More

    ಶೋಷಿತರಿಗೆ ಶಿಕ್ಷಣದ ಮೂಲಕ ರಕ್ಷಣೆ

    ದೇವದುರ್ಗ: ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಸ್ತ್ರೀ ಕುಲಕ್ಕೆ ಆದರ್ಶರಾಗಿದ್ದಾರೆ ಎಂದು ಕೋಲಾರ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚನ್ನನರಸಿಂಹಪ್ಪ ಹೇಳಿದರು.

    ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣ ಕೊಡುವುದೇ ನಿಜವಾದ ದೇವರ ಪೂಜೆ

    ಪಟ್ಟಣದ ಖೇಣೇದ್ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ಸಮತಾ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿಯಲ್ಲಿ ಗುರುವಾರ ಮಾತನಾಡಿದರು.

    ಶೋಷಣೆಗೆ ಒಳಗಾಗುತ್ತಿದ್ದ ಮಹಿಳೆಯರಿಗೆ ಶಿಕ್ಷಣದ ಮೂಲಕ ರಕ್ಷಣೆ ಕೊಡಿಸಲು ಶ್ರಮಿಸಿದರು, ಪ್ರತಿಫಲವಾಗಿ ಸ್ತ್ರೀಯರು ಉನ್ನತ ಶಿಕ್ಷಣ ಪಡೆದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.

    ದೇಶದ ಪ್ರತಿ ಪ್ರಜೆಗೂ ಸಂವಿಧಾನದ ಮೂಲಕ ಶಿಕ್ಷಣ, ಉದ್ಯೋಗ, ಸಮಾನತೆ, ಭದ್ರತೆ, ರಕ್ಷಣೆ, ಆರ್ಥಿಕ ಸಮೃದ್ಧಿ, ಮಹಿಳೆಯರಿಗೆ ಗೌರವ ಹಾಗೂ ಸಾಮಾಜಿಕ ನ್ಯಾಯ ದೊರೆತಿದೆ. ಸಮಾನತೆ ಡಾ.ಬಿ.ಆರ್.ಅಂಬೇಡ್ಕರ್ ಕನಸಾಗಿತ್ತು. ವಿದ್ಯಾರ್ಥಿಗಳ ಹಂತದಲ್ಲೆ ಸಂವಿಧಾನದ ಮಹತ್ವ ತಿಳಿಯಬೇಕೆಂದರು.

    ಸಿಪಿಐ ಎನ್.ವೈ.ಗುಂಡುರಾವ್ ಮಾತನಾಡಿ, ಮಹಿಳೆಯರಿಗೆ ಮನು ಧರ್ಮಶಾಸ್ತ್ರದಲ್ಲಿ ಸ್ವಾತಂತ್ರೃನೀಡಿರಲಿಲ್ಲ, ಆದರೆ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಇದೆ. ಸಮಾನತೆಯ ಬಾಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಪ್ರಭಾವದಿಂದ ದೇಶದಲ್ಲಿ ಸಮೃದ್ಧಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.

    ಶಿಕ್ಷಕಿ ರೇವಮ್ಮ ಸತೀಶ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಶಿಕ್ಷಕಿ ರೇಣುಕಾ, ಯಲ್ಲಮ್ಮ ಮಾಮುನೆಪ್ಪ ಯಾದವ್, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಶಿಕ್ಷಕಿಯರಾದ ಮಂಜುಳಾ, ರೇಣುಕಾ, ಪ್ರತಿಭಾ ಕುಮಾರಿ, ಲಲಿತಾ, ಶ್ವೇತಾ ಹಿರೇಮಠ, ಮೀನಾಕ್ಷಿ, ವಿಜಯಲಕ್ಷ್ಮೀ, ಪ್ರಾಚಾರ್ಯ ಶಿವಲಿಂಗಪ್ಪ ಹಾಳಜಾಡಲದಿನ್ನಿ, ಸಂಸ್ಥೆ ಉಪಾಧ್ಯಕ್ಷೆ ಬೂದೆಮ್ಮ ಬಿ.ಬ್ಯಾಗವಾಟ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts