More

    ಗೋವಾ ಮಾಜಿ ಸಿಎಂ ವಿರುದ್ಧ ಶಿಸ್ತುಕ್ರಮ; ಕಾರ್ಯಕಾರಿ ಸಮಿತಿಯಿಂದಲೇ ಕಿತ್ತೊಗೆದ ಕಾಂಗ್ರೆಸ್​..

    ನವದೆಹಲಿ: ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿದ ಆರೋಪಕ್ಕೆ ಒಳಗಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ವಿರುದ್ಧವೂ ಶಿಸ್ತುಕ್ರಮ ಜರುಗಿದೆ.

    ಗೋವಾದಲ್ಲಿನ ವಿಪಕ್ಷ ನಾಯಕ, ಕಾಂಗ್ರೆಸ್​ನ ಮೈಕೆಲ್ ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿರುವುದು ಮೊನ್ನೆಮೊನ್ನೆಯಷ್ಟೇ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೈಕೆಲ್ ಲೋಬೋವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಪಕ್ಷ ನಾಯಕ ಸ್ಥಾನದಿಂದ ತೆಗೆದು ಹಾಕಿದ್ದಾಗಿ ಜುಲೈ 10ರಂದು ಸುದ್ದಿಗೋಷ್ಠಿ ನಡೆಸಿದ್ದ ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದರು.

    ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಗೋವಾದಲ್ಲೂ ರಾಜಕೀಯ ತಲ್ಲಣ?; ಕಾಂಗ್ರೆಸ್​ ಮುಖಂಡರಿಂದಲೇ ಷಡ್ಯಂತ್ರ!

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದಿಗಂಬರ್ ಕಾಮತ್ ವಿರುದ್ಧವೂ ಶಿಸ್ತುಕ್ರಮ ಜರುಗಿದೆ. ಕಾಂಗ್ರೆಸ್​ನ ಉನ್ನತ ನಿರ್ಣಾಯಕ ಅಂಗವಾದ ಕಾರ್ಯಕಾರಿ ಸಮಿತಿಯಿಂದ ದಿಗಂಬರ್ ಕಾಮತ್ ಅವರನ್ನು ಪಕ್ಷವು ಕಿತ್ತೊಗೆದಿದೆ. ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿನ ಶಾಶ್ವತ ಆಹ್ವಾನಿತ ಸ್ಥಾನದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ದಿಗಂಬರ್ ಕಾಮತ್ ಅವರನ್ನು ಪಕ್ಷದ ಅಧ್ಯಕ್ಷರು ತೆಗೆದಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೆ ಪಕ್ಷವು ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಇಬ್ಬರನ್ನೂ ಸದನದಿಂದ ಅನರ್ಹಗೊಳಿಸುವಂತೆ ಸ್ಪೀಕರ್​ ರಮೇಶ್​ ತವಡ್ಕರ್ ಅವರಲ್ಲಿ ಮನವಿ ಮಾಡಿಕೊಂಡಿದೆ.

    ಕನ್ನಡ ತಪ್ಪಾಗಿ ಬರೆದು ಸರ್ಕಾರಿ ಆದೇಶ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್​ ಆಗ್ರಹ..

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts