More

    ಕನ್ನಡ ವಿವಿಗೆ ಗಾಯದ ಮೇಲೆ ಬರೆ

    * ೫೦.೪೯ ಲಕ್ಷ ರೂ. ತೆರಿಗೆ ಪಾವತಿಗೆ ಪುರಸಭೆ ನೋಟಿಸ್
    * ಸಿಬ್ಬಂದಿ ವೇತನದಲ್ಲಿ ಕಡಿತವಾದ ಎಚ್‌ಆರ್‌ಎ ಹಣ ಎಲ್ಲಿ?

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಇಲ್ಲಿನ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೀಗ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ವಿವಿಯ ವಸತಿ ಗೃಹಗಳಿಗೆ ಸಂಬAಧಿಸಿ ಬಾಕಿ ಇರುವ ೫೦.೪೯ ಲಕ್ಷ ರೂ. ಆಸ್ತಿ, ನೀರಿನ ತೆರಿಗೆ ಪಾವತಿಗೆ ಕಮಲಾಪುರ ಪುರಸಭೆ ನೋಟಿಸ್ ಜಾರಿಗೊಳಿಸಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದೆಡೆ ಇಷ್ಟು ವರ್ಷಗಳ ಕಾಲ ಸಿಬ್ಬಂದಿ ವೇತನದಲ್ಲಿ ಕಡಿತವಾದ ಎಚ್‌ಆರ್‌ಎ ಹಣ ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.

    ಕಳೆದ ಎರಡು ವರ್ಷಗಳಿಂದ ಹಣಕಾಸಿನ ತೊಂದರೆ, ಆರ್ಥಿಕ ಅಶಿಸ್ತು, ಅಕ್ರಮ, ಸಿಬ್ಬಂದಿ ವೇತನ ವಿಳಂಬ, ವಿದ್ಯುತ್ ಬಾಕಿಯಿಂದಲೇ ಕನ್ನಡ ವಿಶ್ವವಿದ್ಯಾಲಯ ಹೆಚ್ಚು ಸುದ್ದಿಯಾಗುತ್ತಿದೆ. ಈ ಪಟ್ಟಿಗೆ ಇದೀಗ ಕಮಲಾಪುರ ಪುರಸಭೆ ಆಸ್ತಿ ತೆರಿಗೆ ಪಾವತಿಸುವಂತೆ ಜಾರಿಗೊಳಿಸಿ ರುವ ನೋಟಿಸ್ ಹೊಸದಾಗಿ ಸೇರ್ಪಡೆಯಾಗಿದೆ.

    ಕಮಲಾಪುರ ಪುರಸಭೆ ವ್ಯಾಪ್ತಿಯ ಸುಮಾರು ೩೦೦ ಎಕರೆ ಪ್ರದೇಶದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕಳೆದ ೨೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕಾರ್ಯಸೌಧ, ವಿವಿಧ ಸಂಶೋಧನಾ ಪೀಠಗಳು, ಸ್ನಾತಕೋತ್ತರ ತರಗತಿಗಳು, ವಿದ್ಯಾರ್ಥಿ ನಿಲಯಗಳು, ಗ್ರಂಥಾಲಯ ಗಳಿಗೆ ಸ್ಥಳೀಯ ಸಂಸ್ಥೆಯಿAದ ಕಟ್ಟಡ ಪರವಾನಗಿ ಹಾಗೂ ಆಸ್ತಿ ತೆರಿಗೆ ಕಟ್ಟುವ ಅಗತ್ಯವಿಲ್ಲ. ಆದರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಸತಿ ಗೃಹಗಳು ೧೯೬೪ರ ಕರ್ನಾಟಕ ಪೌರ ಆಡಳಿತ ಅಧಿನಿಯಮ ೧/೪ರ ಅಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಕಳೆದ ೯ ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಈ ಪೈಕಿ ಆಸ್ತಿ ತೆರಿಗೆ ೨೬.೯೧ ಲಕ್ಷ ರೂ., ನೀರಿನ ಕರ ೨.೦೯ ಲಕ್ಷ ರೂ., ಉಪಕರ ೮.೪೨ ಲಕ್ಷ ರೂ., ದಂಡ ೧೨.೯೯ ಲಕ್ಷ ರೂ. ಸೇರದಿಂತೆ ಒಟ್ಟಾರೆ ೫೦.೪೯ ಲಕ್ಷ ರೂ. ಆಸ್ತಿ ತೆರಿಗೆ ಭರಿಸಬೇಕಿದೆ.

    ಕನ್ನಡ ವಿವಿಗೆ ಗಾಯದ ಮೇಲೆ ಬರೆ

    ಸೌಲಭ್ಯ ನೀಡದೇ, ತೆರಿಗೆ ಕೇಳುವ ಜಾಣ್ಮೆ!
    ತಾಲೂಕಿನ ಕಮಲಾಪುರ ಹೊರವಲಯದಲ್ಲಿರುವ ಕನ್ನಡ ವಿಶ್ವವಿದ್ಯಾಲಯ ಕ್ಯಾಂಪಸ್ ಹೆಬ್ಭಾಗಿಲು ಸಮೀಪದಲ್ಲಿ ಬೋಧಕೇತರ ಸಿಬ್ಬಂದಿಯ ೩೨ ಹಾಗೂ ಕ್ಯಾಂಪಸ್ ಒಳ ಭಾಗದಲ್ಲಿ ೧೦-೧೨ ಸೇರಿದಂತೆ ಅಂದಾಜು ೫೦ ವಸತಿ ಗೃಹಗಳಿವೆ. ಕ್ಯಾಂಪಸ್ ಒಳಭಾಗದಲ್ಲಿರುವ ಬೋಧಕರ ಕ್ವಾಟ್ರಸ್‌ಗೆ ವಿವಿಯಿಂದಲೇ ನೀರು ಸರಬರಾಜಾಗುತ್ತದೆ. ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳನ್ನು ನಿರ್ವಹಿಸಲಾಗುತ್ತದೆ.
    ಆದರೆ, ಬೇಧಕೇತರ ಸಿಬ್ಬಂದಿಯ ವಸತಿ ಗೃಹಗಳಿಗೆ ಕುಡಿಯುವ ನೀರು ಪೂರೈಕೆ ಬಿಟ್ಟರೆ, ರಸ್ತೆ ನಿರ್ಮಾಣ, ಸ್ವಚ್ಛತೆ, ಮನೆಯಿಂದ ಕಸ ಸಂಗ್ರಹ ಸೇರಿದಂತೆ ಪುರಸಭೆ ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ. ನಿಗದಿತ ಸೌಲಭ್ಯ, ಸೇವೆಗಳನ್ನು ಒದಗಿಸದೇ ೫೦.೪೯ ಲಕ್ಷ ರೂ. ತೆರಿಗೆ ಪಾವತಿಗೆ ಸೂಚಿಸುವ ಪುರಸಭೆ ಜಾಣ್ಮೆಗೆ ಕನ್ನಡ ವಿವಿ ಅಧಿಕಾರಿಗಳಿಂದ ಬೇಸರ ವ್ಯಕ್ತವಾಗುತ್ತಿದೆ.

    ಎಚ್‌ಆರ್‌ಎ ಹಣ ಎಲ್ಲಿ?
    ಸರ್ಕಾರಿ ಹಾಗೂ ಸ್ವಾಯತ್ಥೆ ಸಂಸ್ಥೆಯ ನೌಕರರಿಗೆ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ) ನೀಡಲಾಗುತ್ತದೆ. ಆದರೆ, ನೌಕರರು ತನ್ನದೇ ವಸತಿ ಗೃಹದಲ್ಲಿ ವಾಸವಿದ್ದರೆ, ಮನೆ ಬಾಡಿಗೆ ಭತ್ಯೆಯನ್ನು ಕಡಿತಗೊಳಿಸಲಾಗುತ್ತದೆ. ಈ ಹಿಂದೆ ಎಚ್‌ಎಆರ್ ಹಣವನ್ನು ಕಮಲಾಪುರ ಪಟ್ಟಣ ಪಂಚಾಯಿತಿಗೆ ನೀರು ಮತ್ತು ಆಸ್ತಿಗೆ ತೆರಿಗೆ ಹಣ ಪಾವತಿಸುತ್ತಿತ್ತು. ಆದರೆ, ೨೦೧೬ ರಿಂದ ಬಾಕಿ ಉಳಿಸಿಕೊಂಡಿದ್ದು, ಎಚ್‌ಆರ್‌ಎ ಹಣ ಎಲ್ಲಿ ಎಂಬ ಪ್ರಶ್ನೆಗೆ ಆರ್ಥಿಕ ಅಶಿಸ್ತಿನತ್ತ ಬೊಟ್ಟು ತೋರುತ್ತಿದೆ.

    ಕವಿವಿಯಲ್ಲಿ ಸಿಬ್ಬಂದಿಯ ಎಚ್‌ಆರ್‌ಎ ನಿರ್ವಹಣೆಗೆ ಪ್ರತ್ಯೇಕ ಅಕೌಂಟ್ ನಿರ್ವಹಿಸಿಲ್ಲ. ಸಾಮಾನ್ಯ ನಿಧಿಯೊಂದಿಗೆ ಅದು ಬೆರತು ಇತರೆ ಉದ್ದೇಶಗಳಿಗೆ ಬಳಕೆಯಾಗಿದೆ. ಇತ್ತೀಚೆಗೆ ಜಿ.ಪಂ. ನಿಂದ ವಿತ್ತ ಅಧಿಕಾರಿ ನಿಯೋಜನೆಗೊಂಡಿದ್ದು, ಇನ್ಮುಂದೆ ಪ್ರತ್ಯೇಕ ಖಾತೆಗಳನ್ನು ಸೃಷ್ಟಿಸಿ, ಆರ್ಥಿಕ ಶಿಸ್ತು ತರುವ ಪ್ರಯತ್ನಗಳು ನಡೆಯುತ್ತಿವೆ ಎನ್ನುತ್ತಾರೆ ನಿಕಟಪೂರ್ವ ಕುಲಸಚಿವ ಡಾ.ಸುಬ್ಬಣ್ಣ ರೈ.

    ಕನ್ನಡ ವಿವಿಗೆ ಗಾಯದ ಮೇಲೆ ಬರೆ

    ಆಸ್ತಿ, ನೀರಿನ ತೆರಿಗೆ ಪಾವತಿಸುವಂತೆ ಸೂಚಿಸಿ ಆಗಾಗ ಪತ್ರ ಬರೆಯಲಾಗಿದೆ. ಅದರಂತೆ ಕಳೆದ ಸೆ.೨೬ ರಂದು ಮತ್ತೊಮ್ಮೆ ನೋಟಿಸ್ ನೀಡಿದ್ದೇವೆ. ಆದರೆ, ತೆರಿಗೆ ಕಟ್ಟುವ ಸಮಯದಲ್ಲಿ ಸೌಲಭ್ಯಗಳನ್ನು ಪ್ರಶ್ನಿಸುವುದು ತರವಲ್ಲ. ನಮ್ಮಿಂದಲೂ ಲೋಪವಾಗಿರಬಹುದು. ಈಗಲೂ ಅವರಿಗೆ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರೆ, ಆಧ್ಯತೆ ಮೇರೆಗೆ ರಸ್ತೆ, ಚರಂಡಿ, ಬೀದಿ ದೀಪ ಅಳವಡಿಕೆಗೆ ಕ್ರಮ ವಹಿಸುತ್ತೇವೆ.

    – ಮಹಾಂತೇಶ್ ಎಚ್.ಬೀಳಗಿ, ಪುರಸಭೆ ಮುಖ್ಯಾಧಿಕಾರಿ.

    ಕನ್ನಡ ವಿವಿಗೆ ಗಾಯದ ಮೇಲೆ ಬರೆ

    ಕನ್ನಡ ವಿವಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಈ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈಗ ಪುರಸಭೆಗೂ ಸುಮಾರು ಅರ್ಧ ಕೋಟಿ ರೂ. ತೆರಿಗೆ ಪಾವತಿಸಬೇಕಿದೆ. ಈ ಬಗ್ಗೆ ಸರ್ಕಾರ ಸ್ಪಂದಿಸಿದರೆ, ಅನುಕೂಲವಾಗುತ್ತದೆ.

    – ಡಾ.ಪರಮಶಿವಮೂರ್ತಿ, ಕನ್ನಡ ವಿವಿ ಕುಲಪತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts