ಜಪ್ತಿಯಾದ ನಗದು ಬಿಡುಗಡೆಗೆ ಸಮಿತಿ ರಚನೆ

k54g681_eci_625x300_27_October_23.jpg
Published on

ಬೆಳಗಾವಿ: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ವ್ಯಕ್ತಿಯು 50 ಸಾವಿರ ರೂ. ನಗದು ಮೊತ್ತವನ್ನು ಯಾವುದೇ ದಾಖಲೆಗಳಿಲ್ಲದೆ ತೆಗೆದುಕೊಂಡು ಹೋಗುತ್ತಿದ್ದಲ್ಲಿ, ಸದರಿ ಮೊತ್ತವು ಚುನಾವಣಾ ಎಫ್‌ಎಸ್‌ಟಿ/ ಎಸ್‌ಎಸ್‌ಟಿ ಅವರಿಂದ ಜಪ್ತಿಯಾದ ಸಂದರ್ಭದಲ್ಲಿ ಅಂತಹ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸಲು ಕ್ಯಾಶ್ ರಿಲೀಸ್ ಕಮಿಟಿ ರಚಿಸಲಾಗಿದೆ. ಜಿಪಂ ಸಿಇಒ ಕ್ಯಾಶ್ ರಿಲೀಸ್ ಕಮೀಟಿ ಅಧ್ಯಕ್ಷರಾಗಿರುತ್ತಾರೆ. ಗೌರಿಶಂಕರ ಕಡೇಚೂರ (ಮೊ.9560273950) ಅವರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದು, ದಾಖಲೆ ಹಾಜರುಪಡಿಸಿ ನಗದು ಮೊತ್ತದ ಬಿಡುಗಡೆಗಾಗಿ ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಎಫ್‌ಎಸ್‌ಟಿ/ಎಸ್‌ಎಸ್‌ಟಿ ತಂಡದವರು ನಗದು ಮೊತ್ತ ಜಪ್ತಿ ಮಾಡಿದ ಬಳಿಕ ಸಾರ್ವಜನಿಕರು ಸೂಕ್ತ ದಾಖಲೆ ಸಲ್ಲಿಸಿ ನಗದು ಮೊತ್ತ ಹಿಂಪಡೆದುಕೊಳ್ಳಬಹುದು ಎಂದು ಜಿಲ್ಲಾ ನೋಡಲ್ ಅಧಿಕಾರಿಗಳು, ಚುನಾವಣಾ ವೆಚ್ಚ ಮೇಲ್ವಿಚಾರಣೆ ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕ್ಯಾಶ್ ರಿಲೀಸ್ ಕಮಿಟಿ ಹಾಗೂ ಕಾಡಾ ಮುಖ್ಯ ಲೆಕ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net