More

    ಜನಕಲ್ಯಾಣದ ಧರ್ಮಕಾರ್ಯ, ಸತ್ಕೀರ್ತಿ ಶಾಶ್ವತ

    ಧಾರವಾಡ: ಮನುಷ್ಯನ ಜೀವನದಲ್ಲಿ ಆಸ್ತಿ, ಅಂತಸ್ತು, ಅಽಕಾರ, ಹಣ, ಯೌವ್ವನ ಎಲ್ಲವೂ ಶಾಶ್ವತವಲ್ಲ. ಇದು ನಿಸರ್ಗದ ನಿಯಮ. ಆದರೆ, ಮಾನವನು ತನ್ನ ಇಹದ ಬದುಕಿನಲ್ಲಿ ಮಾಡಿರುವ ಜನಕಲ್ಯಾಣದ ಧರ್ಮಕಾರ್ಯ ಮತ್ತು ಗಳಿಸಿದ ಸತ್ಕೀರ್ತಿ ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಕಲಬುರ್ಗಿ ಜಿಲ್ಲೆ ಸೂಗೂರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಆಶೀರ್ವಚನ ನೀಡಿದರು.
    ಮುಂದಿನ ಪೀಳಿಗೆ ಸತ್ಯ- ಶುದ್ಧ ನೀತಿ ಸಂಹಿತೆಯನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರರಂಥ ಮಹಾತ್ಮರ ಬದುಕಿನ ಕ್ಷಣಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವ ಅಗತ್ಯವಿದೆ. ಶರಣಬಸವೇಶ್ವರರ ತಾಯಿ ಮಡಿಯಮ್ಮನಿಗೆ ಸಂತಾನ ಆಗಿರಲಿಲ್ಲ. ಸ್ವಾಭಾವಿಕವಾಗಿ ಆ ತಾಯಿಗೆ ಮಕ್ಕಳಿಲ್ಲವೆಂಬ ನೋವು ಕಾಡುತ್ತಿತ್ತು. ಅದನ್ನು ಪತಿಯೊಂದಿಗೆ ಹಂಚಿಕೊAಡಳು. ಆಗ ಆದಯ್ಯನು, ಹಿಂದಿನ ಹಲವಾರು ಋಷಿಗಳಿಗೆ ಮಕ್ಕಳಿರಲಿಲ್ಲ. ಅವರು ಶಿವನನ್ನು ಧ್ಯಾನಿಸಿ ಮಕ್ಕಳನ್ನು ಪಡೆದಿದ್ದಾರೆ. ಹಾಗಾಗಿ ನಾವು ಶಿವನಲ್ಲಿ ಮೊರೆ ಇಟ್ಟು ನಿರಂತರ ಧರ್ಮ ಕಾರ್ಯಗಳನ್ನು ಮಾಡೋಣ; ನಮಗೂ ಶಿವನೊಲುಮೆ ಆಗುತ್ತದೆ ಎಂದನು. ಮಡಿಯಮ್ಮನಿಗೆ ಆದಯ್ಯನ ಮಾತು ಮಂತ್ರವಾಯಿತು. ಭಕ್ತಿಯ ಬದ್ಧತೆಯಿಂದ ಗುರುಸೇವೆ- ಹರಪೂಜೆ ಮಾಡುತ್ತಾಳೆ. ಇದಕ್ಕೆ ಶಿವನು ಫಲ ನೀಡುತ್ತಾನೆ. ಒಂದು ದಿನ ಆದಯ್ಯನ ಕನಸಿನಲ್ಲಿ ಜಂಗಮನು ಕಾಣಿಸಿಕೊಂಡು, ನಿನ್ನ ಚಿಕ್ಕ ತಮ್ಮನ ಪತ್ನಿ ಸಂಗಮ್ಮನ ಗರ್ಭದಿಂದ ಒಂದು ಪುತ್ರರತ್ನ ಜನಿಸುತ್ತದೆ. ಆ ಮಗುವನ್ನು ಅವರು ನಿಮ್ಮ ಉಡಿಗೆ ಹಾಕುತ್ತಾರೆ. ಅವನು ಪ್ರಖ್ಯಾತಿಯನ್ನು ಹೊಂದುತ್ತಾನೆ. ಅವನಿಗೆ ಶರಣಬಸವೇಶ್ವರ ಎಂದೇ ನಾಮಕರಣ ಮಾಡಿರಿ' ಎಂದು ಹೇಳಿದನು. ಇದರಂತೆ ಅದೇ ಜಂಗಮನು ಸಂಗಮ್ಮಳ ಕನಸಿನಲ್ಲಿ ಪ್ರತ್ಯಕ್ಷನಾಗಿನಿನಗೆ ಹುಟ್ಟುವ ಗಂಡು ಮಗುವನ್ನು ಆದಯ್ಯ- ಮಡಿಯಮ್ಮರಿಗೆ ಧಾರೆ ಎರೆಯಬೇಕು. ಆ ಮಗು ಲೋಕಕಲ್ಯಾಣಕ್ಕಾಗಿಯೇ ಜನಿಸುತ್ತದೆ’ ಎಂದನು.
    ಶಿವಸAಕಲ್ಪದAತೆ ಜನಿಸಿದ ಗಂಡು ಮಗುವನ್ನು ಸಂಗಮ್ಮ ಮತ್ತು ಅವಳ ಪತಿ ಸೇರಿ ಆದಯ್ಯ ಹಾಗೂ ಮಡಿಯಮ್ಮರ ಉಡಿಗೆ ಸಮರ್ಪಿಸಿ ಧನ್ಯತೆ ಹೊಂದುತ್ತಾರೆ. ಮಡಿಯಮ್ಮ ಸಾಕ್ಷಾತ್ ಶಂಕರನೇ ತನಗೆ ಮಗುವಾಗಿ ಬಂದಷ್ಟು ಭಕ್ತಿಯ ತನ್ಮಯತೆಯಲ್ಲಿ ತೇಲಾಡುತ್ತಾಳೆ. ವೀರಶೈವ ಧರ್ಮ ಪದ್ಧತಿಯಂತೆ ಹುಟ್ಟಿದ ಮಗುವಿಗೆ ಭಸ್ಮ ಮತ್ತು ಲಿಂಗಧಾರಣೆ ಮಾಡಲಾಯಿತು ಎಂದು ಶ್ರೀಗಳು ಹೇಳಿದರು.
    ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts