More

    ಬದುಕಿನ ಪ್ರತಿಕ್ಷಣವೂ ಅತ್ಯಮೂಲ್ಯ

    ರಬಕವಿ/ಬನಹಟ್ಟಿ: ನಮ್ಮ ಬದುಕಿನ ಪ್ರತಿಕ್ಷಣಗಳು ಅತ್ಯಂತ ಬೆಲೆಯುಳ್ಳದಾಗಿದೆ. ಆದ್ದರಿಂದ ಆ ಕ್ಷಣಗಳನ್ನು ನಾವು ಸತ್ಸಂಗಗಳಲ್ಲಿ ಕಳೆಯಬೇಕು ಎಂದು ಮಹಾಲಿಂಗಪುರದ ಸಿದ್ದಾರೂಢ ಮಠದ ಸಹಜಾನಂದ ಸ್ವಾಮೀಜಿ ಹೇಳಿದರು.

    ಬನಹಟ್ಟಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸತ್ಸಂಗದಿಂದ ಭಕ್ತಿ, ಜ್ಞಾನ, ವೈರಾಗ್ಯ ಜಾಗ್ರತವಾಗುತ್ತದೆ. ನಮ್ಮ ಆಯುಷ್ಯವನ್ನು ವೃತಃವ್ಯರ್ಥ ಮಾಡದೆ ಅದನ್ನು ಸ್ವಾರ್ಥಕ ಗೊಳಿಸಬೇಕು. ಸತ್ಸಂಗದಿಂದ ಮನಸ್ಸು ನಿರ್ಮಲವಾಗುತ್ತದೆ ಎಂದರು.

    ಕಂಕನವಾಡಿಯ ಶಿವಾನಂದ ಶರಣರು ಮಾತನಾಡಿ, ಮಹಾತ್ಮರ ಪ್ರವಚನ ಕೇಳುವುದರಿಂದ ಮಾನವ ಜನ್ಮ ಮೋಕ್ಷವಾಗುವುದು. ಹಾಗೂ ಸಿದ್ದರಾಮೇಶ್ವರ ಶರಣರು, ದಾನ ಧರ್ಮ ಪರೋಪಕಾರ ಮಾಡುವುದರಿಂದ ಮನುಷ್ಯನಿಗೆ ಒಳ್ಳೆಯ ಜನ್ಮ ಸದ್ಗತಿ ಪ್ರಾಪ್ತ ವಾಗಲಿದೆ ಎಂದರು.

    ವೈ.ಬಿ. ಕೊರಡೂರ, ಕಲ್ಲಪ್ಪ ಪತ್ತಾರ, ರವಿ ಕೊಣ್ಣೂರ, ಸಂಗಣ್ಣ ಬಾವಲತ್ತಿ, ಶಿವಾನಂದ ಕೊಳಕಿ, ಪ್ರಕಾಶ ಬುರುಡ, ಗುರುದೇವ ಹಣಗಂಡಿ, ಸಂಗಣ್ಣ ಸರೂರ, ರಮೇಶ ಕೊಣ್ಣೂರ, ಶೇಖರ ಕೋಕಟನೂರ, ಮಹಾನಿಂಗ ಶೀಲವಂತ, ಚನ್ನಬಸಯ್ಯ ಪೂಜಾರಿ, ಸದಾಶಿವ ಜಮಖಂಡಿ, ಶೈಲಾ ನುಚ್ಚಿ, ಮಹಾನಂದ ಕುಳ್ಳಿ, ಕಾವೇರಿ ಕಮತಗಿ, ಮಹಾದೇವಿ ಸುಟ್ಟಟ್ಟಿ, ಶಾಂತಾ ಗಸ್ತಿ, ಮಹಾನಂದ ಕೊಣ್ಣೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts