More

    ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟದ್ದು ಬಸವ ಧರ್ಮ – ಡಾ.ಮಲ್ಲಿಕಾರ್ಜುನ ಶ್ರೀ

    ಬೆಳಗಾವಿ: ಜೀವನಕ್ಕೆ ನೀತಿ ಸಂಹಿತೆ ಹಾಕಿಕೊಟ್ಟ ಧರ್ಮ ಯಾವುದಾದರೂ ಇದ್ದರೆ ಅದು ಬಸವಧರ್ಮ ಮಾತ್ರ ಎಂದು ಶಿವಮೊಗ್ಗ ಆನಂದಪುರಂ ಮುರುಘಾಮಠದ ಮನ್ನಿರಂಜನ್ ಜಗದ್ಗುರು ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

    ನಗರದದ ನಾಗನೂರು ರುದ್ರಾಕ್ಷಿಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂ.ಡಾ.ಶಿವಬಸವ ಸ್ವಾಮೀಜಿ 131ನೇ ಜಯಂತಿ ಆಚರಣೆಯಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬಸವಾದಿ ಶರಣರು ನಿರೂಪಿಸಿದ ನಮ್ಮ ಧರ್ಮ, ನಮ್ಮ ಸಂಸ್ಕೃತಿಯ ಪ್ರತೀಕ ಷಟಸ್ಥಲ ಧ್ವಜವಾಗಿದೆ. ಜೀವನದಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕ ವಿಚಾರಗಳೊಂದಿಗೆ ಬದುಕು ನಡೆಸಬೇಕುಎಂದರು.

    ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಹೊಸಮನಿ ಹಾಗೂ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿ ಸದಸ್ಯರಿಂದ ವಚನ ಪ್ರಾರ್ಥನೆ ಜರುಗಿತು.

    ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್.ವಿ.ಮಾನವಿ ಮಾಲಾರ್ಪಣೆ ಮಾಡಿದರು. ಸುರೇಶ ಗಾಡವಿ ಜಂಗಮ ಪಾದಪೂಜೆ ನೆರವೇರಿಸಿದರು. ಲಿಂ. ಡಾ.ಶಿವಬಸವ ಸ್ವಾಮೀಜಿ ಭಾವಚಿತ್ರಕ್ಕೆ ಗೌರವ ಅರ್ಪಿಸಲಾಯಿತು. ಪ್ರೊ. ಸಿ.ಜಿ. ಮಠಪತಿ ಸ್ವಾಗತಿಸಿದರು. ಪ್ರೊ.ಎ.ಕೆ. ಪಾಟೀಲ ನಿರೂಪಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಬಿ. ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts