನ ಕಾರ್ಯಕ್ರಮ. ಲೋಕಸಭಾ ಕ್ಷೇತ್ರದಲ್ಲಿ 2 ಲಕ್ಷ ಮತಗಳ ಅಂತರದಿಂದ ಬಸವರಾಜ ಬೊಮ್ಮಾಯಿ ಗೆಲ್ಲಲ್ಲಿದ್ದಾರೆ. ಅವರ ನಾಮನಿರ್ದೇಶನ ಸಮಯದಲ್ಲಿ ನಭುತೋ ನಭವಿಷ್ಯತಿ ಎಂಮಬಂತೆ ಜನ ಸಾಗರ ಸೇರಿತ್ತು. ಅವರು ಸಂಸದರು ಆಗುವುದು ಸತ್ಯ. ಯಾವ ಸರ್ಕಾರದಲ್ಲಿ ಎಷ್ಟು ಕೆಲಸಗಳು ಆಗಿವೆ ಎಂಬುದನ್ನು ಜನರು ಅರಿತುಕೊಳ್ಳಬೇಕು. ನಮ್ಮ ಸರ್ಕಾರದಲ್ಲಿ ಮಂಜೂರಾದ ರೈಲ್ವೆ ಬ್ರಿಡ್ಜಗಳನ್ನು ನಾವು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಸರ್ಕಾರ ಹೇಳುವುದು ಹಾಸ್ಯಾಸ್ಪದ. ನಗರದ ಹಲವು ರಸ್ತೆಗಳನ್ನು ನಾನು ಲೋಕೋಪಯೋಗಿ ಸಚಿವನ್ನಿದ್ದಾಗ ಮಂಜೂರು ಮಾಡಿ ಕೆಲಸ ಮಾಡಿದ್ದೇನೆ. ಇಂದು ಅಭಿವೃದ್ಧಿಗಾಗಿ ಸರ್ಕಾರದ ಬಳಿ ಹಣವೇ ಇಲ್ಲದಾಗಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಅನಿಲ ಮೆಣಸಿನಕಾಯಿ, ವೈದ್ಯ ಎನ್​.ಬಿ. ಪಾಟೀಲ, ಕಾಂತಿಲಾಲ್​ ಬನ್ಸಾಲಿ, ವಿಜಯಕುಮಾರ ಗಡ್ಡಿ, ಜೆಡಿಎಸ್​ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ, ಅನಿಲ ಅಬ್ಬಿಗೇರಿ, ವಿಜಯಲಕ್ಷಿ$್ಮ ಮಾನ್ವಿ, ಜಗನ್ನಾಥಸಾ ಭಾಂಡಗೆ ಇತರರು ಉಪಸ್ಥಿತರಿದ್ದರು.
    ಪ್ರಶ್ನೆಗಳು ಪ್ರಸ್ತಾಪ: ನೇಕಾರರಿಗೆ ಸರ್ಕಾರಿ ಬ್ಯಾಂಕಗಳಲ್ಲಿ ಸಾಲ ಸೌಲಭ್ಯ, ಮಾಜಿ ಸೈನಿಕರಿಗೆ 5 ಎಕರೆ ಜಮೀನು ನೀಡದ ಕುರಿತು, ವಾಣಿಜ್ಯ, ಟೆಕ್ಸಟೈಲ್​, ಆಯಿಲ್​ ಮಿಲ್​ ನಿಮಿರ್ಸಲು ನಗರಸಭೆಯಿಂದ 2 ಎಕರೆ ಜಮೀನು ಒದಗಿಸುವುದು, ಎಪಿಎಂಸಿಗೆ ಮೂಲಭೂತ ಸೌಕರ್ಯ, ಕೃಷಿ ಉತ್ಪನ್ನಗಳಿಗೆ ಕೋಲ್ಡ ಸ್ಟೋರೇಜ್​, ಗ್ರಾಮೀಣ ಹೆಣ್ಣುಮಕ್ಕಳ ಕ್ರೀಡೆಗೆ ಬೆಂಬಲ ಒದಗಿಸುವುದು, ಜಿಲ್ಲೆಯಲ್ಲಿ ಕೇಂದ್ರೀಯ ವಿಶ್ವದ್ಯಾಲಯ ಸ್ಥಾಪನೆ, ಬಗರಹುಕುಂ ಸಾಗುವಳಿದಾರರಿಗೆ ಜಮೀನು ಒದಗಿಸುವುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಜನರು ಪ್ರಸ್ತಾಪಿಸಿದರು.

    ಕೋಟ್​:
    ನನಗೆ ಕಣ್ತೆರುವ, ಮಾರ್ಗದರ್ಶನ ನೀಡುವ ಕಾರ್ಯಕ್ರಮ. ಇಂತಹ ಚರ್ಚೆಗಳು ಚುನಾವಣೆಗೆ ಸಿಮೀತವಾಗಿದೇ ಮುಂದುವರಿಸೋಣ. ನಾಯಕನಿಗೆ ಜನಮತ ಮುಖ್ಯ. ಅದು ಸಕಾರಾತ್ಮಕ ಜನಮತ ಇದ್ದಾಗ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇಂಥ ಸಕಾರಾತ್ಮಕ ಕಾರ್ಯಕ್ರಮಗಳಿಂದ ಜನಪ್ರತಿನಿಧಿಗಳು ಎಚ್ಚರದಿಂದ ಇರುತ್ತಾರೆ.
    – ಬಸವರಾಜ ಬೊಮ್ಮಾಯಿ

    ಕೋಟ್​:
    ಕಾಂಗ್ರೆಸ್​ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಸೃಷ್ಟಿ ಮಾಡಿದ ಸಮಸ್ಯೆಗಳು ಇಂದು ಜಟೀಲ ವಾಗುತ್ತಿವೆ. ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    – ಅನಿಲ ಮೆಣಸಿನಕಾಯಿ,


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts