More

    ಭವಿಷ್ಯದ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿ

    ಬೆಳಗಾವಿ : ಪ್ರಾಧ್ಯಾಪಕರು ತಾಂತ್ರಿಕ ಕೌಶಲ ಕಾರ್ಯಾಗಾರಗಳಿಂದ ಸಮಗ್ರ ಅಧ್ಯಯನ ನಡೆಸಿ, ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಜತೆಗೆ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಬೆಳೆಯಲು ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಐಎಸ್‌ಟಿಇ ಕಾರ್ಯಕಾರಿ ನಿರ್ದೇಶಕ ಪ್ರೊ.ವಿಜಯ ವೈದ್ಯ ಸಲಹೆ ನೀಡಿದ್ದಾರೆ.

    ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ದೆಹಲಿಯ ಎಐಸಿಟಿಇ, ಐಎಸ್‌ಟಿಇ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆರು ದಿನಗಳ ಸಮಗ್ರ ತ್ಯಾಜ್ಯ ನಿರ್ವಹಣೆ-2’ ಆನ್‌ಲೈನ್ ಕಾರ್ಯಾಗಾರದಲ್ಲಿ ಮಾತನಾಡಿ, ಭವಿಷ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಉತ್ಪನ್ನ ಪೂರೈಕೆಯನ್ನು ಸರಿಯಾಗಿ ನಿರ್ವಹಿಸಬೇಕು ಎಂದರು. ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಮಾತನಾಡಿ, ಸಮಗ್ರ ತ್ಯಾಜ್ಯ ನಿರ್ವಹಣೆ ಕುರಿತು ಪ್ರಾಧ್ಯಾಪಕರು ಸಂಪೂರ್ಣ ಜ್ಞಾನ ಗಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಮತ್ತು ಪರಿಸರ ಕಾಳಜಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು. ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಮಾತನಾಡಿ, ಯಾವುದೇ ಹೊಸ ಪೂರೈಕೆಗಳನ್ನು ಮರು ಉಪಯೋಗ ಮಾಡಬೇಕು. ತ್ಯಾಜ್ಯದಿಂದಲೂ ಉತ್ಪನ್ನ ಸೃಷ್ಟಿಸಿ ಮರುಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

    ಬೆಂಗಳೂರಿನ ಪ್ರಕೃತಿ ಪರಿಸರ ಸಂಸ್ಥೆ ಅಧಿಕಾರಿ ಡಿ.ಆರ್.ಕುಮಾರಸ್ವಾಮಿ ಬಯೋಮೆಡಿಕಲ್ ವೇಸ್ಟ್ ವಿಷಯ, ಡಾ.ನಾಗಪ್ಪ ಕ್ವಾಂಟಿಫಿಕೇಶನ್ ಆಫ್ ಏರ್ ಪೊಲ್ಯುಟಂಟ್ಸ್ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಸಂಯೋಜನಾಧಿಕಾರಿ ಡಾ. ಬಿ.ಟಿ.ಸುರೇಶಬಾಬು, ಡಾ.ಸಂಜಯ ಪೂಜಾರಿ, ಪ್ರೊ.ಅಮರ ಬ್ಯಾಕೋಡಿ, ಪ್ರೊ.ನೂರ್‌ಅಹ್ಮದ್ ಹೊಸಮನಿ, ಪ್ರೊ.ಗೋಪಾಲ ಸುರಪಳ್ಳಿ, ಪ್ರೊ.ಮೆಹಬೂಬ್ ಹಂಚಿನಾಳ, ಪ್ರೊ.ಪುಟ್ಟವ್ವಾ ಪಮ್ಮಾರ, ಪ್ರೊ.ಸಾಗರ ಬೆಳಗಾಂವಕರ, ಪ್ರೊ. ಅಶೋಕ ಹಿಪ್ಪರಗಿ, ವೈಶಾಲಿ ಖಾನಾಪುರ ಸೇರಿ ಸಿಬ್ಬಂದಿ ಇದ್ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ವಿ.ಕಂಠಿ ಸ್ವಾಗತಿಸಿದರು. ಪ್ರೊ.ಗೋಪಾಲ ಸುರಪಳ್ಳಿ ವಂದಿಸಿದರು.ಪ್ರೊ.ವಿನೋದ ಸುಳೆಬಾವಿ ಹಾಗೂ ಪ್ರೊ.ತೇಜಸ್ವಿನಿ ಜೋತಾವರ ನಿರೂಪಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts