More

    ಮಗಳ ಸಮ್ಮುಖದಲ್ಲೇ ಬಹುಕಾಲದ ಗೆಳೆಯನನ್ನು ವರಿಸಿದ ಫಿನ್​ಲ್ಯಾಂಡ್​ ಪ್ರಧಾನಿ!

    ಹೆಲ್ಸಿಂಕಿ: ಬಹುಕಾಲದ ಗೆಳೆಯ ಮಾರ್ಕಸ್​ ರೈಕ್ಕೊನೆನ್​ರನ್ನು ವರಿಸುವ ಮೂಲಕ ಫಿನ್​ಲ್ಯಾಂಡ್​ ಪ್ರಧಾನಮಂತ್ರಿ ಸನ್ನಾ ಮರೀನ್ ಅಧಿಕೃತವಾಗಿ​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮಾರ್ಕಸ್​ ಹಾಗೂ ಮರೀನ್​ ಇಬ್ಬರು 34 ವರ್ಷ ವಯೋಮಾನದವರು. 18ನೇ ವಯಸ್ಸಿನಲ್ಲೇ ಪರಿಚಿತರಾಗಿ ಅಂದಿನಿಂದ ಸುಮಾರು 16 ವರ್ಷಗಳ ಕಾಲ ಜತೆಯಲ್ಲಿದ್ದರು. ಭಾನುವಾರ ಮರೀನ್​ ಅಧಿಕೃತ ನಿವಾಸ ಕೇಸರಂತ್​ನಲ್ಲಿ ಮದುವೆಯಾಗಿದ್ದಾರೆ. ಈ ಸಮಾರಂಭದಲ್ಲಿ ಗಣ್ಯರು, ಕುಟುಂಬ ವರ್ಗ ಹಾಗೂ ಆಪ್ತರು ಸೇರಿ ಸುಮಾರು 40 ಅತಿಥಿಗಳು ಮಾತ್ರ ಪಾಲ್ಗೊಂಡಿದ್ದರು. ದಂಪತಿಗೆ ಈಗಾಗಲೇ ಎರಡೂವರೆ ವರ್ಷದ ಮಗಳಿದ್ದಾಳೆ.

    ಇದನ್ನೂ ಓದಿ: ಮಾವನ ಜತೆ ತೆರಳಿದ ಹುಡುಗಿಯರಿಬ್ಬರು ಮನೆಗೆ ಮರಳಿದ್ದು ಹೆಣವಾಗಿ: ಅಷ್ಟಕ್ಕೂ ನಡೆದಿದ್ದೇನು?

    ನಾನು ಪ್ರೀತಿಸುತ್ತಿದ್ದ ವ್ಯಕ್ತಿಯೊಂದಿಗೆ ನನ್ನ ಜೀವನವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಲು ನನೆಗೆ ಸಂತೋಷವಾಗುತ್ತಿದೆ. ಜೀವನದ ಏರುಪೇರುಗಳಲ್ಲಿ ನಾವಿಬ್ಬರು ಒಬ್ಬರಿಗೊಬ್ಬರು ಪ್ರತಿಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೇವೆ. ನಮ್ಮ ಯೌವ್ವನದಲ್ಲಿ ಒಟ್ಟಿಗೆ ವಾಸಿಸಿದ್ದೇವೆ. ಒಟ್ಟಿಗೆ ಬೆಳೆದಿದ್ದೇವೆ. ಇನ್ಮುಂದೆ ನಮ್ಮ ಮಗಳೊಟ್ಟಿಗೆ ಬೆಳೆಯುತ್ತೇವೆ ಎಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮರೀನ್​ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ರಾಜಕೀಯ ವಿಚಾರಕ್ಕೆ ಬಂದರೆ ಮರೀನ್​ ಅವರು ಫಿನ್​ಲ್ಯಾಂಡ್​ನ ಮಧ್ಯ-ಎಡ ಸರ್ಕಾರವನ್ನು ಮುನ್ನೆಡೆಸುತ್ತಿದ್ದಾರೆ. ಮರೀನ್​ ಅವರ ಶಾಶ್ವತ ಮನೆ ಟ್ಯಾಂಪೇರ್‌ನ ಕಲೆವಾ ಜಿಲ್ಲೆಯಲ್ಲಿದೆ. ಆದರೆ, ಕರೊನಾ ವೈರಸ್​ ಸಮಯದಲ್ಲಿ ಅವರು ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ನೆಲೆಸಿದ್ದಾರೆ. 2015ರಿಂದಲೂ ಮರೀನ್​ ಸಂಸದೆಯಾಗಿದ್ದಾರೆ. ಅತಿ ಕಿರಿಯ ವಯಸ್ಸಿನ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)

    ಸುಶಾಂತ್​ ಪ್ರಕರಣದ ತನಿಖೆಗೆ ಆಗಮಿಸಿದ ಬಿಹಾರದ ಐಪಿಎಸ್​ ಅಧಿಕಾರಿಗೆ ಶಾಕ್ ಕೊಟ್ಟ ಮುಂಬೈ ಅಧಿಕಾರಿಗಳು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts