More

    ಅರಣ್ಯ ಸಂರಕ್ಷಣೆ ನಮ್ಮ ಹೊಣೆ

    ಖಾನಾಪುರ: ಪಶ್ಚಿಮ ಘಟ್ಟಗಳಿಂದ ಸುತ್ತುವರಿದಿರುವ ಖಾನಾಪುರ ತಾಲೂಕು ಅಪರೂಪದ ವನ್ಯಜೀವಿ ಮತ್ತು ಅರಣ್ಯ ಸಂಪತ್ತಿನಿಂದ ಕೂಡಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

    ಪಟ್ಟಣ ಪಂಚಾಯಿತಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 69ನೇ ಜಿಲ್ಲಾಮಟ್ಟದ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅರಣ್ಯಾಧಿಕಾರಿ ಕಲೋಳಿಕರ ಮಾತನಾಡಿ, ಮನುಷ್ಯನ ಅಸ್ತಿತ್ವ ಅರಣ್ಯದ ಮೇಲೆ ಅವಲಂಬಿತವಾಗಿದೆ. ಪ್ರಾಣಿ ಪ್ರಪಂಚದ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯ ಬೆಳೆಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಪದಕ ಪಡೆದ ಲೋಂಡಾ ವಿಭಾಗದ ಅರಣ್ಯ ರಕ್ಷಕ ಗುಂಡಪ್ಪ ಎಸ್., ಪರಿಸರ ಪ್ರೇಮಿ ಗಿರಿಧರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷ ಚವ್ಹಾಣ ಪರಿಚಯಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ, ತಾಪಂ ಇಒ ವೀರನಗೌಡ ಏಗನಗೌಡರ, ಎಸಿಎಫ್ ಎಂ.ಬಿ. ಕುಸ್ನಾಳ, ಶಿವರುದ್ರಪ್ಪ ಕಬಾಡಗಿ, ಬಸವರಾಜ ವಾಳದ, ನಾಗರಾಜ ಬಾಳೆಹೊಸೂರ, ರಾಕೇಶ ಅರ್ಜುನವಾಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts