More

    ಪರಿಸರ ಸೂಕ್ಷ್ಮ ವಲಯದ ಬಗ್ಗೆ ಅನಗತ್ಯ ಭಯ, ಗೊಂದಲ ನಿರ್ಮಾಣ

    ಬಾಳೆಹೊನ್ನೂರು: ಪರಿಸರ ಸೂಕ್ಷ್ಮ ವಲಯದ ಕುರಿತು ಜಿಲ್ಲೆಯಲ್ಲಿ ಅನಗತ್ಯ ಭಯ, ಗೊಂದಲ ನಿರ್ವಣವಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಯಾವುದೇ ಹೊಸದಾದ ನೋಟಿಫಿಕೇಶನ್ ಅಥವಾ ಬಫರ್ ಜೋನ್ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.

    ಖಾಂಡ್ಯ ಹೋಬಳಿ ಅಂಡವಾನೆ ಗದ್ದೆಮನೆಯಲ್ಲಿ ಪ್ರವಾಹದಲ್ಲಿ ಮುಳುಗಿ ಮೃತಪಟ್ಟ ಶಂಕರ್ ಕುಟುಂಬಕ್ಕೆ ಮಂಗಳವಾರ 5 ಲಕ್ಷ ರೂ. ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಗೋವಾ ಫೌಂಡೇಶನ್ 2006ರಲ್ಲಿ ಹಾಕಿದ ಕೇಸ್ ಆಧರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಪರಿಸರ ಸೂಕ್ಷ್ಮ ವಲಯ ಪ್ರದೇಶ ಘೋಷಿಸಿ ಅದರಿಂದ 10 ಕಿಮೀ ವ್ಯಾಪ್ತಿಯಲ್ಲಿ ಬಫರ್​ಜೋನ್ ಘೊಷಣೆ ಮಾಡಿದಲ್ಲಿ ವನ್ಯಜೀವಿ, ಅಭಯಾರಣ್ಯಗಳಲ್ಲಿ ಇರುವಂತೆ ಕಾನೂನುಗಳು ಮಾರ್ಪಡುತ್ತವೆ. ಇದರಿಂದ ವ್ಯಾಪ್ತಿ ದೊಡ್ಡದಾಗಲಿದೆ. ಇದರ ಬದಲು ರಾಜ್ಯ ಸರ್ಕಾರಗಳೇ ಬಫರ್ ಜೋನ್ ಗುರುತು ಮಾಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಈ ಸೂಚನೆಯನ್ವಯ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.

    ನನ್ನ ಪ್ರಕಾರ ದೊಡ್ಡ ಕೈಗಾರಿಕೆಗಳು, ಪರಿಸರಕ್ಕೆ ಹಾನಿಯಾಗುವ ರೆಡ್ ಕೆಟಗೆರಿಯ ಕೈಗಾರಿಕೆಗಳು, ವುಡ್ ಇಂಡಸ್ಟ್ರೀಸ್, ಸಾಮಿಲ್​ಗಳು ಇತ್ಯಾದಿಗಳನ್ನು ಹೊಸದಾಗಿ ಮಾಡುವಂತಿಲ್ಲ. ಈಗಾಗಲೇ ಇರುವಂಥವು ಮುಂದುವರಿಯಬಹುದು. ಈ ಪ್ರದೇಶಕ್ಕೆ ಅವುಗಳ ಅವಶ್ಯಕತೆ ಇಲ್ಲ. ಇಲ್ಲಿಯ ಬಹುತೇಕ ಜನ ಕೃಷಿ, ಕೃಷಿ ಅವಲಂಬಿತ ಕಾರ್ವಿುಕರಾಗಿದ್ದಾರೆ. ಅವರಿಗೆ ಇದರಿಂದ ಯಾವುದೆ ತೊಂದರೆಯಾಗುವುದಿಲ್ಲ ಎಂದರು.

    ಯೋಜನೆ ಜಾರಿಯಾದಲ್ಲಿ ವನ್ಯಪ್ರಾಣಿಗಳು ಹಾನಿಗೂ ಸರಳವಾಗಿ ಪರಿಹಾರ ಪಡೆಯಬಹುದು. ಆನೆ ಹಾವಳಿ ತಡೆಗೆ ರೈಲ್ವೆ ಕಂಬಿಗಳನ್ನು ಹಾಕಲು ಅನುದಾನ ಸಿಗಲಿದೆ. ಯೋಜನೆ ಜಾರಿಯಿಂದ ಯಾರದ್ದೇ ಭೂಮಿ ಮಾಲೀಕತ್ವ ಬದಲಾವಣೆ, ಕಂದಾಯ ಭೂಮಿ, ಹಿಡುವಳಿ ಭೂಮಿ ಬದಲಾವಣೆಯಾಗುವುದಿಲ್ಲ. ಗೋಮಾಳ ಇರುವುದು ಯಥಾವತ್ತಾಗಿ ಮುಂದುವರಿಯಲಿದೆ. ಆದ್ದರಿಂದ ಜನರನ್ನು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts