More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ಸೂಚನಾಪತ್ರದಲ್ಲಿರುವ ಸೂಚನೆಗಳು ಬಹಳ ಗೊಂದಲಮಯವಾಗಿವೆ.

    The instructions on the booklet are bewildering

    ಪ್ರತಿ ಸಂಜೆ ಮದ್ಯಸೇವನೆಯ ನಂತರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿದ್ದಕ್ಕಾಗಿ ಅವನು ಪಶ್ಚಾತ್ತಾಪಪಡುತ್ತಾನೆ.

    Every evening, after having drinks, he repents for living beyond his means.

    ನನಗಿದು ನೈಜಸ್ಥಿತಿಯ ಬದಲು ಸ್ವಂತ ಅಭಿಪ್ರಾಯದ ಆಧಾರದಲ್ಲಿ ಹೇಳಿದ ಮಾತಿನಂತೆ ಕಾಣುತ್ತದೆ.

    I think it is the biased statement and not the actual fact.

    10 ಲಕ್ಷಕ್ಕೆ ಫ್ಲಾಟ್ ಕೊಳ್ಳುವೆನೆಂದು ಮಾಡಿದ ನನ್ನ ಕೋರಿಕೆಯನ್ನು ಇನ್ನ್ಯಾರೋ 11 ಲಕ್ಷಕ್ಕೆ ಕೋರಿ ಮೆಟ್ಟಿ ಹಾಕಿದರು.

    The bid of Rs.10 lac I made for the flat was trumped by another bid for Rs.11 lac.

    ನನ್ನ ಮಗನಿಗೆ ಕಾರ್ಟೂನ್ ನೋಡುವಾಗ ಕನಿಷ್ಠ 3 ಪೊಟ್ಟಣ ಕುರುಕಲು ತಿಂಡಿಗಳನ್ನು ಖಾಲಿ ಮಾಡಿ ಅಭ್ಯಾಸ.

    My My son tends to binge on minimum 3 packs of crisps while watching cartoons on TV.

    ಒಣಗಲು ಹಗ್ಗದ ಮೇಲೆ ಹಾಕಿದ್ದ ನನ್ನ ಅಂಗಿ ಮತ್ತು ಮೇಲಂಗಿಗಳು ಜೋರಾಗಿ ಬೀಸಿದ ಗಾಳಿ ತುಂಬಿ ಉಬ್ಬಿಕೊಂಡವು.

    The shirts and tops hung on the clothesline billowed in the heavy wind.

    ಅವನ ತುಂಟತನದಿಂದ ಸಿಟ್ಟುಗೊಂಡ ಆಕೆ ಒಂದು ಬೆತ್ತ ತೆಗೆದುಕೊಂಡು ಅವನ ಕುಂಡೆ ಮೇಲೆ ಬಾರಿಸಿದಳು.

    Being angry with his menace, she birched him with a stick of birch.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts