More

    ಕ್ಯಾಷಿಯರ್ ಸುಲಿಗೆ ಮಾಡಿದ್ದ ನಾಲ್ವರ ಬಂಧನ: ಬಾರ್‌ಗೆ ನುಗ್ಗಿ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ

    ಬೆಂಗಳೂರು: ಇತ್ತೀಚೆಗೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಕೆ(೨೯), ಕೆ.ಜಿ.ಹಳ್ಳಿಯ ಮೋಹಿತ್ ಅಲಿಯಾಸ್ ಮೋಹನ್(೨೪), ಅರಾಫತ್ ಅಹಮದ್(೨೫) ಹಾಗೂ ಸೈಯದ್ ಮಾಜ್(೨೨) ಬಂಧಿತರು. ಆರೋಪಿಗಳಿಂದ ೧೨,೫೦೦ ರೂ. ನಗದು ಹಾಗೂ ನಾಲ್ಕು ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.

    ಆರೋಪಿಗಳು ನ.೨೧ರ ರಾತ್ರಿ ೧೧.೫೫ ರ ಸುಮಾರಿಗೆ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನುಗ್ಗಿ ಕ್ಯಾಶಿಯರ್‌ಗೆ ಮಾರಕಾಸ್ತ್ರ ತೋರಿಸಿ ೪೦ ಸಾವಿರ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾಲ್ವರು ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದು, ಇಮ್ರಾನ್ ವಿರುದ್ಧ ಪೀಣ್ಯ, ನೆಲಮಂಗಲ ಟೌನ್, ಗ್ರಾಮಾಂತರ, ಕಡೂರು, ಡಿ.ಜೆ.ಹಳ್ಳಿ. ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆ, ಕಾಟನ್‌ಪೇಟೆ, ಕೆಂಗೇರಿ, ಕುಮಾರಸ್ವಾಮಿ ಲೇಔಟ್, ವಿದ್ಯಾರಣ್ಯಪುರ, ಯಲಹಂಕ ನ್ಯೂ ಟೌನ್ ಸಂಪಿಗೆಹಳ್ಳಿ, ಕೆಂಗೇರಿ, ಜೆ.ಸಿ.ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆಗೆ ಯತ್ನ, ಹಲ್ಲೆ, ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು ೩೧ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದು ಮತ್ತೆ ಹಳೇ ಚಾಳಿ ಮುಂದುವರಿಸುತ್ತಿದ್ದ.

    ತಂಡವಾಗಿ ಬಂದು ದುಷ್ಕೃತ್ಯ:
    ಆರೋಪಿ ಮೋಹಿತ್ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆರೋಪಿ ಅರಾಫತ್ ಅಹಮದ್ ಬಾಣಸವಾಡಿ, ಸೂರ್ಯನಗರ, ಹೆಣ್ಣೂರು, ಭಾರತಿನಗರ, ಪರಪ್ಪನ ಅಗ್ರಹಾರ, ಕೊಡಿಗೇಹಳ್ಳಿ, ಪುಲಿಕೇಶಿನಗರ, ಸದಾಶಿವನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ ದರೋಡೆ, ಹಲ್ಲೆ, ದ್ವಿಚಕ್ರ ವಾಹನ ಕಳವು ಸೇರಿ ೨೧ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತ ಸಹ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಬದಲಾಗದೆ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಆರೋಪಿ ಸೈಯದ್ ಮಾಜ್ ಸಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳು ತಂಡವನ್ನು ಕಟ್ಟಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

    ಬಂಧನದಿಂದ 10 ಪ್ರಕರಣಗಳು ಪತ್ತೆ:
    ಆರೋಪಿಗಳ ಬಂಧನದಿಂದಾಗಿ ಆರ್.ಟಿ.ನಗರ ಮೂರು ಸುಲಿಗೆ, ಬಾಣಸವಾಡಿ, ನೆಲಮಂಗಲ ಟೌನ್ತ, ಹುಯ್ಯೋ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ದ್ವಿಚಕ್ರ ವಾಹನ ಕಳವು, ಬಾಗಲೂರು, ತಮಿಳುನಾಡಿನ ಶೂಲಗಿರಿ ತಲಾ ಒಂದು ಸುಲಿಗೆ, ಡಿ.ಜೆ.ಹಳ್ಳಿ ಸಾರ್ವಜನಿಕ ಆಸ್ತಿಗೆ ನಷ್ಟ, ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ಹಲ್ಲೆ ಪ್ರಕರಣ ಸೇರಿ ೧೦ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts