More

    ರಾಜ್ಯ ಪರಿಸರ ಪ್ರಶಸ್ತಿಗೆ ಅರ್ಜಿ ಆಹ್ವಾನ

    ಮಂಗಳೂರು: ರಾಜ್ಯ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖಾ ವತಿಯಿಂದ 2022-23ನೇ ಸಾಲಿನ ಪರಿಸರ ಪ್ರಶಸ್ತಿಗೆ ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಗಾಗಿ ಗಣನೀಯ ಸೇವೆ ಸಲ್ಲಿಸಿದವರು ಹಾಗೂ ಸಂಸ್ಥೆಗಳನ್ನು ಗುರುತಿಸಲು ಅರ್ಜಿ, ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

    ಈ ಪ್ರಶಸ್ತಿಗಳನ್ನು ಮಲೆನಾಡು ಮತ್ತು ಕರಾವಳಿ ವಲಯ, ದಕ್ಷಿಣ ವಲಯ ಮತ್ತು ಉತ್ತರ ವಲಯಗಳಲ್ಲಿ ತಲಾ ಒಬ್ಬರು ಮತ್ತು ಒಂದು ಸಂಸ್ಥೆಗೆ ನೀಡಲಾಗುವುದು. ಸಾಧಕರ/ಸಂಸ್ಥೆಯ ಹೆಸರು ವ್ಯವಹರಿಸಬೇಕಾದ ವಿಳಾಸ, ನಿರ್ವಹಿಸಲಾದ ಕಾರ್ಯ ಕುರಿತಾಗಿ ಪೂರಕ ದಾಖಲೆಗಳೊಂದಿಗೆ ವಿವರ, ಪರಿಸರ ಸಂರಕ್ಷಣೆಗಾಗಿ ನಿರ್ವಹಿಸಲಾಗಿರುವ ಕಾರ್ಯದ ಅವಧಿ ಮತ್ತು ಸಾಧನೆ, ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿನಿಯೋಗಿಸಲಾಗಿರುವ ಹಣ ಮತ್ತು ಆರ್ಥಿಕ ಸಹಾಯದ ಮೂಲಗಳು, ಪಡೆದಿರುವ ಪ್ರಶಸ್ತಿಗಳ ವಿವರ ಮತ್ತು ಸಾಕ್ಷಿ ಆಧಾರಗಳೊಂದಿಗೆ ಅರ್ಜಿಯನ್ನು ಪ್ರಾದೇಶಿಕ ನಿರ್ದೇಶಕರು(ಪರಿಸರ), 3ನೇ ಮಹಡಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಟ್ಟಡ, ಮಂಗಳೂರು ಈ ಕಚೇರಿಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ:0824-2450250 ಸಂಪರ್ಕಿಸುವಂತೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts