ತಪ್ಪಾದ ಜೀನ್ಸ್ ನಿಮ್ಮ ಲುಕ್ ಹಾಳುಮಾಡಬಹುದು! ನಿಮ್ಮ ಮೈಕಟ್ಟಿಗೆ ತಕ್ಕಂತೆ ಜೀನ್ಸ್ ಆರಿಸುವ ಕಲೆ ಇಲ್ಲಿದೆ Wearing Jeans

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Wearing Jeans: ಇತ್ತೀಚಿನ ದಿನಗಳಲ್ಲಿ ಫ್ಯಾಷನ್​ ಟ್ರೆಂಡ್​ಗಳು ಬಹಳ ಬೇಗನೆ ಬದಲಾಗುತ್ತಿವೆ. ನಾವು ಧರಿಸುವ ಉಡುಗೆಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಆರಾಮದಾಯಕವಾಗಿರಬೇಕೆಂದು ನಾವು ಬಯಸುತ್ತೇವೆ. ಆದಾಗ್ಯೂ, ಆದಷ್ಟು ಜನರು ಜೀನ್ಸ್​ ಧರಿಸಿ ಓಡಾಡಲು ಬಯಸುತ್ತಾರೆ. ಇದನ್ನು ಎಲ್ಲಿ ಬೇಕಾದರು ಧರಿಸಿ ಹೋಗಬಹುದು ಜೊತೆಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡಿರುತ್ತಾರೆ.
ಜೀನ್ಸ್​ಗಳಲ್ಲಿ ಹಲವಾರು ವಿಧಗಳಿವೆ ಅವು ಎಲ್ಲರಿಗೂ ಸೂಕ್ತವಾಗಿರುವುದಿಲ್ಲ. ಅದಕ್ಕಾಗಿ ನಿಮ್ಮ ದೇಹಕ್ಕೆ ಸರಿಹೊಂದುವಂತಹ ಜೀನ್ಸ್​​ ಬಳಸಿದಾಗ ಅದು ದೇಹಕ್ಕೆ ಹೊಂದಿಕೊಳ್ಳುತ್ತದೆ. ಜೊತೆಗೆ ನಿಮ್ಮ ಲುಕ್​ನ್ನು ಇನ್ನಷ್ಟು ಅಂದವಾಗಿಸುತ್ತದೆ. ಹಾಗಿದ್ದರೆ, ಯಾವ ದೇಹವನ್ನು ಹೊಂದಿದವರಿಗೆ ಯಾವ ಜೀನ್ಸ್​ ಸೂಕ್ತ ಎಂಬುದನ್ನು ನಾವಿಂದು ತಿಳಿಸಲಿದ್ದೇವೆ..

1. ಸ್ಕಿನ್ನಿ ಜೀನ್ಸ್

ಸ್ಕಿನ್ನಿ ಜೀನ್ಸ್ ವಿಶೇಷವಾಗಿ ಮರಳು ಗಡಿಯಾರ ಮತ್ತು ತೆಳ್ಳಗಿನ ದೇಹದ ಆಕಾರವನ್ನು ಹೊಂದಿರುವವರು ಇದನ್ನು ಬಳಸುವುದರಿಂದ ಅವರ ದೇಹಕ್ಕೆ ಹೊಂದಿಕೊಳ್ಳುತ್ತದೆ. ಈ ಜೀನ್ಸ್​ ಅವರ ಕಾಲಿನ ಆಕಾರವನ್ನು ಎದ್ದು ಕಾಣುವಂತೆ ಮಾಡುವುದರಿಂದ, ಆಕರ್ಷಕ ನೋಟವನ್ನು ನೀಡುತ್ತದೆ. ಇದನ್ನು ಧರಿಸಿದಾಗ ಎತ್ತರವಿರುವ ಪಾದರಕ್ಷೆಗಳನ್ನು ಬಳಸಿರಿ. ಇದು ಇನ್ನೂ ಹೆಚ್ಚಿನ ಸ್ಟೈಲಿಶ್​ ಲುಕ್​ ನೀಡುತ್ತದೆ.

2. ಸ್ಲಿಮ್ ಫಿಟ್ ಜೀನ್ಸ್

ಸ್ಲಿಮ್ ಫಿಟ್ ಜೀನ್ಸ್ ವಿಶೇಷವಾಗಿ ಅಥ್ಲೆಟಿಕ್ ಅಥವಾ ತೆಳ್ಳಗಿನ ದೇಹವನ್ನು ಹೊಂದಿರುವವರಿಗೆ ಈ ಜೀನ್ಸ್​ ಉತ್ತಮವಾಗಿದೆ. ಇದು ಸೊಂಟದಿಂದ ಪಾದದವರೆಗೆ ತಮ್ಮ ದೇಹದ ಆಕಾರಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಕುಳಿತುಕೊಳ್ಳುವುದರಿಂದ ಇದು ಆರಾಮದಾಯಕವಾಗಿರುತ್ತದೆ. ಸ್ಕಿನ್ನಿ ಜೀನ್ಸ್​ಗಿಂತ ಇದು ಸಡಿಲವಾಗಿರುವುದರಿಂದ ಇದು ವ್ಯಕ್ತಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

3. ನಿಯಮಿತ/ನೇರ ಫಿಟ್ ಜೀನ್ಸ್

ನೇರ ಫಿಟ್ ಜೀನ್ಸ್ ಸಾರ್ವಕಾಲಿಕ ಶ್ರೇಷ್ಠ ಶೈಲಿಯಾಗಿದ್ದು, ಇದು ಎಲ್ಲಾ ರೀತಿಯ ದೇಹದ ಪ್ರಕಾರಗಳಿಗೂ ಇದನ್ನು ಬಳಸಬಹುದಾಗಿದೆ. ವಿಶೇಷವಾಗಿ ದಪ್ಪನೆಯ ಮೈಕಟ್ಟನ್ನು ಹೊಂದಿದ ವ್ಯಕ್ತಿಗಳು, ಸೊಂಟದಿಂದ ಕಾಲಿನವರೆಗೂ ಒಂದೇ ಸಮನಾದ ದೇಹವನ್ನು ಹೊಂದಿದವರಿಗೆ ಈ ಜೀನ್ಸ್ ಸುಂದರವಾಗಿ ಕಾಣಿಸುತ್ತದೆ. ಸರಳ ಮತ್ತು ಸಭ್ಯ ನೋಟವನ್ನು ಇಷ್ಟಪಡುವವರು ಈ ಜೀನ್ಸ್​ ಧರಿಸುವುದು ಸೂಕ್ತವಾಗಿದೆ.

4. ಬ್ಯಾಗಿ/ಲೂಸ್ ಫಿಟ್ ಜೀನ್ಸ್

ಬ್ಯಾಗಿ ಜೀನ್ಸ್ ಇತ್ತೀಚಿನ ದಿನಗಳಲ್ಲಿ ಹೇರಳವಾಗಿ ಧರಿಸುವಂತ ಜೀನ್ಸ್​ ಆಗಿದೆ. ಇದು ಎತ್ತರವಾದ ಮತ್ತು ತೆಳ್ಳಗಿನ ಮೈಕಟ್ಟು ಹೊಂದಿರುವವರು ಧರಿಸಿದರೆ, ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಬ್ಯಾಗಿ ಜೀನ್ಸ್ ಸಡಿಲವಾದ ವಿನ್ಯಾಸ ಹೊಂದಿರುವುದರಿಂದ ದೇಹಕ್ಕೆ ಹೆಚ್ಚಿನ ಗಾತ್ರವನ್ನು ನೀಡುತ್ತದೆ. ಇತ್ತೀಚಿನ 'ಸ್ಟ್ರೀಟ್ ವೇರ್' ಫ್ಯಾಶನ್ ಇಷ್ಟಪಡುವ ಯುವಜನತೆಗೆ ಮತ್ತು ಉಡುಪುಗಳನ್ನು ಧರಿಸಿದಾಗ ಆರಾಮವಾಗಿರಬೇಕೆಂದು ಬಯಸುವವರಿಗೆ ಇದು ತುಂಬಾ ಉಪಯುಕ್ತವಾಗಿದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net