More

    ಗಣರಾಜ್ಯೋತ್ಸವ ಪರೇಡ್​ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಬ್ರೆಜಿಲ್​ ಅಧ್ಯಕ್ಷ!

    ನವದೆಹಲಿ: ಭಾರತ ಪ್ರವಾಸ ಕೈಗೊಳ್ಳಲಿರುವ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೊಲ್ಸೊನರೊ ಅವರು ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

    ಭಾರತವು ಪ್ರತಿವರ್ಷದ ಗಣರಾಜೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಯನ್ನಾಗಿ ತನ್ನ ಮಿತ್ರ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡುತ್ತದೆ. ಕೆಲವು ವರ್ಷಗಳ ಹಿಂದೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರಿಗೂ ಆಹ್ವಾನ ನೀಡಲಾಗಿತ್ತು.

    ಗೋವಾದಲ್ಲಿ ನಡೆದ ಬ್ರಿಕ್ಸ್​ ಶೃಂಗಸಭೆಯ ಅಂಗವಾಗಿ 2016ರ ಅಕ್ಟೋಬರ್​ನಲ್ಲಿ ಬ್ರೆಜಿಲಿಯನ್​ ಅಧ್ಯಕ್ಷರಾಗಿದ್ದ ಮೈಕೆಲ್​ ಟೆಮರ್​ ಕೊನೆಯ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಳೆದ ನವೆಂಬರ್​ನಲ್ಲಿ ಬ್ರೆಜಿಲ್​ ರಾಜಧಾನಿ ಬಾರ್ಸಿಲಿಯಾದಲ್ಲಿ ನಡೆದ ಬ್ರಿಕ್ಸ್​ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು.

    ಬೆಜಿಲಿಯನ್​ ಅಧ್ಯಕ್ಷರ ಭಾರತ ಪ್ರವಾಸದ ಪ್ರಮುಖಾಂಶ ಹೀಗಿದೆ…
    ಮೊದಲನೆಯದಾಗಿ ಬೊಲ್ಸೊನರೊ ಅವರ ಮೊದಲ ಭಾರತ ಭೇಟಿ ಇದಾಗಿದೆ. ಬ್ರೆಜಿಲ್​ನ ಮಾಜಿ ಅಧ್ಯಕ್ಷರು 1996 ಮತ್ತು 2004ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೊಲ್ಸೊನರೊ ಅವರ ಭಾರತ ಪ್ರವಾಸ ಪ್ರಧಾನಿ ಮೋದಿ ಅವರ ಆಹ್ವಾನದಂತೆ ಜನವರಿ 24ರಿಂದ ಆರಂಭವಾಗಲಿದೆ. ಇವರೊಂದಿಗೆ 7 ಸಚಿವರು, ಬ್ರೆಜಿಲ್​ ಸಂಸತ್ತಿನಲ್ಲಿರುವ ಬ್ರೆಜಿಲ್​-ಭಾರತ ಸ್ನೇಹಬಳಗದ ಚೇರ್​ಮನ್​, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ಉದ್ಯಮಿ ನಿಯೋಗ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ.

    ಜನವರಿ 25ರಂದು ಭಾರತದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಬೊಲ್ಸೊನರೊ ಭೇಟಿ ಮಾಡಲಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಅವರನ್ನು ಬೊಲ್ಸೊನರೊ ಭೇಟಿ ಮಾಡಲಿದ್ದಾರೆ.

    ಜನವರಿ 27ರಂದು ಬೊಲ್ಸೊನರೊ ಅವರು ಭಾರತ-ಬ್ರೆಜಿಲ್​ ಉದ್ಯಮ ವೇದಿಕೆಯಲ್ಲಿ ಉಭಯ ದೇಶಗಳ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಮಾನ್ಯ ಜಾಗತಿಕ ದೃಷ್ಟಿಕೋನ, ಪ್ರಜಾಪ್ರಭುತ್ವ ಮೌಲ್ಯಗಳ ಹಂಚಿಕೆ ಮತ್ತು ಉಭಯ ದೇಶಗಳ ವೇಗದ ಆರ್ಥಿಕ ಬೆಳವಣಿಗೆಯ ಬದ್ಧತೆ ಆಧಾರದ ಮೇಲೆ ಬ್ರೆಜಿಲ್​ ಮತ್ತು ಭಾರತ ಹತ್ತಿರದ ಮತ್ತು ಬಹುಮುಖಿ ಸಂಬಂಧವನ್ನು ಹೊಂದಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts