More

    ಮುಖ್ಯಮಂತ್ರಿ ನಿವಾಸದಲ್ಲಿ ಜೆಡಿಯುಗೆ ಸೇರ್ಪಡೆಯಾದ ಮಾಜಿ ಡಿಜಿಪಿ ಗುಪ್ತೇಶ್ವರ್​ ಪಾಂಡೆ

    ಪಟನಾ: ಸೆ.22ರಂದು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದ ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಂದು ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಗುಪ್ತೇಶ್ವರ ಪಾಂಡೆ ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿ ಈಗಾಗಲೇ ಹಬ್ಬಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡು ರಾಜಕೀಯಕ್ಕೆ ಸೇರಿದ್ದಾರೆ.

    ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಅವರ ನಿವಾಸದಲ್ಲಿ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾದರು.
    1987ನೇ ಬ್ಯಾಚ್​​ನ ಐಪಿಎಸ್​ ಅಧಿಕಾರಿಯಾಗಿದ್ದ ಗುಪ್ತೇಶ್ವರ್ ಪಾಂಡೆ ವಾಲ್ಮೀಕಿನಗರದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಲೋಹದ ಹಕ್ಕಿಯನ್ನೇ ಹಿಮ್ಮೆಟ್ಟಿಸಿದ ಪಕ್ಷಿ.. ಮುಂಬೈಗೆ ಮರಳಿದ ವಿಮಾನ, ಆಗಿದ್ದಾದರೂ ಏನು?

    ಇನ್ನು ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್​ 28, ನವೆಂಬರ್​ 3 ಮತ್ತು 7ರಂದು ಮೂರು ಹಂತದಲ್ಲಿ ನಡೆಯಲಿದೆ. ನವೆಂಬರ್ 10ರಂದು ಮತ ಎಣಿಕೆಯೂ ನಡೆಯಲಿದೆ. ಗುಪ್ತೇಶ್ವರ್ ಅವರು ತಮ್ಮ ಜಿಲ್ಲೆಯಾದ ಬಕ್ಸಾರ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

    ಸದ್ಯ ಸುಶಾಂತ್ ಸಿಂಗ್ ರಜಪೂತ್​ ಅವರ ಸಾವಿನ ತನಿಖೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಪ್ತೇಶ್ವರ್​ ಪಾಂಡೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರೇ ಬಿಹಾರದ ಮುಂದಿನ ಗೃಹಸಚಿವ ಎಂದೂ ವಿಪಕ್ಷಗಳ ಕೆಲವು ಮುಖಂಡರು ವ್ಯಂಗ್ಯವಾಡಿದ್ದರು.(ಏಜೆನ್ಸೀಸ್​)

    ಪುಲ್ವಾಮಾದಲ್ಲಿ ಮತ್ತೆ ಗುಂಡಿನ ಚಕಮಕಿ.. ಅವಿತಿದ್ದ ಉಗ್ರರಿಂದ ದಾಳಿ, ಯೋಧರಿಂದ ಪ್ರತಿದಾಳಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts