

Bathing : ಉತ್ತರ ಪ್ರದೇಶದ ಫರೂಕಬಾದ್ ಬಿಜೆಪಿ ಸಂಸದ ಮುಖೇಶ್ ರಜಪೂತ್ ಅವರ ಸಹೋದರಿ ರೀನಾ ಸಿಂಗ್, ಅತ್ತೆ ಮಾವನಿಂದ ದೈಹಿಕ ಹಲ್ಲೆ ಹಾಗೂ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರೀನಾ ಸ್ನಾನ ಮಾಡುತ್ತಿದ್ದಾಗ ಸಂಬಂಧಿಕರೊಬ್ಬರು ಚಿತ್ರೀಕರಿಸಲು ಪ್ರಯತ್ನಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿಸಿದೆ ಎಂದು ಪೊಲೀಸರು ದೃಢೀಕರಿಸಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೀನಾ ಸಲ್ಲಿಸಿದ ದೂರಿನ ಮೇರೆಗೆ ಆಕೆಯ ಮಾವ ಲಕ್ಷ್ಮಣ್ ಸಿಂಗ್ ಮತ್ತು ಸೋದರ ಮಾವ ಗಿರೀಶ್, ಭಾನುವಾರ ಆಕೆ ಸ್ನಾನ ಮಾಡುತ್ತಿರುವಾಗ ಕಿಟಕಿಯ ಮೂಲಕ ಆಕೆಯ ವಿಡಿಯೋವನ್ನು ಚಿತ್ರೀಕರಿಸಲು ಪ್ರಯತ್ನಿಸಿದರು. ಈ ಕೃತ್ಯಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆಕೆಯ ಮಾವ ಲಕ್ಷ್ಮಣ್ ಪರವಾನಗಿ ಪಡೆದ ರೈಫಲ್ ಹೊರತೆಗೆದು ಗುಂಡು ಹಾರಿಸುವುದಾಗಿ ಬೆದರಿಸಿ, ಕೋಲಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೇ, ಮತ್ತೊಬ್ಬ ಸೋದರ ಮಾವ ರಾಜೇಶ್ ತನ್ನ ಹರಿತವಾದ ಚಾಕುವನ್ನು ತೆಗೆದು ಹಲ್ಲೆ ನಡೆಸಿ ನನ್ನ ಕೈಗೆ ಗಾಯಮಾಡಿದ್ದಾನೆ ಎಂದು ಹೇಳಿದ್ದಾರೆ.
ರೀನಾ ಅವರ ದೂರಿನ ಆಧಾರದ ಮೇಲೆ ಲಕ್ಷ್ಮಣ್ ರಾಜೇಶ್ ಮತ್ತು ಗಿರಿಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ವಿಷಯದ ಬಗ್ಗೆ ಕಾನೂನಿನ ಪ್ರಕಾರ, ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)