More

    ಅನ್ನದಾತರು ಮಣ್ಣಿನ ಫಲವತ್ತತೆ ಬಗ್ಗೆ ಅರಿಯಲಿ- ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ್ ಸಲಹೆ

    ಯಲಬುರ್ಗಾ: ಅನ್ನದಾತರು ಮಣ್ಣಿನ ಫಲವತ್ತತೆಯ ಮಹತ್ವ ಅರಿತು ಬೆಳೆ ಬೆಳೆಯಲು ಮುಂದಾಗಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ್ ಹೇಳಿದರು.

    ಸಮೀಪದ ಮಂಗಳೂರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಮುತ್ತಾಳ ಗ್ರಾಮದಲ್ಲಿ 2020-21ನೇ ಸಾಲಿನ ಆತ್ಮ ಯೋಜನೆಯಡಿ ಮಣ್ಣಿನ ಮಹತ್ವ, ಫಲವತ್ತತೆ ಮತ್ತು ಹಿಂಗಾರು ಹಂಗಾಮಿನ ಕಡಲೆ ಬೆಳೆಯ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ರೈತರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಿಸಾನ್‌ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರೈತರು ಕಡಲೆ ಬೆಳೆಯ ಹೆಚ್ಚಿನ ಇಳುವರಿಗಾಗಿ ಕುಡಿ ಚಿವುಟುವುದರಿಂದ ಕವಲುಗಳು ಜಾಸ್ತಿಯಾಗಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆಯಾಗಬೇಕು ಎಂದರು. ಕೃಷಿ ವಿಸ್ತರಣಾ ಮುಂದಾಳು ನಾಗೇಶ ಜಾನೇಕಲ್, ಕೃಷಿ ಅಧಿಕಾರಿ ಪ್ರತಾಪಗೌಡ ಮಾತನಾಡಿದರು.

    ಕೃಷಿ ಅಧಿಕಾರಿಗಳಾದ ಶಿವಪ್ಪ ಕೊಂಡಗುರಿ, ಶಿವಾನಂದ ಮಳಗಿ, ಆತ್ಮಯೋಜನೆಯ ಶಿವಪ್ಪ ನಾಯಕ, ಯಮನೂರಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚನ್ನಬಸನಗೌಡ, ವೀರೇಶ ಹಳ್ಳಿಕೇರಿ, ಗೂಳೇಶ ಕೊಳಜಿ, ರೈತರಾದ ಸಿದ್ದನಗೌಡ, ವಿರುಪಾಕ್ಷಪ್ಪ ಮಾಳಗೌಡ್ರ, ಸಿದ್ದಪ್ಪ ರ್ಯಾವಣಿಕಿ, ಶಂಕ್ರಪ್ಪ ಕುರಿ, ವೀರನಗೌಡ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts