ಯರಗಟ್ಟಿ: ಕರೊನಾ ಹೊಡೆತದಿಂದ ಪರಿತಪಿಸುತ್ತಿದ್ದ ಬಡವರು, ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಮರುಜೀವ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದರಿಂದ ಅನೇಕ ಜನರು ತುತ್ತಿನ ಜೋಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ.
ಸವದತ್ತಿ ತಾಲೂಕಿನಲ್ಲಿ ಮೂರು ಸಾವಿರಕ್ಕೂ ಅಧಿಕ ಜನರು ನಿತ್ಯ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ದೈಹಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೂಲಿ ಮೊತ್ತ ಹೆಚ್ಚಳ ಮಾಡಿರುವುದರಿಂದ ಕಾರ್ಮಿಕರು ಸಂತಸಗೊಂಡಿದ್ದಾರೆ. ಯರಗಟ್ಟಿ ಸಮೀಪದ ಕೋರಕೊಪ್ಪ, ಸತ್ತಿಗೇರಿ, ಮುಗಳಿಹಾಳ, ಮಾಡಮಗೇರಿ, ಯರಝರ್ವಿ, ಆಲದಕಟ್ಟಿ ಗ್ರಾಮಗಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇನ್ನುಳಿದ ಗ್ರಾಮಗಳಲ್ಲಿಯೂ ಶೀಘ್ರ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸವದತ್ತಿ ತಾಲೂಕಿನಲ್ಲಿ 32 ಸಾವಿರ ಮಾನವ ದಿನ ಸೃಜಿಸಲಾಗಿದೆ. 95 ಲಕ್ಷ ರೂ. ಕೂಲಿ ಕಾರ್ಮಿಕರ ಖಾತೆಗೆ ಈಗಾಗಲೇ ಜಮೆಯಾಗಿದೆ.
| ಆನಂದ ಮಾಮನಿ ಉಪ ಸಭಾಪತಿ’ನರೇಗಾ ಯೋಜನೆ ಉತ್ತಮ ಅವಕಾಶ. ಕೂಲಿ ಕಾರ್ಮಿಕರು ಸದುಪಯೋಗ ಪಡೆಯಬೇಕು.
| ಸಂಗನಗೌಡ ಹಂದ್ರಾಳ ತಾಪಂ ಎಡಿ