More

    ಪ್ರಯೋಗಗಳು ಶಿಕ್ಷಣದ ಅವಿಭಾಜ್ಯ ಅಂಗ

    ಗೋಕರ್ಣ: ವಿಜ್ಞಾನದಂತಹ ವಿಷಯಗಳಲ್ಲಿ ಪ್ರಯೋಗ ಮತ್ತು ಪ್ರಯೋಗಾಲಯ ಚಟುವಟಿಕೆಗಳು ಬಹು ಮುಖ್ಯ ಅಂಗಗಳಾಗಿವೆ. ಇವುಗಳು ವಿದ್ಯಾರ್ಥಿಗಳ ಸೃಜಶೀಲತೆ ವೃದ್ಧಿಸಲು ಬಹು ಸಹಕಾರಿಗಳಾಗಿವೆ ಎಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುಲಸಚಿವ ಮತ್ತು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

    ವಿವಿವಿಯ ಸಾರ್ವಭೌಮ ಗುರುಕುಲದಲ್ಲಿನ ನೂತನ ಸ್ಟೆಮ್ ಮಿನಿ-ಲ್ಯಾಬ್ ಉದ್ಘಾಟನೆಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ನಾವು ಕೇಳಿದ ವಿಷಯಗಳಿಗಿಂತ ನೋಡಿದ ವಿಷಯಗಳು ಸುದೀರ್ಘ ಕಾಲ ನೆನಪಿನಲ್ಲಿರುತ್ತವೆ. ಕಾರಣ ವಿದ್ಯಾರ್ಥಿಗಳಿಗೆ ವಿಷಯ ಬೋಧನೆಯಲ್ಲಿ ಪ್ರಯೋಗಗಳು ಕಲಿಸುವ ಶಿಕ್ಷಣ ಹೆಚ್ಚು ಮನದಟ್ಟಾಗುವಂತೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಪ್ರಯೋಗಗಳು ಶಿಕ್ಷಣದ ಅವಿಭಾಜ್ಯ ಅಂಗಗಳಾಗಿವೆ ಎಂದು ಆಶೀರ್ವದಿಸಿದರು.

    ಲ್ಯಾಬ್ ಉದ್ಘಾಟಿಸಿ ವೋಲ್ವೋ ಇಂಡಿಯಾ ಸಂಸ್ಥೆಯ ನಿರ್ದೇಶಕ ಜಿ.ವಿ. ರಾವ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಈ ಪ್ರಮುಖ ವಿಷಯಗಳ ಶಿಕ್ಷಣವನ್ನು ಉತ್ತೇಜಿಸುವ ಸ್ಟೆಮ್ ಮಿನಿ-ಲ್ಯಾಬ್ ವೈಜ್ಞಾನಿಕ ಶೋಧನೆ ಮತ್ತು ನಾವೀನ್ಯತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವೋಲ್ವೋ ಇಂಡಿಯಾ ಉದ್ಯಮ ಸಮೂಹದ ಸಿಎಸ್​ಆರ್ ಟ್ರಸ್ಟ್ ಈ ಪ್ರಯೋಗಾಲಯವನ್ನು ಪ್ರಾಯೋಜಿಸಿದೆ. ಸ್ಟೆಮ್ ಮಿನಿ-ಲ್ಯಾಬ್ ಕಾರ್ಯ ಶ್ಲಾಘನೀಯವಾಗಿದ್ದು, ಇದನ್ನು ವೋಲ್ವೋ ನಿರಂತರ ಬೆಂಬಲಿಸಲಿದೆ ಎಂದು ಭರವಸೆಯಿತ್ತರು. ಪ್ರವೀಣ ಮತ್ತು ತಂಡದವರಿಂದ ವಿದ್ಯಾರ್ಥಿಗಳಿಗೆ ‘ನೀವೇ ಮಾಡಿ ನೋಡಿ’ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ನಡೆಸಲ್ಪಟ್ಟಿತು.

    ವೋಲ್ವೋ ಕಾರ್ಯದರ್ಶಿ ಎಲ್.ಆರ್. ಹೆಗಡೆ, ಸಂಸ್ಥೆಯ ಮಾಧವಿ ರಾವ್, ಸ್ಟೆಮ್ ವ್ಯವಸ್ಥಾಪಕ ನಾಗದೇವ್, ವಿವಿವಿ ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಇತರರಿದ್ದರು. ಅಧ್ಯಾಪಕ ಕಿರಣ ಜೆ. ನಾಯಕ ಸ್ವಾಗತಿಸಿದರು. ಶಿಕ್ಷಕಿ ಅನುಪಮಾ ಜಿ. ಲ್ಯಾಬ್ ಬಳಕೆ ಸಾಧ್ಯತೆ ವಿವರಿಸಿದರು. ಮಾನಸಾ ಆರ್ಯು ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts