More

    ನಾವೂರು ಗ್ರಾಮಸಭೆಯಲ್ಲಿ ಹೊಡೆದಾಟ

    ಬಂಟ್ವಾಳ: ಲೋಕಸಭೆ, ವಿಧಾನಸಭೆಯಲ್ಲಿ ಸದಸ್ಯರು ಯಾವುದೋ ವಿಚಾರವನ್ನೆತ್ತಿ ಪರಸ್ಪರ ವಾಗ್ವಾದ, ತಳ್ಳಾಟ, ನೂಕಾಟ ನಡೆಸುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಗ್ರಾಮದ ಸರ್ಕಾರವೆಂದೇ ಪರಿಗಣಿಸಲ್ಪಡುವ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಹೊಕೈ ನಡೆದ ವಿದ್ಯಮಾನ ಬಂಟ್ವಾಳ ತಾಲೂಕಿನ ನಾವೂರು ಗ್ರಾಪಂನಲ್ಲಿ ಸೋಮವಾರ ನಡೆದಿದೆ.

    ಬಿಲ್‌ನ ವಿಚಾರವೊಂದಕ್ಕೆ ಸಂಬಂಧಿಸಿ ಸದಸ್ಯರೋರ್ವರಿಗೆ ಗ್ರಾಮದ ಪ್ರಥಮ ಪ್ರಜೆಯೇ ಹಲ್ಲೆ ನಡೆಸಿದಲ್ಲದೆ ಚೂರಿ ಇರಿಯಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.
    ಈ ಘಟನೆಯಿಂದ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯ ಜನಾರ್ದನ ಗಾಯಗೊಂಡು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ ಉಮೇಶ್ ಕುಲಾಲ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ತನ್ನ ವಾರ್ಡ್‌ನಲ್ಲಾದ ಕಾಮಗಾರಿಯೊಂದರ ಬಿಲ್‌ನ ಬಾಬ್ತು ಗುತ್ತಿಗೆದಾರನಿಗೆ ಹಣ ನೀಡಲು ಅಧ್ಯಕ್ಷ ಉಮೇಶ್ ಕುಲಾಲ್ ಮೀನಮೇಷ ಎಣಿಸುತ್ತಿದ್ದರೆನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಸದಸ್ಯ ಜನಾರ್ದನ ಸೋಮವಾರ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ್ದರು. ಇದರಿಂದ ಕುಪಿತರಾದ ಅಧ್ಯಕ್ಷರು ವಾಗ್ವಾದಕ್ಕಿಳಿದು ಏಕಾಏಕಿ ಸದಸ್ಯ ಜನಾರ್ದನ ಅವರ ಮೇಲೆರೆಗಿದ್ದಾರೆ. ಕೇಕ್ ಕತ್ತರಿಸುವ ಫೈಬರ್ ಚೂರಿಯಿಂದ ಇರಿಯಲು ಮುಂದಾದಾಗ ಇತರ ಸದಸ್ಯರು ಮಧ್ಯಪ್ರವೇಶಿಸಿದರಿಂದ ಪಾರಾಗಿದ್ದಾಗಿ ತಿಳಿದುಬಂದಿದೆ. ಬಂಟ್ಚಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

    ಪ್ರತಿದೂರು: ಇದಾದ ಕೆಲ ಹೊತ್ತಿನ ಬಳಿಕ ಅಧ್ಯಕ್ಷ ಉಮೇಶ್ ಕುಲಾಲ್ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದಸ್ಯ ಜನಾರ್ದನ ಅವರು ತನ್ನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts