More

    ಕುಟುಂಬದಲ್ಲಿ ಮಹಿಳೆ ಗೃಹ ಮಂತ್ರಿಯಿದ್ದಂತೆ

    ಮಾಗಡಿ: ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಮಹಿಳೆಯೂ ಆರ್ಥಿಕ ಮಂತ್ರಿಯಿದ್ದಂತೆ ಎಂದು ಮಾಗಡಿ ಎಸ್​ಬಿಐ ಶಾಖೆ ವ್ಯವಸ್ಥಾಪಕಿ ಹಂಸವಿನೋದಿನಿ ಹೇಳಿದರು.

    ಪಟ್ಟಣದ ಮಾಂಡವ್ಯ ಕಳಂಜಿಯ ಒಕ್ಕೂಟದಲ್ಲಿ ಆಯೋಜಿಸಿದ್ದ 24ನೇ ಧಾನ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತಾನಾಡಿ, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಮನೆಯಲ್ಲಿನ ಮಹಿಳೆಯೂ ಮನೆಯಲ್ಲಿನ ಖರ್ಚು ವೆಚ್ಚವನ್ನು ಸರಿದೂಗಿಸಬೇಕಿದೆ ಎಂದರು.

    ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಾಗೂ ಬ್ಯಾಂಕ್​ಗಳ ಮೂಲಕ ಒದಗಿಸುವ ಸೌಲಭ್ಯ ಸದ್ಬಳಕೆಮಾಡಿಕೊಳ್ಳಬೇಕು, ಅನಕ್ಷರಸ್ಥ ಮಹಿಳೆಯರು ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸುವ ಮೂಲಕ ತಮ್ಮಲಿನ ಅನಕ್ಷರತೆಯನ್ನು ಅಳಿಸಿಕೊಳ್ಳಬೇಕು, ಆರೋಗ್ಯ ವಿಮೆ, ಪಿಎಂಜೆಬಿವೈ, ಪಿಎಂಎಸ್​ಬಿವೈ, ಎಪಿವೈ ಯೋಜನೆಯನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ವಕೀಲೆ ವೆಂಕಟಲಕ್ಷಮ್ಮ ಮಾತನಾಡಿ, ಮಹಿಳೆಗೆ ಜ್ಞಾನವೇ ನಿಜವಾದ ಅಸ್ತ್ರ. ಪ್ರತಿಯೊಬ್ಬ ಮಹಿಳೆಯೂ ವಿದ್ಯವಂತಾರಾದರೇ ಯಾರೂ ಮೋಸಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಆಶಾಕಾರ್ಯಕರ್ತೆಯರಾದ ಪುಷ್ಪಲತಾ, ಗಂಗಾಬಿಕೆ, ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಧಾನ್ ಸಿಬ್ಬಂದಿ ಕಮಲ, ವಕೀಲೆ ವೆಂಕಟಲಕ್ಷ್ಮೀ , ಮಾಂಡವ್ಯ ಕಳಂಜಿಯಂ ಒಕ್ಕೂಟದ ಕಾರ್ಯಕರ್ತರಾದ ಗಂಗಮ್ಮ, ರಾಜಮ್ಮ, ಶಶಿಕಲಾ, ವನಜಾಕ್ಷಮ್ಮ, ಗೌರಮ್ಮ, ಸರಸ್ವತಿ, ಮಹದೇವಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts