More

    ಕೊಪ್ಪದಲ್ಲಿದಲ್ಲಿ ರೈತರ ಪ್ರತಿಭಟನೆ

    ಮದ್ದೂರು: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ ಅನೇಕ ರೈತರ ಕುಟುಂಬಗಳಿಗೆ ಸಕಾಲಕ್ಕೆ ಪರಿಹಾರ ನೀಡುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ಕೊಪ್ಪ ಭಾಗದಲ್ಲಿ ಹೆಚ್ಚಾಗಿರುವ ಚಿರತೆ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಕೊಪ್ಪದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಕೃಷಿ ಇಲಾಖೆ ಸಕಾಲಕ್ಕೆ ಪರಿಹಾರ ನೀಡಿ ಆಸರೆಯಾಗುತ್ತಿತ್ತು. ಇತ್ತೀಚೆಗೆ ಪರಿಹಾರ ನೀಡುವ ಕೆಲಸವನ್ನು ಕೃಷಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಇದರಿಂದ ರೈತರ ಕುಟುಂಬಗಳಿಗೆ ಸಕಾಲಕ್ಕೆ ಪರಿಹಾರ ದೊರೆಯುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳನ್ನು ಪರಿಹಾರ ಕೇಳಲು ಹೋದರೆ ಸಬೂಬು ಹೇಳಿ ಮೃತ ರೈತ ಕುಟುಂಬದವರನ್ನು ಕಚೇರಿಗಳಿಗೆ ಅಲೆದಾಡುಸುತ್ತಿದ್ದಾರೆ ಎಂದು ಆರೋಪಿಸಿದರು.

    ಕೊಪ್ಪ ಭಾಗದಲ್ಲಿ ರೈತರ ಸಾಕುಪ್ರಾಣಿಗಳ ಮೇಲೆ ನಿರಂತರವಾಗಿ ಚಿರತೆಗಳು ದಾಳಿ ನಡೆಸಿ ತಿಂದು ಹಾಕುತ್ತಿವೆ. ಇದರಿಂದ ರೈತರಿಗೆ ಸಾವಿರಾರು ರೂ. ನಷ್ಟವಾಗುತ್ತಿದೆ. ಸಾಕುಪ್ರಾಣಿಗಳನ್ನು ನಂಬಿ ಜೀವನ ನಡೆಸುತ್ತಿರುವ ರೈತರ ಬದುಕು ದುಸ್ತರವಾಗಿದೆ. ತಕ್ಷಣ ಚಿರತೆಗಳನ್ನು ಸೆರೆ ಹಿಡಿಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

    ರೈತ ಸಂಘದ ಮುಖಂಡರಾದ ಕೀಳಘಟ್ಟ ನಜುಂಡಯ್ಯ, ಉಮೇಶ್, ರವಿ, ಜಗದೀಶ್, ಮುಕುಂದ, ರಾಮೇಗೌಡ, ಪುಟ್ಟಸ್ವಾಮಿ, ರವಿ, ರಾಮಯ್ಯ, ಕುಮಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts