More

    ವ್ಯಾಪಕ ಪೊಲೀಸ್ ಬಂದೋಬಸ್ತ್

    ಧಾರವಾಡ: ಜಿಲ್ಲೆಯ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ 65 ಗ್ರಾ.ಪಂ.ಗಳಿಗೆ ಡಿ. 22ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಚುನಾಣೆಗಳು ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ನಡೆಯಲು ಅನುಕೂಲವಾಗುವಂತೆ ಅಧಿಕಾರಿ, ಪೊಲೀಸ್ ಪೇದೆಗಳು ಸೇರಿ 725 ಸಿಬ್ಬಂದಿಯನ್ನು ನೇಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಆದೇಶಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾನ ನಡೆಯುವ ಸಾಮಾನ್ಯ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಅನುಸಾರ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಲು ನಾಲ್ವರು ಡಿವೈಎಸ್​ಪಿ, 10 ಸಿಪಿಐ, 17 ಪಿಎಸ್​ಐ, 49 ಎಎಸ್​ಐ, 318 ಹೆಡ್ ಕಾನ್​ಸ್ಟೇಬಲ್, ಕಾನ್​ಸ್ಟೇಬಲ್​ಗಳು, 132 ಹೋಂ ಗಾರ್ಡ್ಸ್ ಮತ್ತು 195 ಜೈಲ್ ವಾರ್ಡನ್​ಗಳನ್ನು ನೇಮಿಸಲಾಗಿದೆ ಎಂದು ಕೃಷ್ಣಕಾಂತ ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಗೆಲ್ಲಲು ವಾಮಾಚಾರ?

    ಕುಂದಗೋಳ: ತಾಲೂಕಿನ ಯಲಿವಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿನ ಗಿಡವೊಂದಕ್ಕೆ ಕೆಂಪು ಬಟ್ಟೆಯಲ್ಲಿ ನಿಂಬೆ ಹಣ್ಣುಗಳನ್ನು ಕಟ್ಟಿದ್ದಾರೆ. ಇದು ಮತಗಟ್ಟೆಯ ಹತ್ತಿರ ಇರುವುದರಿಂದ ಅನೇಕ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶುಕ್ರವಾರ ಬೆಳಗ್ಗೆ ಗ್ರಾಮದ ಶಾಲಾ ಆವರಣದಲ್ಲಿರುವ ಗಿಡದಲ್ಲಿ ನಿಂಬೆಹಣ್ಣು ಕಟ್ಟಿರುವುದನ್ನು ಸಾರ್ವಜನಿಕರು ಗಮನಿಸಿ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಎರಡನೇ ಹಂತದ ಚುನಾವಣೆಗೆ ಪ್ರಚಾರ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲದೆ, ಮತದಾನಕ್ಕೆ 9 ದಿನ ಬಾಕಿ ಇವೆ. ಹೀಗಿರುವಾಗ ವಾಮಾಚಾರ, ಮಾಟಮಂತ್ರಗಳು ಪ್ರಾರಂಭವಾಗಿವೆ ಎಂಬ ಆತಂಕವನ್ನು ಕೆಲ ಅಭ್ಯರ್ಥಿ ಹಾಗೂ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts