More

    VIDEO: ಶಿಕ್ಷಕರ ಕಾರ್ಯಕ್ಕೆ ವಿಶ್ವ ಚಾಂಪಿಯನ್ ಪಿವಿ ಸಿಂಧು ಶ್ಲಾಘನೆ

    ಹೈದರಾಬಾದ್: ವಿಶ್ವ ಚಾಂಪಿಯನ್ ಪಿವಿ ಸಿಂಧು ಕಳೆದ ಮೂರೂವರೆ ತಿಂಗಳಿಂದ ಮನೆಯಲ್ಲೇ ಲಾಕ್ ಆಗಿದ್ದಾರೆ. ಲಾಕ್ ನಡುವೆಯೂ ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ವೈರಸ್‌ನಿಂದ ಪಾರಾಗಬೇಕು, ಲಾಕ್‌ಡೌನ್‌ನಲ್ಲಿ ಹ್ಯಾಂಡ್ ವಾಷ್ ಚಾಲೆಂಜ್, ಫಿಟ್ನೆಸ್ ಕಾಯ್ದುಕೊಳ್ಳುವುದು ಸೇರಿದಂತೆ ಸಾಮಾಜಿಕ ಚಟುವಟಿಕೆ ಕುರಿತು ಸಕ್ರಿಯವಾಗಿ ಅಭಿಮಾನಿಗಳಿಗೆ ಸಂದೇಶ ನೀಡುತ್ತಿದ್ದಾರೆ. ಇದೀಗ ಲಾಕ್‌ಡೌನ್ ನಡುವೆಯೂ ಆನ್‌ಲೈನ್ ಮೂಲಕ ಪಾಠ ಮಾಡುತ್ತಿರುವ ಶಿಕ್ಷಕರ ಕರ್ತವ್ಯಕ್ಕೆ ಸಿಂಧು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಗೊಂದಲದಲ್ಲಿ ಟಿ20 ವಿಶ್ವಕಪ್-ಐಪಿಎಲ್ ಭವಿಷ್ಯ, ಸಂಕಷ್ಟದಲ್ಲಿ ಸ್ಟಾರ್ ಸ್ಪೋರ್ಟ್ಸ್

    ಕರೊನಾ ವೈರಸ್ ಭೀತಿಯಿಂದಾಗಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸುಳಿವೇ ಇಲ್ಲ. ಇಷ್ಟು ವರ್ಷ ಈಗಾಗಲೇ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದ್ದವು. ಆದರೆ, ಕರೊನಾ ವೈರಸ್ ಅಬ್ಬರ ಎಲ್ಲವನ್ನೂ ಸ್ಥಗಿತಗೊಳಿಸಿದೆ. ಇದರ ಭಾಗವಾಗಿ ಹಲವು ಖಾಸಗಿ ಶಾಲಾ-ಕಾಲೇಜುಗಳು ಆನ್‌ಲೈನ್ ಮೊರೆ ಹೋಗಿವೆ. ಇಂಥ ಸಂಗಿದ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗಾಗಿ ಆನ್‌ಲೈನ್ ಮೂಲಕ ಪಾಠ ಮಾಡುತ್ತಿರುವ ಶಿಕ್ಷಕರಿಗೆ ಸಿಂಧು ಕೃತಜ್ಞತೆ ಅರ್ಪಿಸಿದ್ದಾರೆ. ‘ನನಗೆ ನನ್ನ ಶಿಕ್ಷಕರೇ ಯಾವಾಗಲೂ ಸ್ಫೂರ್ತಿ. ನನ್ನ ಶಾಲಾ-ಕಾಲೇಜು ಶಿಕ್ಷಕರಿಗೆ ಎಂದಿಗೂ ಋಣಿಯಾಗಿರುವೆ. ಮಕ್ಕಳ ಏಳಿಗೆಗಾಗಿ ಶ್ರಮಿಸುವ ಶಿಕ್ಷಕರ ಕಾರ್ಯಕ್ಕೆ ನಾವೆಲ್ಲರೂ ಸೆಲ್ಯೂಟ್ ಹೊಡೆಯಬೇಕು. ಅವರ ಸೇವೆಯನ್ನು ಸದಾ ಸ್ಮರಿಸಬೇಕು’ ಎಂದು ಸಿಂಧು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಹರ್ಭಜನ್‌ಗೆ ನಿಷೇಧ ಹೇರದಂತೆ ಶ್ರೀಶಾಂತ್​ ಬೇಡಿಕೊಂಡಿದ್ದೇಕೆ?

    ನನ್ನ ಸಂಬಂಧಿಯೊಂದಿಗೆ ಮಾತನಾಡುವಾಗ, ಲಾಕ್‌ಡೌನ್‌ನಿಂದ ಹೇಗೆ ಓದುತ್ತಿದ್ದೀಯಾ ಎಂದು ಕೇಳಿದೆ. ಆನ್‌ಲೈನ್ ಕ್ಲಾಸ್‌ಗಳ ಮೂಲಕ ಪಾಠ ಮಾಡುತ್ತಿದ್ದಾರೆ. ಪಠ್ಯಕ್ರಮದಂತೆ ಪಾಠ ಪ್ರವಚನಗಳು ಸಾಗುತ್ತಿವೆ ಎಂದರು. ಇದು ನಿಜಕ್ಕೂ ಉತ್ತಮವಾದ ಕೆಲಸ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts