More

    ನಾಳೆ ನಡೆಯಲಿದೆ #G20VirtualSummit ಪ್ರಧಾನಿ ನರೇಂದ್ರ ಮೋದಿಯೂ ಪಾಲ್ಗೊಳ್ಳುತ್ತಿದ್ದಾರೆ..

    ನವದೆಹಲಿ: ಕರೊನಾ ಸೋಂಕು  COVID19 ಹರಡದಂತೆ ಜಗತ್ತಿನ ಎಲ್ಲ ರಾಷ್ಟ್ರಗಳೂ ತಮ್ಮದೇ ಆದ ವಿಧಾನದಲ್ಲಿ ಪ್ರಯತ್ನಿಸುತ್ತಿವೆ. ಈ ನಡುವೆ, ಭಾರತ ಸಾರ್ಕ್‍ ರಾಷ್ಟ್ರಗಳ ನಾಯಕರ ವಿಡಿಯೋ ಕಾನ್ಫರೆನ್ಸ್ ಅನ್ನು ಕೂಡ ಮಾಡಿತ್ತು. ಇದರ ಬೆನ್ನಿಗೆ ಈಗ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅಧ್ಯಕ್ಷತೆಯನ್ನು ಎಕ್ಸ್‍ಟ್ರಾರ್ಡಿನರಿ #G20VirtualSummit ಗುರುವಾರ ನಡೆಯಲಿದೆ. ಇದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಶೃಂಗವಾಗಿದ್ದು, ರಷ್ಯನ್ ಪ್ರೆಸಿಡೆಂಟ್ ‍ವ್ಲಾದಿಮಿರ್ ಪುತಿನ್ ಸೇರಿ ಕೆಲವು ಜಾಗತಿಕ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಈ ಐತಿಹಾಸಿಕ ಶೃಂಗದಲ್ಲಿ ಭಾಗವಹಿಸುತ್ತಿದ್ದಾರೆ.

    COVID19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಕಾರ್ಯಯೋಜನೆ ಹಮ್ಮಿಕೊಂಡು ಮುನ್ನಡೆಸುವ ಸಲುವಾಗಿ ಕಿಂಗ್ ಸಲ್ಮಾನ್ ಅಧ್ಯಕ್ಷತೆಯಲ್ಲಿ ಈ ಶೃಂಗ ನಡೆಯಲಿದೆ. ಇಲ್ಲಿ ಸೋಂಕು ಮತ್ತು ಅದರಿಂದ ಜನರು ಹಾಗೂ ಆರ್ಥಿಕತೆ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಸೌದಿ ಅರೇಬಿಯಾ ಸರ್ಕಾರ್ ಬುಧವಾರ ಬೆಳಗ್ಗೆ ತಿಳಿಸಿದೆ.

    ಸಾಕಷ್ಟು ಟೀಕೆಗಳನ್ನು ಎದುರಿಸಿದ ಬಳಿಕ ಸೌದಿ ಅರೇಬಿಯಾ ಅಧ್ಯಕ್ಷತೆಯ ಜಿ20 ಈ ಶೃಂಗ ನಡೆಸಲು ತೀರ್ಮಾನಿಸಿದ್ದು ಎಂಬ ಆರೋಪವೂ ಅಲ್ಲಿನ ಮಾಧ್ಯಮಗಳ ವರದಿಯಲ್ಲಿ ಕಂಡುಬಂದಿದೆ. G20 ಸದಸ್ಯರು ಈ ಶೃಂಗದಲ್ಲಿ ಭಾಗಿಯಾಗುತ್ತಿದ್ದು, ಜತೆಗೆ ಸ್ಪೇನ್‍, ಜೋರ್ಡಾನ್‍, ಸಿಂಗಾಪುರ, ಸ್ವಿಜರ್ಲೆಂಡ್‍ ಮುಂತಾದ ಸಂತ್ರಸ್ತ ರಾಷ್ಟ್ರಗಳ ನಾಯಕರ ಜತೆಗೆ ಮಾತುಕತೆ ನಡೆಸಲಿದ್ದಾರೆ.

    ಇವರಲ್ಲದೆ, ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ವ್ಯಾಪಾರ ಸಂಘಟನೆಯ ಪ್ರತಿನಿಧಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರಾದೇಶಿಕ ಸಂಘಟನೆಗಳ ಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಚೀನಾ ಮತ್ತು ಫ್ರಾನ್ಸ್‍ಗಳು ಕೂಡ ವಿಡಿಯೋ ಶೃಂಗವನ್ನು ಬೆಂಬಲಿಸಿದ್ದು, ಈ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿವೆ.

    ಈ ಶೃಂಗದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಈ ಶೃಂಗದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಾತರದಿಂದ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಕರೊನಾ ವಾರಿಯರ್ಸ್ ಜತೆಗೆ ಸಹಕರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts