More

    ತ್ಯಾಜ್ಯ ನೀರಿಂದ ಮೀನು ಕೃಷಿ ನಾಶ

    ಮೂಲ್ಕಿ: ಬಹುಮಹಡಿ ಕಟ್ಟಡಗಳ ತ್ಯಾಜ್ಯ ನೀರು ಶಾಂಭವಿ ನದಿಗೆ ಬಿಟ್ಟ ಪರಿಣಾಮ ಕೊಳಚಿಕಂಬಳ ನದಿ ಬದಿ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ನಡೆಸುತ್ತಿರುವ ಮೀನು ಕೃಷಿಗೆ ಹಾನಿಯಾಗಿದೆ.

    ಕೆಲವು ಬಹುಮಹಡಿ ವಸತಿ ಸಂಕೀರ್ಣಗಳು ತ್ಯಾಜ್ಯ ನೀರು ಸಂಸ್ಕರಿಸದೆ ಪೈಪ್‌ಗಳ ಮೂಲಕ ನದಿಗೆ ಬಿಡುತ್ತಿದ್ದಾರೆ. ಇದರಿಂದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಮೀನು ಹಾಗೂ ಮೀನು ಮರಿಗಳು ನಾಶವಾಗಿವೆ ಎಂದು ಮೀನು ಕೃಷಿಕ ಜೀವನ್ ಕೋಟ್ಯಾನ್ ದೂರಿದ್ದಾರೆ. ಈ ಬಗ್ಗೆ ಪರಿಸರ ಇಲಾಖೆ, ನಗರ ಪಂಚಾಯಿತಿ ಹಾಗೂ ಮೀನುಗಾರಿಕಾ ಇಲಾಖೆಗೆ ದೂರು ನೀಡಿದ್ದು, ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ಡಾ.ಸುಶ್ಮಿತಾ ರಾವ್, ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ತ್ಯಾಜ್ಯ ನೀರಿನಿಂದ ಮೀನುಗಳು ಸತ್ತಿವೆಯೇ ಎಂದು ತಿಳಿಯಲು ನೀರಿನ ಸ್ಯಾಂಪಲ್ ಹಾಗೂ ಸತ್ತ ಮೀನನ್ನು ಪರಿಶೀಲಿಸಿ ಮಂಗಳೂರಿನ ಫಿಶರೀಸ್ ಇಲಾಖೆಯ ಅಧಿಕಾರಿಗಳ ಮುಖಾಂತರ ತನಿಖೆ ನಡೆಸಲಾಗುವುದು.

    ಡಾ.ಸುಶ್ಮಿತಾ ರಾವ್
    ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts