More

    ಕ್ಷೇತ್ರದ ಅಭಿವೃದ್ಧಿಗೆ ಜೊಲ್ಲೆ ಕುಟುಂಬ ಬದ್ಧ

    ನಿಪ್ಪಾಣಿ: ಕ್ಷೇತ್ರದ ಅಭಿವದ್ಧಿ ಹಾಗೂ ಜನರ ಒಳಿತಿಗಾಗಿ ಜೊಲ್ಲೆ ಕುಟುಂಬ ಯಾವತ್ತಿಗೂ ಬದ್ಧವಾಗಿದೆ ಎಂದು ಮ್ಯಾಗ್ನಂ ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಹೇಳಿದರು.

    ನಗರದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ವತಿಯಿಂದ 83ನೇ ಜ್ಯೋತಿ ಬಜಾರ್ ಶಾಖೆ ಗುರುವಾರ ಉದ್ಘಾಟಿಸಿ ಮಾತನಾಡಿದರು.

    ಜೊಲ್ಲೆ ಕುಟುಂಬ 12 ವರ್ಷಗಳಿಂದ ಜ್ಯೋತಿಪ್ರಸಾದ ಹುಟ್ಟುಹಬ್ಬದ ನಿಮಿತ್ತ ಪ್ರೇರಣಾ ಉತ್ಸವ ಆಯೋಜಿಸುವುದರ ಉದ್ದೇಶ ಅಂಗವಿಕಲರಿಗೆ ಪ್ರೇರಣೆ, ಪ್ರೋತ್ಸಾಹ ನೀಡುವುದಾಗಿದೆ. ಕುಟುಂಬದಲ್ಲಿ ಯಾರದೆ ಹುಟ್ಟುಹಬ್ಬವಿದ್ದರೂ ಜೊಲ್ಲೆ ಪರಿವಾರ ಜನರೊಂದಿಗೆ ಆಚರಿಸಿಕೊಳ್ಳುವ ಪರಂಪರೆ ಇದೆ. ನಗರದ ಮ್ಯಾಗ್ನಂ ಥಿಯೇಟರ್‌ನಲ್ಲಿ ಒಂದು ಮೆಗಾವಾಟ್ ಸಾಮರ್ಥ್ಯದ ರ್ೂ ಟಾಪ್ ವಿದ್ಯುತ್ ಪ್ರಕಲ್ಪಕ್ಕೆ ಚಾಲನೆ ನೀಡಲಾಗಿದೆ ಎಂದರು.

    ಶಾಖೆ ಉದ್ಘಾಟಿಸಿ ಆಡಿ ಗ್ರಾಮದ ದತ್ತ ದೇವಸ್ಥಾನ ಮಠದ ಪರಮಾತ್ಮರಾಜ ಮಹಾರಾಜರು ಮಾತನಾಡಿ, ಜೊಲ್ಲೆ ಕುಟುಂಬ ದಿನೇದಿನೆ ಬೆಳೆಯುತ್ತ ಹೊರಟಿದೆ. ಆ ಕುಟುಂಬ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಆಶಿಸಿದರು.

    ಜ್ಯೋತಿಪ್ರಸಾದ ಜೊಲ್ಲೆ, ಹಾಲಶುಗರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಗುಂದೇಶಾ, ಜ್ಯೋತಿ ವಿವಿಧ ಉದ್ದೇಶಗಳ ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಭಾವಿ, ಉಪಾಧ್ಯಕ್ಷ ಬಾಬುರಾವ್ ಮಾಳಿ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts