More

    ಸಣಾಪುರ ಕೆರೆಯಲ್ಲಿ ಹರಿಗೋಲಿಗೆ ತಡೆ

    ಗಂಗಾವತಿ: ತಾಲೂಕಿನ ಸಣಾಪುರದ ನಿಷೇಧಿತ ವಲಯದ ಕೆರೆಯಲ್ಲಿ ಹರಿಗೋಲು ಹಾಕಲು ತಾತ್ಕಾಲಿಕ ತಡೆ ನೀಡಿದ್ದು, ಕಾನೂನು ಬದ್ಧ ಪ್ರಕ್ರಿಯೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ಶುರುಮಾಡಿದ್ದಾರೆ. ನಿಷೇಧಿತ ವಲಯ ಸಣಾಪುರ ಕೆರೆಯಲ್ಲಿ ಹರಿಗೋಲು ಹಾಕುವುದು ಮತ್ತು ಲ್ೈ ಜಾಕೆಟ್ ಇಲ್ಲದೆ ಹರಿಗೋಲಿನಲ್ಲಿ ಸಂಚಾರ ನಿಷೇಧವಿದ್ದು, 2005ರಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. 2019ರಲ್ಲೂ ತಾಲೂಕಾಡಳಿತ ನಿಷೇಧದ ಆದೇಶ ಹೊರಡಿಸಿದೆ.

    ತೀರ್ಪು ಮತ್ತು ಆದೇಶ ಉಲ್ಲಂಸಿ ಮಕರ ಸಂಕ್ರಾಂತಿ ದಿನದಂದು ಶಾಸಕ ಗಾಲಿ ಜನಾರ್ದನರೆಡ್ಡಿ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹರಿಗೋಲು ಹಾಕಲು ಅವಕಾಶ ನೀಡಿ, ಶಿಷ್ಟಾಚಾರ ಉಲ್ಲಂಘನೆ ಪೇಚಿಗೆ ಸಿಲುಕಿದೆ. ತೀರ್ಪು ಉಲ್ಲಂಘನೆ ವಿಚಾರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ತೆಪ್ಪ ಹಾಕುವುದಕ್ಕೆ ತಡೆ ನೀಡಿದ್ದಾರೆ. 16 ತೆಪ್ಪ ಹೊರತು ಹೊಸದಾಗಿ ಬಂದಿದ್ದ ನಾಲ್ಕು ತೆಪ್ಪಗಳನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಈ ಕುರಿತು ವಿಜಯವಾಣಿಯಲ್ಲಿ ಜ.16ರಂದು ‘ನಿಷೇಧಿತ ವಲಯದಲ್ಲಿ ಹರಿಗೋಲು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

    ಮಾಹಿತಿಯೇ ಇಲ್ಲ..?

    ಕೆರೆಯಲ್ಲಿ ಮೀನುಗಾರಿಕೆ ಮತ್ತು ಹರಿಗೋಲು ಸಂಚಾರ ಜವಾಬ್ದಾರಿ ಗ್ರಾಪಂಗಿದ್ದು, ತಾಪಂ ಸೂಚನೆ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಿದೆ. ತಾಪಂ ಗಮನಕ್ಕಿಲ್ಲದೇ ಶಿಷ್ಟಾಚಾರ ಉಲ್ಲಂಸಿ ಚಾಲನೆ ನೀಡಲಾಗಿದೆ. ಸ್ವತಃ ತಾಪಂ ಇಒ ಲಕ್ಷ್ಮೀದೇವಿ ಯಾದವ್ ಪ್ರತಿಕ್ರಿಯಿಸಿ ಹರಿಗೋಲು ನಿಷೇಧವಿದ್ದು, ಮತ್ತೆ ಆರಂಭಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಘಟನೆ ನಡೆದು 24 ಗಂಟೆಯಾದರೂ ಗ್ರಾಪಂ ಮಾಹಿತಿ ನೀಡಿಲ್ಲ. ಮಾಹಿತಿಗಾಗಿ ಪಿಡಿಒಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು.
    ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ, ತಾಲೂಕಾಡಳಿತದ ಗಮನಕ್ಕಿಲ್ಲದೇ ನಿಷೇಧಿತ ವಲಯದಲ್ಲಿ ಹರಿಗೋಲು ಅವಕಾಶ ನೀಡಿದ್ದು ಸರಿಯಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಏನಾದರು ಅನಾಹುತ ಹಾಗೂ ಕಾನೂನು ತೊಡಕು ಎದುರಾದಲ್ಲಿ ಅರಣ್ಯ ಅಧಿಕಾರಿಗಳೇ ಅನುಭವಿಸಲಿ ಎಂದರು. ಏತನ್ಮಧ್ಯೆ ಸಣಾಪುರ ಕೆರೆಯಲ್ಲಿ ಅವಕಾಶ ನೀಡಿದ್ದಕ್ಕೆ ಸಣಾಪುರ ಾಲ್ಸ್ ಮತ್ತು ಅತಿಥಿ ಗೃಹ ಮುಂಭಾಗದ ನದಿಯಲ್ಲೂ ಹರಿಗೋಲು ಸಂಚಾರ ಶುರುವಾಗಿದ್ದು, ಸುರಕ್ಷತೆ ಸಮಸ್ಯೆ ಜತೆಗೆ ಕಿರಿಕಿರಿ ಹೆಚ್ಚಾಗಿದೆ.

    ವಿಷನ್ ಓಕೆ, ವಿಧಾನ ಸರಿಯಿಲ್ಲ…

    ತಾಲೂಕಿನ ಸಣಾಪುರ ಭಾಗದಲ್ಲಿ ಇಕೋ ಟೂರಿಸಂ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ವಿಷನ್ ಸರಿಯಿದ್ದರೂ, ಕಾನೂನು, ಕಾಯ್ದೆಯಡಿ ನಿರ್ವಹಿಸದೇ ತರಾತುರಿಯಲ್ಲಿ ನಿರ್ವಹಿಸಿದ್ದು ಸರಿಯಲ್ಲ ಎನ್ನುತ್ತಾರೆ ಪರಿಸರವಾದಿಗಳು. ನೀರು ನಾಯಿ ಸಂರಕ್ಷಿತ ಪ್ರದೇಶವಿದ್ದು, ಅಪಾಯಕಾರಿ ಸ್ಥಳವಾಗಿದೆ. ಹರಿಗೋಲು ಮುಂದುವರಿಸಿದರೆ, ನದಿಯಲ್ಲಿ ಕ್ಲಿಪ್ ಜಂಪಿಂಗ್ ಇತರ ಚಟುವಟಿಕೆಗಳು ಹೆಚ್ಚಾಗಲಿವೆ. ಅಮಲು ಪದಾರ್ಥ ಮಾರಾಟವೂ ಮುನ್ನೆಲೆಗೆ ಬರಲಿದೆ. ಸ್ಥಳೀಯರೊಂದಿಗೆ ಚರ್ಚಿಸದೇ, ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸದೇ ತರಾತುರಿಯಲ್ಲಿ ಚಾಲನೆ ನೀಡುವ ಅಗತ್ಯ ಏನೀತ್ತು ಎಂಬುದು ಸ್ಥಳೀಯರು ಪ್ರಶ್ನಿಸಿದ್ದಾರೆ.

    ದೂರ ದೃಷ್ಟಿ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅವಕಾಶ ನೀಡಿದ್ದು, ಕಾನೂನಾತ್ಮಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಇಕೋ ಟೂರಿಸ್‌ಂ ಅಭಿವೃದ್ಧಿ ವಿಚಾರದಲ್ಲಿ ನನ್ನ ಇಲಾಖೆಗೆ ನಾನೇ ಸುಪ್ರೀಂ, ಬೇರೆ ಇಲಾಖೆ ಗಮನಕ್ಕೆ ತರುವ ಅಗತ್ಯವಿಲ್ಲ.
    ಸುಭಾಸ್‌ಚಂದ್ರ
    ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts