More

    ಸೊಪ್ಪಿನಬೆಟ್ಟ ಕುರಿತು ಸ್ಪಷ್ಟನೆ ನೀಡಿ

    ಶೃಂಗೇರಿ: ಸೊಪ್ಪಿನಬೆಟ್ಟ ಕುರಿತು ಸ್ಪಷ್ಟತೆ ಹಾಗೂ ಪರಿಹಾರ ನೀಡವಂತೆ ಆಗ್ರಹಿಸಿ ಶುಕ್ರವಾರ ರೈತರು, ಸಾರ್ವಜನಿಕರು ಮೆಣಸೆ ಅಂಚೆ ಕಚೇರಿ ಎದುರು ಪೋಸ್ಟ್ ಕಾರ್ಡ್ ಅಭಿಯಾನ ನಡೆಸಿದರು.

    ಕೃಷಿಕ ತ್ರಿಮೂರ್ತಿ ಹೊಸ್ತೋಟ ಮಾತನಾಡಿ, ಸೊಪ್ಪಿನಬೆಟ್ಟ ಎಂಬ ಕಾರಣ ನೀಡಿ ತಾಲೂಕಿನಲ್ಲಿ ಮನೆ ಹಕ್ಕುಪತ್ರ ಮತ್ತು ಕೃಷಿ ಸಾಗುವಳಿ ಮಂಜೂರಾತಿ ನೀಡಲು ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿಗೆ ಪೋಸ್ಟ್ ಕಾರ್ಡ್ ಅಭಿಯಾನ ನಡೆಸಲಾಗುತ್ತಿದೆ ಎಂದರು.

    ಕೃಷಿಕ ಜಗದೀಶ್ ಕಣದಮನೆ ಮಾತನಾಡಿ, 2002ರಿಂದ ಈವರೆಗೂ ತಾಲೂಕಿನಲ್ಲಿ ಹಕ್ಕುಪತ್ರ ವಿತರಣೆಯಾಗಿಲ್ಲ. 2014ರ ನಂತರ 94ಸಿ ಅಡಿ ಸಾವಿರಾರು ಜನರು ಅರ್ಜಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಮಂಜೂರಾಗಿಲ್ಲ. ತಾಲೂಕಿನ ಹಲವು ಪ್ರದೇಶಗಳು ಮೀಸಲು ಅರಣ್ಯ ಫೋಷಣೆಯಾಗಿದೆ. ಉಳಿದ ಪ್ರದೇಶವನ್ನು ಸೊಪ್ಪಿನಬೆಟ್ಟ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

    ರೈತ ಸಂಘದ ಜಿ.ಅನಂತಯ್ಯ, ಗ್ರಾಮಸ್ಥರಾದ ಚಂದ್ರಶೇಖರ್, ಮಹಾಬಲ ಶೆಟ್ಟಿ, ಬಸವಣ್ಣ, ಗ್ರಾಪಂ ಮಾಜಿ ಸದಸ್ಯ ಎಂ.ಎಲ್.ಶಿವಶಂಕರ್, ರೈತ ಮುಂಡುಗೋಡು ಶ್ರೀನಿವಾಸ್​ವುೂರ್ತಿ, ಮಲೆನಾಡು ಜನಪರ ಒಕ್ಕೂಟದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts