More

    ನೀವು ಮತದಾನ ಮಾಡಿದರೆ ಜಿಲೇಬಿ ಉಚಿತ.. ಎಲ್ಲಿ ಗೊತ್ತಾ?

    ಮಧ್ಯಪ್ರದೇಶ: ಚುನಾವಣೆಗಳು ಬಂದಾಗ, ಮತದಾರರನ್ನು ಮೆಚ್ಚಿಸಲು ರಾಜಕೀಯ ನಾಯಕರು ಉಡುಗೊರೆಗಳನ್ನು ನೀಡುತ್ತಾರೆ. ಮತದಾರರಿಗೆ ಮಿಕ್ಸರ್, ಗ್ರೈಂಡರ್, ಸೀರೆ, ಹಣವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ಮಧ್ಯಪ್ರದೇಶದ ಇಂದೋರ್​​ನಲ್ಲಿ ವೆರೈಟಿ ಆಫರ್ ನೀಡ ಲಾಗಿದೆ. ಈ ವಿನೂತನ ಕೊಡುಗೆಯನ್ನು ನೀಡಿದ್ದು, ರಾಜಕೀಯ ನಾಯಕರಲ್ಲ. ಅಂಗಡಿಯ ಮಾಲೀಕ. ಈತ ಹೀಗೆ ಹೇಳಿದ್ಯಾಕೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಇದ್ಯಾ? ಬನ್ನಿ ಉಚಿತ ಜಿಲೇಬಿ ಹಂಚಿಕೆ ಹಿಂದಿರುವ ಕಾರಣ ತಿಳಿಯೋಣ…

    ಜನಪ್ರಿಯ ಫುಡ್ ಹಬ್ ಅಸೋಸಿಯೇಷನ್ ​​ಇಂದೋರ್ ಮತದಾರರಿಗೆ ಈ ಸಿಹಿ ಕೊಡುಗೆ ನೀಡಿದೆ. ಸಾಮಾನ್ಯವಾಗಿ ಎಲ್ಲೆ ಚುನಾವಣೆ ನಡೆದರೂ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತದೆ. ಆದರೆ ಮತದಾರರು ಬೆಳಿಗ್ಗೆ 10.00 ಗಂಟೆಯ ನಂತರ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಬೆಳಗ್ಗೆ ಒಂಬತ್ತು ಗಂಟೆಯ ಮೊದಲು ಮತದಾನ ಮಾಡಲು ಬರುವವರಿಗೆ ಉಚಿತ ಪೋಹಾ ಮತ್ತು ಜಿಲೇಬಿ ನೀಡುವುದಾಗಿ ಇಂದೋರ್‌ನ 56 ಮಳಿಗೆಗಳ ಮಾಲೀಕರ ಸಂಘ ಘೋಷಿಸಿದೆ.

    ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಭಾಗವಾಗಿ ನವೆಂಬರ್ 17 ರಂದು ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಇದರ ಅಂಗವಾಗಿ ಇಂದೋರ್‌ನ ಜನಪ್ರಿಯ ಫುಡ್ ಹಬ್ ’56 ಸ್ಟೋರ್’ ಒಂಬತ್ತು ಗಂಟೆಯ ಮೊದಲು ಮತದಾನ ಮಾಡುವವರಿಗೆ ಉಚಿತ ಪೋಹಾ ಮತ್ತು ಜಿಲೇಬಿಗಳನ್ನು ನೀಡಲಿದೆ ಎಂದು ಸಂಘದ ಅಧ್ಯಕ್ಷ ಗುಂಜನ್ ಶರ್ಮಾ ತಿಳಿಸಿದ್ದಾರೆ.

    ಒಂಬತ್ತು ಗಂಟೆಯ ಒಳಗೆ ಬಂದು ಮತದಾನ ಮಾಡುವವರಿಗೆ ಪೋಹಾ, ಜಿಲೇಬಿ ನೀಡಲಾಗುವುದು ಎಂದರು. ಈ ಕೊಡುಗೆಯು ನವೆಂಬರ್ 17 ರಂದು ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಅನ್ವಯಿಸುತ್ತದೆ. ಮತದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಈ ತಿಂಡಿಗಳನ್ನು ಪಡೆಯಬಯಸುವವರು ಮತದಾನ ಮಾಡಿದಾಗ ಹಾಕಿರುವ ‘ಬೆರಳಿಗೆ ಶಾಯಿ ಗುರುತು’ ತೋರಿಸಬೇಕು ಎನ್ನಲಾಗಿದೆ.

    230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತದಾನದ ಪ್ರಾರಂಭದಲ್ಲಿ ಯಾರೇ ಮತದಾನ ಮಾಡುತ್ತಾರೋ ಅವರಿಗೆ ಬೆರಳಿನಲ್ಲಿ ಅಳಿಸಲಾಗದ ಶಾಯಿಯನ್ನು ತೋರಿಸಿದ ನಂತರ ಉಚಿತ ಪೋಹಾ ಮತ್ತು ಜಿಲೇಬಿಯನ್ನು ನೀಡಲಾಗುತ್ತದೆ ಎಂದು ಅಂಗಡಿಕಾರರು ಘೋಷಿಸಿದ್ದಾರೆ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇಲ್ಲಿನ ಮಳಿಗೆಗಳು ನಿಗದಿತ ಮಾನದಂಡಗಳನ್ನು ಪೂರೈಸಿರುವುದರಿಂದ 56 ಅಂಗಡಿಗೆ ‘ಕ್ಲೀನ್ ಸ್ಟ್ರೀಟ್ ಫುಡ್ ಹಬ್’ ಸ್ಥಾನಮಾನವನ್ನು ನೀಡಿದೆ.

    Success Story: ತಂದೆಯ ಅನಾರೋಗ್ಯದಿಂದ ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ ಕೆಲಸ ಬಿಟ್ಟ ಯುವತಿ ಒಂದೇ ವರ್ಷದಲ್ಲಿ ಕೋಟ್ಯಾಧಿಪತಿಯಾದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts