More

    ಫ್ಲಿಪ್‌ಕಾರ್ಟ್, ಸಿಐಜಿಎಫ್‌ಐಎಲ್ ಕಂಪನಿಗಳಿಗೆ ದಂಡ

    ಧಾರವಾಡ: ಸೇವಾ ನ್ಯೂನತೆ ಎಸಗಿದ ಫ್ಲಿಪ್‌ಕಾರ್ಟ್ ಮತ್ತು ಸಿಐಜಿಎಫ್‌ಐಎಲ್ ಕಂಪನಿಗಳಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.


    ತಾಲೂಕಿನ ಖಾನಾಪೂರ ಮ. ತಡಕೋಡ ಗ್ರಾಮದ ಈರಣ್ಣ ಗುಂಡಗೋವಿ ಎಂಬುವರು ಫ್ಲಿಪ್‌ಕಾರ್ಟ್ ಕಂಪನಿಯಿ೦ದ ಆನ್‌ಲೈನ್ ಮೂಲಕ 2023ರ ಜ. 14ರಂದು 2,632 ರೂ. ಪಾವತಿಸಿ ಮಿಲ್ಟನ್ ಬ್ರ‍್ಯಾಂಡ್‌ನ ಥರ್ಮಸ್ ಆರ್ಡರ್ ಮಾಡಿದ್ದರು. ಕೋರಿಯರ್ ಮೂಲಕ ಬಂದ ಥರ್ಮಸ್ ತೆರೆದು ನೋಡಿದಾಗ ದೋಷ ಕಂಡುಬ೦ದಿತ್ತು. ಹೀಗಾಗಿ ಕೋರಿಯರ್‌ನವರು ಹಿಂಪಡೆದುಕೊ೦ಡು ಹೋಗಿದ್ದರು. ಆದರೆ, ಆ ದೋಷಯುಕ್ತ ಥರ್ಮಸ್ ಬದಲು ಹೊಸ ಥರ್ಮಸ್ ಕೊಡದೆ, ಅದರ ಹಣವನ್ನೂ ಮರಳಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಈರಣ್ಣ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಕಂಪನಿಯು ಸೇವಾ ನ್ಯೂನತೆ ಎಸಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಥರ್ಮಸ್‌ನ ಮೌಲ್ಯ 2,632 ರೂ. ಮರಳಿಸಬೇಕು. ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ 10,000 ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು 5,000 ರೂ. ಪಾವತಿಸಬೇಕು ಎಂದು ಆಯೋಗ ತೀರ್ಪಿನಲ್ಲಿ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts