More

    VIDEO| ರೌಡಿಗಳಿಂದ ಸರ್ಕಲ್ ಇನ್​ಸ್ಪೆಕ್ಟರ್​ಗೆ ಹೂವಿನ ಅಭಿಷೇಕ! ಸಿಪಿಐ-ಸರ್ಕಾರದ ವಿರುದ್ಧ ಮಾಜಿ ಸಚಿವ ವಾಗ್ದಾಳಿ

    ಹಾಸನ: ಗ್ರಾಮಾಂತರ ವೃತ್ತದ ಇನ್​ಸ್ಪೆಕ್ಟರ್​ ಆಗಿ ನಿನ್ನೆಯಷ್ಟೇ (ಶುಕ್ರವಾರ) ವರ್ಗಾವಣೆಯಾಗಿರುವ ಪಿ.ಸುರೇಶ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

    ಶ್ರವಣಬೆಳಗೊಳ ಬಾಹುಬಾಲಿಗೆ ನಡೆದಂತೆ ಗ್ರಾಮಾಂತರ ಸಿಪಿಐಗೆ ಕೆಲವರು ಹೂವಿನ ಅಭಿಷೇಕ ಮಾಡಿದ್ದಾರೆ. ರೌಡಿಗಳಿಂದ ಈ ರೀತಿ ಗೌರವ ಸ್ವೀಕರಿಸುವುದು ಒಳಿತೇ? ಎಂದು ಎಚ್.ಡಿ. ರೇವಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಪಿಐ ಸುರೇಶ್ ಅವರು ರೌಡಿಗಳನ್ನು ಬೆಳೆಸುವ ಅಧಿಕಾರಿ. ಹೂವಿನ ಹಾರ ಬೀಳ್ಕೊಡುಗೆ ಮಾಡುವಾಗ ಹಾಕ್ಬೇಕು, ಇನ್ನೂ ಆತ ಜಿಲ್ಲೆಗೆ ಬಂದಿಲ್ಲ. ಆಗಲೇ ರೌಡಿಗಳು ಹಾರ ಹಾಕಿ ಬಂದಿದ್ದಾರೆ. ಬಿಜೆಪಿ ಬೇರು ಬೆಳೆಯಲು ಸುರೇಶ್ ಸಹಕರಿಸುತ್ತಾನೆ. ಒಂದು ಸಮಾಜದವರನ್ನು ಗುರಿಯಾಗಿಟ್ಟುಕೊಂಡು ಹೀಗೆ ಮಾಡ್ತಿದಾರೆ. ಜಿಲ್ಲೆಯಲ್ಲಿ ಏನೇ ಅನಾಹುತ ಆದರೂ ಅದಕ್ಕೆ ದಕ್ಷಿಣ ವಲಯ ಐಜಿಯೇ ನೇರ ಕಾರಣ. ಅವರು ರಬ್ಬರ್ ಸ್ಟಾಂಪ್​ನಂತೆ ಆಗಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡುತ್ತದೆ ಎಂದು ರೇವಣ್ಣ ಎಚ್ಚರಿಸಿದರು.

    ಇದನ್ನೂ ಓದಿರಿ ಸಂಸದರ ಕಾರು, ಬಿಎಂಟಿಸಿ ಬಸ್​ಗೆ ದಂಡ ವಿಧಿಸಿದ ಪೊಲೀಸ್​!

    ಐಜಿ ಅವರು ಬಿಜೆಪಿ ಅಣತಿಯಂತೆ ವರ್ಗಾವಣೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ 18 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿರುವುದಾಗಿ ಸುರೇಶ್ ಬಹಿರಂಗವಾಗಿ ಹೇಳಿದ್ದಾನೆ. ಈ ಸಂಬಂಧ ಕೇಂದ್ರ ಸಚಿವ ರಿಗೆ ಪತ್ರ ಬರೆಯುತ್ತೇನೆ ಎಂದು ಗುಡುಗಿದರು.

    ಸರ್ಕಲ್ ಇನ್​ಪೆಕ್ಟರ್​ಗೆ ಸರ್ಕಾರ ಮಂಡಿಯೂರಿದೆ. ಈ ತರಹದ ಜೀವನ ಬೇಕೇನ್ರಿ? ಇದೆಲ್ಲ ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ಇದೆಯೋ ಇಲ್ವೋ ಗೊತ್ತಿಲ್ಲ. ಹೊಳೆನರಸೀಪುರ, ಚನ್ನರಾಯಪಟ್ಟಣಗಳಲ್ಲಿ ನಿತ್ಯ ಮರ್ಡರ್ ಆಗ್ತಿವೆ. ಅಧಿಕಾರಿಗಳ ವರ್ಗಾವಣೆ ದಂಧೆ ನಡೀತಾ ಇದೆ. ಸಿಪಿಐ ಪಿ.ಸುರೇಶ್ ಅವರನ್ನ ಜಿಲ್ಲೆಗೆ ನೇಮಿಸಿದ್ದು ಖಂಡನೀಯ ಎಂದು ಹರಿಹಾಯ್ದರು.

    ಸರ್ಕಲ್​ ಇನ್​ಸ್ಪೆಕ್ಟರ್​ಗೆ ರೌಡಿಗಳಿಂದ ಹೂವಿನ ಅಭಿಷೇಕ!

    ಸರ್ಕಲ್​ ಇನ್​ಸ್ಪೆಕ್ಟರ್​ಗೆ ರೌಡಿಗಳಿಂದ ಹೂವಿನ ಅಭಿಷೇಕ!ವಿಸ್ತೃತ ವರದಿಗಾಗಿ https://bit.ly/2Soq9tS

    Posted by Vijayavani on Saturday, October 3, 2020

    ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts