More

    ಜು.15ರೊಳಗಾಗಿ ಹೆಸರು ಬೆಳೆಗೆ ವಿಮಾ ಕಂತು ಪಾವತಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​.

    ಗದಗ:
    ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಾ ಪ್ರಧಾನ ಮಂತ್ರಿ ಸಲ್​ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಮುಂಗಾರು ಹಂಗಾಮಿನ ಹೆಸರು ಬೆಳೆಗೆ ವಿಮಾ ಕಂತನ್ನು ಜು.15ರ ಒಳಗಾಗಿ ಪಾವತಿಸಬೇಕು. ಭತ್ತ, ಜೋಳ, ಮುಸುಕಿನಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಶೇಂಗಾ, ಎಳ್ಳು, ಹತ್ತಿ ಹಾಗೂ ಸಜ್ಜೆ ಬೆಳೆಗಳಿಗೆ ವಿಮಾ ಕಂತು ತುಂಬಲು ಜು.31 ಹಾಗೂ ಸೂರ್ಯಕಾಂತಿ, ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ಆಗಸ್ಟ್​ 16 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಬಜಾಜ ಅಲಿಯಾನ್ಸ್​ ಜನರಲ್​ ಇನ್ಯೂರನ್ಸ್​ ಕಂಪನಿ ಲಿಮಿಟೆಡ್​ ಇವರು ಈ ಮುಂಗಾರು ಹಂಗಾಮಿನ ಬೆಳೆ ವಿಮೆಯ ಅನುಷ್ಠಾನ ಸಂಸ್ಥೆಯಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಿಮೆ ಸಂಸ್ಥೆ, ಬ್ಯಾಂಕ್​, ಸಾರ್ವಜನಿಕ ಸೇವಾಕೇಂದ್ರ, ಗ್ರಾಮ ಒನ್​ ಕೇಂದ್ರ, ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪಕಿರ್ಸಲು ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್​. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts