More

    ನಾಟಕದ ಅಭಿರುಚಿ ಸವಿಯಿರಿ

    ಮುಧೋಳ: ಚಿತ್ರದುರ್ಗದ ಸಾಣೆಹಳ್ಳಿಯ ಕಲಾತಂಡ ತನ್ನ ತಂಡದ ರಂಗಕಲಾವಿದರಿಗೆ ತರಬೇತಿ ನೀಡಿ ರಾಜ್ಯಾದ್ಯಂತ ಶಿವಸಂಚಾರ ಎಂಬ ನುಡಿಯಲ್ಲಿ ಸಂಚರಿಸಿ ಜನರಲ್ಲಿ ನಾಟಕದ ಸದಭಿರುಚಿ ಹೆಚ್ಚಿಸುವಲ್ಲಿ ನಿರತವಾಗಿದೆ ಎಂದು ನ್ಯಾಯವಾದಿ ಪ್ರಕಾಶ ವಸ್ತ್ರದ ಹೇಳಿದರು.

    ನಗರದ ರನ್ನ ಸ್ಮಾರಕ ಭವನದಲ್ಲಿ ಚಿತ್ರದುರ್ಗದ ಸಾಣೆಹಳ್ಳಿಯ ಕಲಾತಂಡದಿಂದ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವ ಸಂಚಾರ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ನಗರದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ನಾಟಕದ ಅಭಿರುಚಿಯನ್ನು ಜನತೆ ಸವಿಯಬೇಕು ಎಂದರು. ವೈದ್ಯ ಸಾಹಿತಿ ಡಾ. ಶಿವಾನಂದ ಕುಬಸದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಟಕಗಳು ಜನಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ನಾಟಕದಲ್ಲಿನ ಮೌಲ್ಯಗಳು ಜನರ ಬದುಕನ್ನು ಕಟ್ಟಿಕೊಡುವ ಸ್ತಂಭಗಳಾಗಿವೆ ಎಂದರು.

    ಚಿಂತನಸಿರಿಯ ಪ್ರಧಾನ ಕಾರ್ಯದರ್ಶಿ ರಮೇಶ ಅಣ್ಣಿಗೇರಿ, ಮಹಾದೇವ ಮಡಿವಾಳರ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಉದಯ ವಾಳ್ವೇಕರ, ಸಮೃದ್ಧಿ ಗೆಳೆಯರ ಬಳಗದ ಮಲ್ಲಿಕಾರ್ಜುನ ಸವದಿ, ಕಜಾಪ ಕಾರ್ಯದರ್ಶಿ ರಮೇಶ ಅರಕೇರಿ, ನಿವೃತ್ತ ಯೋಧ ಶ್ರೀಶೈಲ ಪಸಾರ, ಚಂದ್ರಶೇಖರ ದೇಸಾಯಿ, ವಚನ ಸಾಹಿತ್ಯ ಪರಿಷತ್‌ನ ಸಿದ್ದಣ್ಣ ಬಾಡಗಿ ಇತರರಿದ್ದರು.

    ಕಸಾಪ ಅಧ್ಯಕ್ಷ ಆನಂದ ಪೂಜಾರಿ ಸ್ವಾಗತಿಸಿದರು. ಬಳಿಕ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts