More

    ಬೆಳೆಗಳಲ್ಲಿ ಕಳೆ ಹೆಚ್ಚಿಸಿದ ಸತತ ಮಳೆಯಿಂದ ರೈತರಲ್ಲಿ ಶುರುವಾಯ್ತು ಆತಂಕ

    ಯಲಬುರ್ಗಾ: ಸತತ ಮಳೆಯಿಂದಾಗಿ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಾನಾ ಗ್ರಾಮಗಳಲ್ಲಿ ಹಳೆಯ ಮನೆಗಳು ಕುಸಿಯಲಾರಂಭಿಸಿವೆ. ಬಿತ್ತಿದ ಬೆಳೆಗಳಲ್ಲಿ ಕಳೆ ಹೆಚ್ಚುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಮಳೆಯಲ್ಲಿಯೇ ಛತ್ರಿ ಹಿಡಿದು, ಮಳೆಅಂಗಿ ಹಾಕಿಕೊಂಡು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ದೃಶ್ಯ ಸಾಮಾನ್ಯವಾಗಿವೆ.

    ಕಳೆದ ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಜ್ಜೆ, ಮೆಕ್ಕೆಜೋಳ ಬೆಳೆಯಲ್ಲಿ ವಿಪರೀತ ಕಸ ಬೆಳೆದಿದೆ. ಕಳೆ ತೆಗೆಸಲು ಮತ್ತು ಎಡೆಕುಂಟೆ ಒಡೆಯಲು ಮಳೆ ಬಿಡುವು ನೀಡುತ್ತಿಲ್ಲ. ಇದರಿಂದ ಬೆಳೆ ಜತೆಗೆ ಕಳೆ ವಿಪರೀತವಾಗಿ ಬೆಳೆದಿದ್ದು, ಬೆಳೆಯನ್ನು ಉಳಿಸಿಕೊಳ್ಳುವ ಚಿಂತೆ ರೈತರನ್ನು ಕಾಡುತ್ತಿದೆ.

    ಇನ್ನು ಮಳೆಯಿಂದಾಗಿ ನಾನಾ ಗ್ರಾಮಗಳಲ್ಲಿ ಮನೆಗಳು ಕುಸಿಯುತ್ತಿವೆ. ಪಟ್ಟಣ ಹಾಗೂ ಮುಧೋಳ ಗ್ರಾಮದಲ್ಲಿ ತಲಾ 2, ಸಂಕನೂರಿನಲ್ಲಿ 1 ಸೇರಿ ಒಟ್ಟು 5 ಮನೆಗಳು ಹಾನಿಯಾಗಿವೆ. ಸ್ಥಳಕ್ಕೆ ಗ್ರಾಮಾಡಳಿತಾಧಿಕಾರಿ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts