More

    ಸೀತಾಳಯ್ಯನ ಗಿರಿ ಭಾಗದಲ್ಲಿ ಕಾಡ್ಗಿಚ್ಚು

    ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಹಾಗೂ ದೇಶ ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವು ಆಗಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ಕಾಡ್ಗಿಚ್ಚು ಹಬ್ಬಿದ್ದು ಬೆಂಕಿಯ ಕೆನ್ನಾಲಿಗೆ ನೂರಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯ ತಪ್ಪಲು ಅಪರೂಪದ ಸಸ್ಯ ಸಂಪತ್ತಿನ ರಾಶಿ. ಬಿಸಿಲಿನ ಝಳಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾದ ಪರಿಣಾಮ ನೂರಾರು ಎಕರೆ ಅಪರೂಪದ ಸಸ್ಯರಾಶಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಲು ಹರಸಾಹಸಪಡುತ್ತಿದ್ದಾರೆ.
    ಅರಣ್ಯ ಇಲಾಖೆ, ಅಗ್ನಿ ಶಾಮಕ ಸಿಬ್ಬಂದಿ ಜೊತೆ ಸ್ಥಳಿಯರು ಕೂಡ ಬೆಂಕಿ ನಂದಿಸಲು ಕೈಜೋಡಿಸಿದ್ದಾರೆ. ಆದರೆ, ಭಾರೀ ಗಾಳಿಗೆ ಬೆಂಕಿಯ ಜ್ವಾಲೆ ಹರಡುತ್ತಲೇ ಇದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಭಾನುವಾರವಾಗಿದ್ದರಿಂದ ನೂರಾರು ಪ್ರವಾಸಿಗರು ಗಿರಿ ಪ್ರದೇಶಕ್ಕೆ ಬಂದಿದ್ದು, ಇವರೂ ಗಿರಿ ಪ್ರದೇಶದಲ್ಲೇ ಸಿಕ್ಕಿಹಾಕಿಕೊಳ್ಳುವಂತಾಗಿತ್ತು. ಮುಳ್ಳಯ್ಯನಗಿರಿ ಮಾರ್ಗದಲ್ಲೇ ಬೆಂಕಿ ಹತ್ತಿದ್ದು, ರಸ್ತೆ ಬದಿಯೂ ಬೆಂಕಿ ಬಂದಿದ್ದರಿAದ ಕೆಲ ಪ್ರವಾಸಿಗರು ಗಿರಿ ಭಾಗದಿಂದ ಚಿಕ್ಕಮಗಳೂರಿಗೆ ಬರಲು ಸಾಧ್ಯವಾಗದೆ ಗಂಟೆಗಟ್ಟಲೇ ಕಾಯುವಂತಾಯಿತು.
    ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿಯ ಜ್ವಾಲೆ ಸ್ವಲ್ಪ ಕಡಿಮೆಯಾದ ಬಳಿಕ ಕಳಿಸುತ್ತೇವೆ ಎಂದು ಹೇಳಿ ಅಲ್ಲೆ ಉಳಿಸಿಕೊಂಡು ಬಳಿಕ ಕಳುಹಿಸಿದ್ದಾರೆ. ಆದರೆ ಬೆಂಕಿಯಿAದ ಪ್ರವಾಸಿಗರು ಸೇರಿದಂತೆ ಯಾರಿಗೂ ತೊಂದರೆಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ರಸ್ತೆಯಲ್ಲಿ ನಿಂತು ನೀರುನ್ನು ಸಿಂಪಡಿಸುವ ಮೂಲಕ ಬೆಂಕಿಯನ್ನು ನಂದಿಸಲಾರAಭಿಸಿದ್ದಾರೆ. ಬಿಸಿಲ ಧಗೆಗೆ ಅರಣ್ಯ ಸಂಪೂರ್ಣ ಒಣಗಿ ನಿಂತಿರುವುದರಿAದ ನೋಡನೋಡುತ್ತಿದ್ದಂತೆ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದ್ದು, ಪ್ರಾಣಿ ಪಕ್ಷಿಗಳು ಕೂಡ ಜೀವ ತೆತ್ತಿರುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts