More

    ಫಾರ್ಮ್-3, ಖಾತಾ ಬದಲಾವಣೆ ದಾಖಲೆ ಕೊಡಿ

    ಹೊಸಪೇಟೆ: ನಗರಸಭೆ 8ನೇ ವಾರ್ಡ್ ವ್ಯಾಪ್ತಿಯ ಶಿವಜ್ಯೋತಿ ಬಡಾವಣೆಯಲ್ಲಿರುವ ನಿವೇಶನಗಳಿಗೆ ಫಾರ್ಮ್ ನಂ.3 ಹಾಗೂ ಮತ್ತಿತರ ದಾಖಲೆ ನೀಡಬೇಕು ಎಂದು ಒತ್ತಾಯಿಸಿ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಜಯನಗರ ನಾಗರೀಕ ವೇದಿಕೆ ಮಂಗಳವಾರ ಅಪರ ಜಿಲ್ಲಾಧಿಕಾರಿ ಅನುರಾಧಾಗೆ ಮನವಿ ಸಲ್ಲಿಸಿದವು.

    ಇದನ್ನೂ ಓದಿ:http://ಫಾರ್ಮ್-3, ಖಾತಾ ಬದಲಾವಣೆ ದಾಖಲೆ ಕೊಡಿ
    ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆಯೊಂದಿಗೆ 2005ರಲ್ಲಿ ಶಿವಜ್ಯೋತಿ ಬಡಾವಣೆ ನಿರ್ಮಾಣವಾಗಿದೆ. ಸುಮಾರು 80 ಎಕರೆ ಪ್ರದೇಶದಲ್ಲಿ 1,336 ನಿವೇಶನಗಳನ್ನು ನಿರ್ಮಿಸಿದ್ದು, ನೂರಾರು ನಿವೇಶನದಾರರು ವಿವಿಧ ಇಲಾಖೆಗಳಿಗೆ ಶುಲ್ಕ ಪಾವತಿಸಿ ಕಾನೂನು ಬದ್ಧವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

    2021ರ ಮಾರ್ಚ್‌ವರೆಗೆ ಫಾರ್ಮ್ ನಂ.3 ಹಾಗೂ ಖಾತಾ ಬದಲಾವಣೆ ದಾಖಲೆ ಪಡೆದಿದ್ದಾರೆ. ಆದರೆ, 2021ರ ನಂತರ ಶಿವಜ್ಯೋತಿ ಬಡಾವಣೆಯ ನಿವೇಶನದಾರರಿಗೆ ಫಾರ್ಮ್ ನಂ.3, ಖಾತಾ ಬದಲಾವಣೆ ಸೇರಿ ಇತರ ದಾಖಲೆಗಳನ್ನು ನೀಡುತ್ತಿಲ್ಲ.

    ಬ್ಯಾಂಕ್ ಸಾಲ, ಮಾರಾಟ ಇತರ ಉದ್ದೇಶಗಳಿಗೆ ನಿವೇಶನ, ಮನೆಗೆ ಸಂಬಂಧಿಸಿದ ದಾಖಲೆಗಳು ದೊರೆಯದಿದ್ದರಿಂದ ಜನರು ಪರದಾಡುವಂತಾಗಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts