More

    ಕುಟುಂಬದಲ್ಲಿ ಸತಿ-ಪತಿಗೆ ಸಮಾನ ಸ್ಥಾನ

    ಯಲಬುರ್ಗಾ: ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿದ ಶರಣರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸ್ವಾತಂತ್ರೃ ನೀಡಿ ಸ್ತ್ರೀ ಸಮಾನತೆಗೆ ನಾಂದಿ ಹಾಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಅರ್ಚನಾ ಶಶಿಮಠ ಹೇಳಿದರು.

    ಇದನ್ನೂ ಓದಿ: ವಿಜಯ್ ದೇವರಕೊಂಡ ಜತೆ ಮದುವೆ ಆಗ್ತಿನೆಂದ ರಶ್ಮಿಕಾಗೆ ಕುಟುಂಬಸ್ಥರು ಹೇಳಿದ್ದೇನು ಗೊತ್ತಾ?

    ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಬೆಳಗಾವಿಯಲ್ಲಿ ಜ.27,28ರಂದು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಬಸವ ಪರ ಸಂಘಟನೆಗಳ ಸಹಕಾರದಲ್ಲಿ ನಡೆಯಲಿರುವ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.

    ದೌರ್ಜನ್ಯ ವಿರುದ್ಧ ಧ್ವನಿ ಎತ್ತಿದ ಶರಣರು

    ಸನ್ಯಾಸತ್ವ ತಿರಸ್ಕರಿಸಿ ಕೌಟುಂಬಿಕ ಜೀವನಕ್ಕೆ ಮಹತ್ವ ನೀಡಿದ ಬಸವಾದಿ ಶರಣರು ಕುಟುಂಬದ ದಿನನಿತ್ಯದ ಕಾರ್ಯಗಳಲ್ಲಿ ಸತಿ ಪತಿಗಳಿಗೆ ಸಮಾನ ಸ್ಥಾನ ಕಲ್ಪಿಸಿದರು. ಸನ್ನಿವೇಶದಲ್ಲಿ ಲಿಂಗಾಯತ ಮಹಿಳೆಯರನ್ನು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಭಾಗವಹಿಸಲು ಸಂಘಟಿಸುವುದು ಅಗತ್ಯ ಎಂದರು. ಜಾಗತಿಕ ಲಿಂಗಾಯತ ಧರ್ಮದ ತಾಲೂಕು ಮಹಿಳಾ ಘಟಕ ಹಾಗೂ ಯುವ ಘಟಕಗಳಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

    ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಜಿಲ್ಲಾಧ್ಯಕ್ಷ ಗವೀಶ ಶಶಿಮಠ, ಯುವಘಟಕದ ಜಿಲ್ಲಾಧ್ಯಕ್ಷ ಶೇಖರ ಇಂಗಳದಾಳ, ಯಲಬುರ್ಗಾ ತಾಲೂಕು ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಗಣ್ಯರಾದ ರೇಣುಕಪ್ಪ ಮಂತ್ರಿ, ಬಸವರಾಜ ಹೂಗಾರ, ಹನುಮಗೌಡ ಬಳ್ಳಾರಿ, ಗುಂಡಪ್ಪ ಹಡಪದ, ನಾಗನಗೌಡ ಜಾಲಿಹಾಳ, ಮುದಿಯಪ್ಪ ಮೇಟಿ, ಲೋಕೇಶ ನಾಯ್ಕ, ಶ್ರೀಕಾಂತಗೌಡ ಮಾಲಿಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts