More

    ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ ಈ ಮಹಿಳಾ ಕ್ರಿಕೆಟ್ ತಂಡ..!

    ಲಂಡನ್: ಕರೊನಾ ವೈರಸ್ ಭೀತಿಯಿಂದಾಗಿ ಬಹುತೇಕ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ಹಂತ ಹಂತವಾಗಿ ಕ್ರೀಡೆಗಳು ಪುನರಾರಂಭಗೊಳ್ಳುತ್ತಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಕೆಲ ತಂಡಗಳು ಇಂದಿಗೂ ಹಿಂದೇಟು ಹಾಕುತ್ತಿವೆ. ಇದೀಗ ಪಾಕಿಸ್ತಾನ ಪ್ರವಾಸಕ್ಕೆ ಇಂಗ್ಲೆಂಡ್ ಮಹಿಳಾ ತಂಡ ಸಜ್ಜಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಇಂಗ್ಲೆಂಡ್ ಮಹಿಳಾ ತಂಡ ಪ್ರವಾಸ ಕೈಗೊಳ್ಳುತ್ತಿದೆ.

    ಇದನ್ನೂ ಓದಿ: 14ನೇ ಐಪಿಎಲ್‌ಗೆ ಸಿಎಸ್‌ಕೆ ತಂಡದಿಂದ ಹೊರಬೀಳಲಿರುವ ಆಟಗಾರರು ಯಾರು?, 

    2021ರ ಅಕ್ಟೋಬರ್ ತಿಂಗಳಲ್ಲಿ ಇಂಗ್ಲೆಂಡ್ ಪುರುಷರ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದು ನಿಗದಿಯಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಹಿಳಾ ತಂಡ ಕೂಡ ಪಾಕ್‌ಗೆ ಪ್ರಯಾಣಿಸಲಿದೆ. ಅಕ್ಟೋಬರ್ 14 ಮತ್ತು 15 ರಂದು ಕರಾಚಿಯಲ್ಲಿ ಎರಡು ಟಿ20 ಪಂದ್ಯಗಳನ್ನಾಡಲಿದೆ. ಬಳಿಕ ಕರಾಚಿಯಲ್ಲೇ ಅಕ್ಟೋಬರ್ 18, 20 ಹಾಗೂ 22 ರಂದು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೆಯ ಬಾರಿಗೆ ಎದುರಾಗಿದ್ದವು. ಇಂಗ್ಲೆಂಡ್ ತಂಡ 42 ರನ್‌ಗಳಿಂದ ಜಯ ದಾಖಲಿಸಿತ್ತು.

    ಇದನ್ನೂ ಓದಿ: VIDEO | ಸಿಡ್ನಿಯಲ್ಲಿ ಟೀಮ್​ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಭಾವುಕರಾಗಿದ್ದು ಯಾಕೆ ಗೊತ್ತೇ?

    ಪಾಕಿಸ್ತಾನ-ಇಂಗ್ಲೆಂಡ್ ಮಹಿಳಾ ಸರಣಿಯೂ ಇತರ ತಂಡಗಳಿಗೆ ಮಾದರಿಯಾಗಲಿದೆ. ಇತರ ತಂಡಗಳು ಪಾಕ್ ಪ್ರವಾಸ ಕೈಗೊಳ್ಳಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸೀಮ್ ಖಾನ್ ತಿಳಿಸಿದ್ದಾರೆ.

    PHOTO | ಬೆಂಗಳೂರಿನ ಬಿಲಿಯರ್ಡ್ಸ್ ತಾರೆ ಪಂಕಜ್ ಆಡ್ವಾಣಿ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts