More

    ಹೆಸರು ಖರೀದಿ ಕೇಂದ್ರದತ್ತ ಸುಳಿಯದ ರೈತರು

    ಲಕ್ಷ್ಮೇಶ್ವರ: ರಾಜ್ಯದಲ್ಲಿ ಬೆಂಬಲ ಬೆಲೆಯಡಿ ಹೆಸರು ಖರೀದಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ 65 ದಿನಗಳು ಕಳೆದರೂ ಒಬ್ಬ ರೈತರೂ ಹೆಸರು ಮಾರಾಟ ಖರೀದಿ ಕೇಂದ್ರದತ್ತ ಮುಖ ಮಾಡದಿರುವುದರಿಂದ ಬೆಂಬಲ ಬೆಲೆ ಘೊಷಣೆ, ಖರೀದಿ ಕೇಂದ್ರ ಉದ್ಘಾಟನೆಗೆ ಮಾತ್ರ ಸೀಮಿತವಾದಂತಾಗಿದೆ.

    ಮುಂಗಾರಿನಲ್ಲಿ ರೈತರು ಬೆಳೆದ ಹೆಸರು ಕಾಳನ್ನು ಪ್ರತಿ ಕ್ವಿಂಟಾಲ್​ಗೆ 7196 ರೂ.ಗಳ ಬೆಂಬಲಬೆಲೆಯಡಿ ಖರೀದಿಸಲು ಸರ್ಕಾರ ಅಧಿಸೂಚನೆ ಹೊರಡಿಸಿ 2020 ಸೆಪ್ಟೆಂಬರ್ 15ರಿಂದಲೇ ಖರೀದಿ ಕೇಂದ್ರ ಪ್ರಾರಂಭಿಸಲು ಸೂಚಿಸಲಾಗಿದೆ. ಈ ಅಧಿಸೂಚನೆ ಪ್ರಕಾರ ಒಟ್ಟು 90 ದಿನಗಳ ಕಾಲ ಈ ಖರೀದಿ ಪ್ರಕ್ರಿಯೆಗೆ ಕಾಲಾವಕಾಶ ನೀಡಿ 30 ದಿನಗಳ ಕಾಲ ನೋಂದಣಿಗೆ ಅಲ್ಲಿಂದ 60 ದಿನಗಳ ಕಾಲ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.

    ಜಿಲ್ಲೆಯಲ್ಲಿನ ಖರೀದಿ ಕೇಂದ್ರಗಳು

    ಗದಗ ತಾಲೂಕಿನ ಗದಗ, ಹಿರೇಹಂದಿಗೋಳ, ಹರ್ತಿ, ಬಳಗಾನೂರ, ಹರ್ಲಾಪುರ, ಶಿರೋಳ, ಕೋಟುಮಚಗಿ, ನೀರಲಗಿ, ಸೊರಟೂರ, ಹೊಂಬಳ, ಶಿರಹಟ್ಟಿ, ಯಳವತ್ತಿ, ಶಿಗ್ಲಿ, ಆಲೂರ, ಬರದೂರ, ಪೇಠಾಲೂರ, ಮುಂಡರಗಿ, ಚಿಕ್ಕನರಗುಂದ, ಸುರಕೋಡ, , ಸಂಕದಾಳ, ಶಿರೋಳ, ಕೊಣ್ಣೂರ, ಹಿರೇಕೊಪ್ಪ, ನರಗುಂದ, ಹೊಸಳ್ಳಿ, ಮಲ್ಲಾಪುರ, ರೋಣ-1, ರೋಣ-2, ಅಬ್ಬಿಗೇರಿ, ಯಾವಗಲ್, ಕೌಜಗೇರಿ, ಬೆಳವಣಿಕೆ, ಗಜೇಂದ್ರಗಡ, ನರೇಗಲ್ಲ ಸೇರಿ 35 ಖರೀದಿ ಕೇಂದ್ರಗಳನ್ನು ಪ್ರಾರಂಸಲಾಗಿತ್ತು. ಪ್ರಾರಂಭದಲ್ಲಿ ಕೆಲ ಕೇಂದ್ರಗಳಲ್ಲಿ ಒಂದಿಷ್ಟು ರೈತರು ನೋಂದಣಿ ಮಾಡಿಸಿದ್ದರೂ ನಂತರ ಯಾರೂ ಮಾರಾಟಕ್ಕೆ ಮುಂದೆ ಬಂದಿಲ್ಲ. ಆದರೆ, ಲಕ್ಷ್ಮೇಶ್ವರ ಎಪಿಎಂಸಿ ಒಂದರಲ್ಲಿಯೇ ಇದುವರೆಗೂ 32 ಸಾವಿರ ಕ್ವಿಂಟಾಲ್ ಹೆಸರು ಮಾರಾಟವಾಗಿದೆ.

    ಸೆ. 15ರಿಂದ ಖರೀದಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ 90 ದಿನಗಳ ಕಾಲಾವಧಿ ನಿಗದಿಪಡಿಸಿದ್ದರೂ ಇದುವರೆಗೂ ಜಿಲ್ಲೆಯಲ್ಲಿನ 35 ಖರೀದಿ ಕೇಂದ್ರಗಳಲ್ಲಿ ಯಾವೊಬ್ಬ ರೈತರು ಹೆಸರು ಮಾರಾಟ ಮಾಡಿಲ್ಲ. ಮುಕ್ತ ಮಾರುಕಟ್ಟೆ ಹೆಸರಿಗೆ ಬೆಂಬಲ ಬೆಲೆಗಿಂತ ಹೆಚ್ಚು ದರವಿರುವುದು ಇದಕ್ಕೆ ಕಾರಣವಾಗಿದೆ.

    ಡಿ.ಬಿ. ಡೊಕ್ಕಣ್ಣವರ ವ್ಯವಸ್ಥಾಪಕ, ಜಿಲ್ಲಾ ಕೆಎಸ್​ಸಿಎಂಎಫ್

    ಆಗಸ್ಟ್​ನಲ್ಲಿಯೇ ಮಾರುಕಟ್ಟೆ ಪ್ರವೇಶಿಸಿದ ಹೆಸರನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ರೈತರೂ ಸೇರಿ ಎಲ್ಲರೂ ಒಕ್ಕೊರಲಿನ ಒತ್ತಾಯ ಮಾಡಿದರೂ ಕ್ಯಾರೇ ಎನ್ನಲಿಲ್ಲ. ನಂತರ ಮುಕ್ತ ಮಾರುಕಟ್ಟೆಯಲ್ಲಿ ಹೆಸರಿಗೆ 8 ಸಾವಿರದಿಂದ 9 ಸಾವಿರ ರೂ. ಬೆಲೆ ಬಂದಾಗ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿದರೆ ಏನೂ ಪ್ರಯೋಜನ. ಅಲ್ಲದೆ, ಒಬ್ಬ ರೈತರಿಂದ ಕೇವಲ 4 ಕ್ವಿಂಟಾಲ್ ಹೆಸರು ಖರೀದಿ ನಿಗದಿ, ರೈತರ ಖಾತೆಗೆ ಹಣ ಜಮೆ ಯಾವಾಗ ಆಗುತ್ತದೆ ಎಂಬ ಭಯದಿಂದ ರೈತರು ಮಾರಾಟಕ್ಕೆ ಮುಂದೆ ಬರಲಿಲ್ಲ. ಸದ್ಯ ಶೇಂಗಾ ಖರೀದಿ ಕೇಂದ್ರದ ಪರಿಸ್ಥಿತಿಯೂ ಇದೇ ಆಗಿದೆ. ಆದ್ದರಿಂದ ಖರೀದಿ ಕೇಂದ್ರಗಳು ಸಕಾಲಿಕವಾಗಿ ಪ್ರಾರಂಭವಾಗಬೇಕು ಮತ್ತು ಬೆಂಬಲ ಬೆಲೆ ದರ ಹೆಚ್ಚಳವಾಗಬೇಕು.

    | ಬಸವರಾಜ ಬೆಂಡಿಗೇರಿ, ಬಾಪೂಗೌಡ ಪಾಟೀಲ, ರೈತರು ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts